ಆಕ್ಸೆಸರಿ ಪವರ್ ನ ಪವರ್ ಪುಲ್ ಬ್ಲೂ ಬಾರ್ ಕ್ಲಿಪ್ ಸ್ಪೀಕರ್

ಇದರ ಅತಿ ದೊಡ್ಡ ಪ್ರಯೋಜನವೆಂದರೆ 3.5 ಪ್ಲಗ್ ಇರುವ ಎಲ್ಲಾ ಹೆಡ್ ಪೋನ್ ಗಳಿಗೆ ಇದನ್ನು ಅಳವಡಿಸಿಕೊಳ್ಳ ಬಹುದಾಗಿದೆ. ಬ್ಲೂಟೂಥ್ ಅಡಾಪ್ಟರ್ ವಿನ್ಯಾಸ ನೋಡಗರನ್ನು ಸೆಳೆಯುವಂತೆಯಿದೆ. ಇದರಲ್ಲಿ ಹ್ಯಾಂಡ್ಸ್ ಫ್ರೀ ಕಾಲಿಂಗ್ ಸೌಲಭ್ಯ ಕೂಡ ಇದೆ.
ಈ ಬ್ಲೂಬಾರ್ ಕ್ಲಿಪ್ ಅನ್ನು ಬಟ್ಟೆಗೆ ಸುಲಭವಾಗಿ ಸಿಲುಕಿಸಿಕೊಂಡು ಮಾತನಾಡಬಹುದಾಗಿದೆ. ಒಂದು ಸಲ ಬ್ಲೂಟೂಥ್ ವೈರ್ ಲೆಸ್ ಆನ್ನು ಮೀಡಿಯ ಪ್ಲೇಯರ್ ಗೆ ಅಳವಡಿಸಿದರೆ ನಂತರ ಬ್ಲೂಬಾರ್ ನೊಂದಿಗೆ 3.5 ಸಂಪರ್ಕ ದೊರೆಯುವುದು.
ಇದರಲ್ಲಿ ಶಬ್ದವನ್ನು ಹೆಚ್ಚಿಸುವುದು, ಕಡಿಮೆ ಮಾಡುವುದು, ಕರೆ ಸ್ವೀಕರಿಸುವುದು, ನಿರಾಕರಿಸುವುದು ಮುಂತಾದವುಗಳನ್ನು ಹ್ಯಾಂಡ್ ಫ್ರೀ ಸೌಲಭ್ಯ ಬಳಸಿ ಮಾಡಬಹುದಾಗಿದೆ. USB ಕೇಬಲ್ ಸಹಾಯದಿಂದ ಚಾರ್ಜ್ ಸಹ ಮಾಡಬಹುದಾಗಿದೆ. ಹೀಗೆ ಚಾರ್ಜ್ ಮಾಡಿದರೆ ಅದರ ಸಾಮರ್ಥ್ಯ 3 ಗಂಟೆಗಳ ಕಾಲ ಇರುತ್ತದೆ. ಇದರ ಸ್ಟ್ಯಾಂಡ್ ಬೈ ಮೋಡ್ 100 ಗಂಟೆ ಆಗಿದೆ.
ಬ್ಲೂಬಾರ್ ಬ್ಲೂಟೂಥ್ ಅಡಾಪ್ಟರ್ ನಲ್ಲಿ ಗೋ ಗ್ರೋವ್ ಆಡಿOHM ಹಿಯರ್ ಬಡ್ ತುಂಬಾ ಮೃದುವಾಗಿದ್ದು ಮ್ಯುಸಿಕ್ ಮತ್ತು ಕರೆಯನ್ನು ಯಾವುದೆ ಅಡಚಣೆ ಇಲ್ಲದೆ ಕೇಳುವಂತೆ ಮಾಡುತ್ತದೆ. ಇದಕ್ಕೆ 3 ವರ್ಷಗಳ ವಾರಂಟಿಯನ್ನು ಸಹ ನೀಡಲಾಗುತ್ತದೆ.
ಇದರ ಬೆಲೆ ರು.2, 500 ಇದ್ದು ಭಾರಿ ರಿಯಾತಿ ದರದಲ್ಲಿ ರು.1, 400ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದು.


Click it and Unblock the Notifications








