Subscribe to Gizbot

ಬ್ಲೂಟೂಥ್ ಹೆಡ್ ಸೆಟ್ ಬೊಂಬಾಟ್ ಆಗಿದೆ

Posted By: Staff

ಬ್ಲೂಟೂಥ್ ಹೆಡ್ ಸೆಟ್ ಬೊಂಬಾಟ್ ಆಗಿದೆ
ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ಬ್ಲೂಟೂಥ್ ದೆ ಕಾರುಬಾರು.ಈಗ ಬ್ಲೂಟೂಥ್ ಹೆಡ್ ಸೆಟ್ ಸರಣಿಯಲ್ಲಿ ಹೊಸ ಹೆಡ್ ಸೆಟ್ಸೌಂಡ್ ID SIX ಮಾರುಕಟ್ಟೆಗೆ ಬಂದಿದೆ.

ಕಪ್ಪು ಮತ್ತು ಕಂದು ಬಣ್ಣದ ಈ ಹೆಡ್ ಸೆಟ್ ನಲ್ಲಿ ಕಾರ್ಬನ್ ಸ್ಮಾರ್ಟ್ ಟಚ್ ಸರ್ ಫೇಸ್ ಹೊಂದಿದೆ. ಇದರಲ್ಲಿ ಬಳಕೆದಾರರು ಬಿಂಗ್ 411, ಗೂಗಲ್ ವಾಯ್ಸ್, ವಾಯ್ಸ್ ಡಯಲ್ ಈ ರೀತಿಯ ಸೌಲಭ್ಯವನ್ನು ಹೊಂದಬಹುದಾಗಿದೆ.

ಇದರಲ್ಲಿರುವ 3 ಮೈಕ್ರೋ ಫೋನ್ ಗಳು ಹೊರಗಿನ ಗದ್ದಲವನ್ನು ತಡೆದು ಸ್ಪಷ್ಟವಾದ ಶಬ್ದವನ್ನು ಉಂಟುಮಾಡುತ್ತದೆ.ಇಯರ್ ಪ್ರಿಂಟ್ 3.0 ಅಪ್ಲಿಕೇಶನ್ ಅನ್ನು ಬ್ಲಾಕ್ ಬರಿ, ಆಂಡ್ರಾಯ್ಡ್, ಐಫೋನ್ ಗಳಿಂದ ಪಡೆದುಕೊಳ್ಳಬಹುದಾಗಿದೆ.

ಅಲ್ಲದೆ ಇದು ಥರ್ಡ್ ಪಾರ್ಟಿ ಅಪ್ಲಿಕೇಶನ್ ವಿಲಿಂಗೊ, ಜೊಟ್ಟ್, ವಾಯ್ಸ್ ಆನ್ ಗೋ ಗೆ ಸಪೋರ್ಟ್ ಮಾಡುತ್ತದೆ.ಇದರಲ್ಲಿ ಮಲ್ಟಿ ಪಾಯಿಂಟ್ A2DP ಯ ಆಕ್ಟೀವ್ ಕನೆಕ್ಟ್ ಬಳಸಿ ಯಾವುದೆ ಬ್ಲೂಟೂಥ್ A2DP ಸಾಧನಕ್ಕೆ ಜೋಡಿಸಬಹುದಾಗಿದೆ.

ಇದನ್ನು ಕೊಳ್ಳ ಬಯಸುವರು ಅಫಿಷಿಯಲ್ ಸೈಟ್ ನಿಂದ ರು. 8, 000ಕ್ಕೆ ಕೊಳ್ಳಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot