Subscribe to Gizbot

ಐಫ್ರಾಗ್ಜ್ ನ ಹೊಸ ಹೆಡ್ ಸೆಟ್ಸ್ ಗಳ ಭರಾಟೆ

Posted By: Super

ಐಫ್ರಾಗ್ಜ್ ನ ಹೊಸ ಹೆಡ್ ಸೆಟ್ಸ್ ಗಳ ಭರಾಟೆ
ಸಂಗೀತ ಪ್ರಿಯರಿಗಾಗಿ ದಿನಕ್ಕೊಂದರಂತೆ ಹೊಸ ಹೆಡ್ ಸೆಟ್ ಗಳು ಮಾರುಕಟ್ಟೆಗೆ ಬರುತ್ತಿವೆ. ಅದರಲ್ಲೂ ಉತ್ತಮ ಗುಣ ಮಟ್ಟದ ಹೆಡ್ ಸೆಟ್ ಬೇಕು ಎಂದು ಬಯಸುವವರು ಐಫ್ರಾಗ್ಜ್ ಬಿಡುಗಡೆ ಮಾಡಿರುವ ಹೆಡ್ ಸೆಟ್ ಗಳನ್ನು ಸಹ ಆಯ್ಕೆ ಮಾಡಬಹುದಾಗಿದೆ.

ಐಫ್ರಾಗ್ಜ್ ಬಿಡುಗಡೆ ಮಾಡಿರುವ ಹೆಡ್ ಸೆಟ್ ಗಳನ್ನು ಐಫ್ರಾಗ್ಜ್ ಮೊಗಲ್ಸ್ ಮತ್ತು ಐಫ್ರಾಗ್ಜ್ ವೆರೆಟೆಕ್ಸ್ ಎಂದು ಕರೆಯಲಾಗಿದೆ. ಎರಡೂ ಹೆಡ್ ಸೆಟ್ ಗಳು ಗುಣಮಟ್ಟದಲ್ಲಿ ವೈಶಿಷ್ಠ್ಯವಾಗಿದ್ದು ಅವುಗಳ ಲಕ್ಷಣಗಳು ಇಂತಿವೆ.

ಐಫ್ರಾಗ್ಜ್ ಮೊಗಲ್ಸ್ ಗುಣಲಕ್ಷಣಗಳು:

* ಶಬ್ದದ ಕಂಪನಾಂಕ 10-30,000 Hz.
* ಉದ್ದ 1.5 mm
* ಪೋಲ್ಡ್ ಮಾಡಬಹುದಾದ ವಿನ್ಯಾಸ
* ಇದನ್ನು ಐಪೋನ್ ಮತ್ತು ಐಪ್ಯಾಡ್ ಮತ್ತು ಬ್ಲಕ್ ಬರಿಯಲ್ಲಿ ಬಳಸಬಹುದಾಗಿದೆ.

ಐಫ್ರಾಗ್ಜ್ ವೆರೆಟೆಕ್ಸ್ ಗುಣಲಕ್ಷಣಗಳು:

* ಮೇಲಿನ ಹೆಡ್ ಸೆಟ್ ನ ಗುಣಮಟ್ಟದ ಜೊತೆ ಇದು ಮತ್ತಷ್ಟು ಪ್ರಯೋಜನಕಾರಿಯಾಗಿದೆ.
* ಇದು ತುಂಬಾ ಹಗುರವಾಗಿದೆ.
* ಏರೋಫಾಮ್ ಕ್ಯುಸಿನ್ ನಿಂದ ಒಳ್ಳೆಯ ಗ್ರಿಪ್ ನೀಡುತ್ತದೆ.
* ಇದರಲ್ಲಿ ಇನ್ ಲೈನ್ ತಂತ್ರಜ್ಞಾನವನ್ನು ಬಳಸಲಾಗಿದ್ದು ಒಳ್ಳೆಯ ಟ್ಯುನ್ ಅನ್ನು ನೀಡುತ್ತದೆ.

ಬಳಕೆದಾರರ ಕಿವಿಗೆ ಅನುಸಾರವಾಗಿ ಸೈಜ್ ಅನ್ನು ಹೊಂದಿಕೆ ಮಾಡಬಹುದಾಗಿದೆ.

ಈ ಹೆಡ್ ಸೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಐಫ್ರಾಗ್ಜ್ ಮೊಗಲ್ಸ್ ರು.3,500ಗೆ ಹಾಗೂ ಐಫ್ರಾಗ್ಜ್ ವೆರೆಟೆಕ್ಸ್
ರು. 2,500 ದರವನ್ನು ಹೊಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot