ನೋಕಿಯಾ ತಂದಿದೆ ಲೂನಾ ಬ್ಲೂಟೂಥ್ ಹೆಡ್ ಸೆಟ್

ಎನ್ ಎಫ್ ಸಿ (near field communication) ಅಳವಡಿಸಿರುವ ಈ ಹೆಡ್ ಸೆಟ್ ತ್ರಿಕೋನಾಕಾರದಲ್ಲಿದ್ದು, ಏಲಿಯನ್ ರೋಬೊಟ್ ಲುಕ್ ಹೊಂದಿದೆ. ವೃತ್ತಾಕಾರದ ಕರ್ವ್ ಹೊಂದಿರುವ ಈ ಹೆಡ್ ಸೆಟ್ ಗೆ ನೀವು ಆಕರ್ಷಿತಗೊಳ್ಳುವುದು ಗ್ಯಾರಂಟಿ.
ನೋಕಿಯಾ ಲೂನಾ ಎನ್ ಎಫ್ ಸಿ ಹೆಡ್ ಸೆಡ್ ಕ್ಲಾಸಿಕ್ ಕಪ್ಪು, ಬಿಳಿ, ಪಿಂಕ್, ಬ್ಲೂ ಮತ್ತು ಫುಶಿಯಾ ಮುಂತಾದ ಪ್ರಿಯವೆನಿಸುವ ಬಣ್ಣಗಳಲ್ಲಿ ಲಭ್ಯವಿದೆ. ಮನಸ್ಸಿಗೆ ಹಿತವಾದ ಬಣ್ಣ ಆಯ್ಕೆ ಮಾಡುವ ಅವಕಾಶ ನಿಮಗಿದೆ. ಕೇವಲ 5 ಗ್ರಾಂ ತೂಕ ಹೊಂದಿರುವ ಈ ಹೆಡ್ ಸೆಟ್ 2.1 ಬ್ಲೂಟೂಥ್, EDR ಮತ್ತು 1.1 ಹೆಡ್ ಸೆಟ್ ಪ್ರೊಫೈಲ್ ಮತ್ತು 1.5 ಹ್ಯಾಂಡ್ ಫ್ರೀ ಪ್ರೊಫೈಲ್ ಹೊಂದಿದೆ.
ಇನ್ನಿತರ ಎನ್ ಎಫ್ ಸಿ ಸಾಧನಗಳೊಂದಿಗೆ ಸಂಪರ್ಕ ಕಲ್ಪಿಸಲು ಪ್ರೆಸಿಂಗ್ ಸೌಲಭ್ಯವನ್ನು ನೋಕಿಯಾ ಲೂನಾದಲ್ಲಿ ಒದಗಿಸಲಾಗಿದೆ. ಈ ಹೆಡ್ ಸೆಟ್ ಜೊತೆ ಇಯರ್ ಬಡ್ಸ್ ನೀಡಲಾಗಿದ್ದು, ವಾಯ್ಸ್ ಪ್ರಾಂಮ್ಟ್ ತಂತ್ರಜ್ಞಾನ ಒಳಗೊಂಡಿದೆ. ಇದು ಬ್ಯಾಟರಿ ಕಡಿಮೆಯಾದರೆ ಸೂಚನೆ ನೀಡುತ್ತದೆ.
ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಹೆಡ್ ಸೆಟ್ಟನ್ನು 1 ಗಂಟೆ ಚಾರ್ಜ್ ಮಾಡಿದರೆ ಸಾಕು, 8 ಗಂಟೆ ಟಾಕ್ ಟೈಂ ಮತ್ತು 35 ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ. ಗರಿಷ್ಟ 10 ಮೀಟರ್ ಅಂತರದಲ್ಲಿ ಇದರಲ್ಲಿನ ಬ್ಲೂಟೂಥ್ ಕೆಲಸ ನಿರ್ವಹಿಸುತ್ತದೆ. ಈ ನೋಕಿಯಾ ಲೂನಾ ಬೆಲೆ 5, 600 ರು ಎಂದು ಕಂಪನಿ ತಿಳಿಸಿದೆ.


Click it and Unblock the Notifications








