ಟಿವಿಯಲ್ಲೀಗ ಇಂಟರ್ ನೆಟ್ ಸೌಲಭ್ಯ !

Posted By: Staff

ಟಿವಿಯಲ್ಲೀಗ ಇಂಟರ್ ನೆಟ್ ಸೌಲಭ್ಯ !
ಇಂಟರ್ ನೆಟ್ ನೋಡಲು ಬೇರೆ, ಮನರಂಜನೆಗೆ ಬೇರೆ ಅಂತ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವ ಬದಲು ಈಗ ಟಿವಿಯಲ್ಲಿಯೆ ನೆಟ್ ಬ್ರೌಸ್ ಮಾಡಬಹುದಾಗಿದೆ! ವೆಸ್ಟ್ರನ್ ಡಿಜಿಡಲ್ ಕಂಪನಿ HD ಗುಣ ಮಟ್ಟದ ಟಿವಿಯಲ್ಲಿ ಈ ರೀತಿಯ ಸೌಲಭ್ಯವನ್ನು ಪಡೆಯುವ ಹಾಗೆ ಮಾಡಿ ತಾಂತ್ರಿಕ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆಯನ್ನು ನೀಡಿದೆ.

WD ಟಿವಿಯನ್ನು ಇಂಟರ್ ನೆಟ್ ಗೆ ಕನೆಕ್ಟ್ ಮಾಡಿ ಅಥವಾ ವೈರ್ ಲೆಸ್ ಆಗಿ ಇಂಟರ್ ನೆಟ್ ಸೌಲಭ್ಯ ಹೊಂದಬಹುದಾಗಿದೆ. 802.11n ನ ವೈರ್ ಲೆಸ್ ಸಂಪರ್ಕ 1080p ಫುಲ್ ವೀಡಿಯೋ ರೆಸ್ಯೂಲೇಸನ್ ಅನ್ನು ಸಪೋರ್ಟ್ ಮಾಡುತ್ತದೆ.

WD ಟಿವಿಯ ಪ್ರಸ್ತುತ ಬೆಲೆ ರು. 7,999, ಆಗಿದೆ. ಇದನ್ನು ಬಳಕೆದಾರರಿಗೆ ಸುಲಭವಾಗುವಂತೆ ರೂಪಿಸಲಾಗಿದ್ದು ಸಿನಿಮಾ, ಹಾಡು ಅಂತ ಮನರಂಜನೆಯ ಜೊತೆ ಇಂಟರ್ ನೆಟ್ ಸೌಲಭ್ಯ ಕೂಡ ಹೊಂದಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot