ಯುವಕರಿಗಾಗಿ ಹೊಸ ಮಾದರಿಯ ಇನ್ ಇಯರ್ ಫೋನ್
ಇದರ ಬೆಲೆಯೂ ರೂ. 2,499 ಆಗಿದ್ದು, ನೆಕ್ ಬ್ಯಾಂಡ್ ಸ್ಟೈಲಿನಲ್ಲಿದ್ದು, ಅತೀ ಹಗುರವಾಗಿದ್ದು, ಕತ್ತಿನ ಸುತ್ತಲು ಸುತ್ತಿಕೊಳ್ಳಲಿದೆ. ಕರೆಯನ್ನು ಸ್ವೀಕರಿಸಲು ಮತ್ತು ಕರೆ ಮಾಡಲು ಸಹಾಯಕವಾಗುವಂತೆ ವಿನ್ಯಾಸ ಮಾಡಲಾಗಿದೆ.
ಕಂಪ್ಯೂಟರ್ ಎಂಟರ್ಟೆನ್ ಮೆಂಟ್ ಉತ್ಪನ್ನಗಳನ್ನು ತಯಾರು ಮಾಡುವುದರಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಅಮಕೆಟ್ಟಿ ಕಂಪನಿಯೂ ಹೊಸ ಮಾದರಿಯ ಹೆಡ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು ಕಡಿಮೆ ತೂಕದ ಇನ್ ಇಯರ್ ವೈರ್ ಲೈಸ್ ಹೆಡ್ ಫೋನ್ ಆಗಿದೆ.

ಇದರ ಬೆಲೆಯೂ ರೂ. 2,499 ಆಗಿದ್ದು, ನೆಕ್ ಬ್ಯಾಂಡ್ ಸ್ಟೈಲಿನಲ್ಲಿದ್ದು, ಅತೀ ಹಗುರವಾಗಿದ್ದು, ಕತ್ತಿನ ಸುತ್ತಲು ಸುತ್ತಿಕೊಳ್ಳಲಿದೆ. ಕರೆಯನ್ನು ಸ್ವೀಕರಿಸಲು ಮತ್ತು ಕರೆ ಮಾಡಲು ಸಹಾಯಕವಾಗುವಂತೆ ವಿನ್ಯಾಸ ಮಾಡಲಾಗಿದೆ.
ಅದಲ್ಲದೇ ಈ ಹೆಡ್ ಸೆಟ್ ನಲ್ಲಿ ಹೆಚ್ಚಿನ ಗುಣಮಟ್ಟದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ದೀರ್ಘಕಾಲ ಕಾರ್ಯನಿರ್ವಹಿಸುವ ಸಾಮಾರ್ಥ್ಯವನ್ನು ಹೊಂದಿದೆ ಎಂದು ಕಂಪನಿಯೂ ತಿಳಿಸಿದೆ. ಅಲ್ಲದೇ ಈ ಹೆಡ್ ಫೋನ್ ಹಾಕಿಕೊಳ್ಳಲು ಉತ್ತಮವಾಗಿದ್ದು, ಒಳ್ಳೆಯ ಅನುಭವವನ್ನು ನೀಡಲಿದೆ.
ಉತ್ತಮ ಗುಣಮಟ್ಟದ ಪ್ಲಾಸಿಕ್ ಅನ್ನು ಇದರಲ್ಲಿ ಬಳಸಲಾಗಿದ್ದು, ಬಾಳಿಕೆಯೂ ಉತ್ತಮವಾಗಿರಲಿದೆ ಎಂದು ತಿಳಿಸಿದೆ. ಇದಲ್ಲದೇ ಈ ಇಯರ್ ಫೋನಿನಲ್ಲಿ ನಾಯ್ಡ್ ಕಾನ್ಸಲಿಂಗ್ ಟೆಕ್ನಾಲಜಿಯನ್ನು ಅಳವಡಿಲಾಗಿದ್ದು, ಇದು ಹೈ ಕ್ವಾಲಿಟಿ ಸೌಂಡ್ ನೀಡಲಿದೆ.
220mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದ್ದು, ಒಂದೇ ಒಂದು ಚಾರ್ಜ್ ನಲ್ಲಿ 18 ಗಂಟೆಗಳ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ. ಈ ಹೆಡ್ ಫೋನ್ ಅನ್ನು ಜಾಂಗಿಂಗ್ ಮಾಡುವ ಸಂದರ್ಭದಲ್ಲಿ ಜೀಮ್ ನಲ್ಲಿಯೂ ಬಳಕೆ ಮಾಡಬಹುದಾಗಿದ್ದು, ಹೆಡ್ ಫೋನಿನಿಂದ ಯಾವುದೇ ಕಿರಿಕಿರಿಯಾಗುವುದಿಲ್ಲ ಎಂದು ಕಂಪನಿ ಹೇಳಿದೆ.
ಇದನ್ನು ಬ್ಲೂಟೂತ್ ನಿಂದ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಮೊಬೈಲ್ ನೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.


Click it and Unblock the Notifications








