ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್-ಅರೈವಾ ಲಿಯೊ

Posted By:

     ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್-ಅರೈವಾ ಲಿಯೊ

    ಆಫೀಸ್ ಹೋಗುವಾಗ ಅಥವಾ ಬೇರೆ ಎಲ್ಲಿಗಾದರು ಪ್ರಯಾಣಿಸುವಾಗ ಸಂಗೀತ ಕೇಳಿಕೊಂಡು ಹೋಗಬೇಕೆನಿಸುತ್ತದೆ, ಆಗ ವೈರ್ ಇರುವ ಹೆಡ್ ಸೆಟ್ ಬಳಸಿ ಸಂಗೀತವನ್ನು ಕೇಳುತ್ತಾರೆ , ಆದರೆ ಅದು ಸ್ವಲ್ಪ ಆ ರೀತಿ ವೈರ್ ಇರುವುದು ಅಷ್ಟಾಗಿ ಇಷ್ಟಪಡುವುದಿಲ್ಲ. ಅವಸರವಾಗಿ ಬಸ್ ಹತ್ತುವಾಗ ವೈರ್ ಬೇರೆ ಯಾವುದಾದರು ವಸ್ತುವಿಗೆಸಿಕ್ಕಿ ಹಾಕಿಕೊಂಡರೆ ಕಿರಿಕಿರಿ ಅನಿಸುತ್ತದೆ. ಆದಕ್ಕೆ ಇರುವ ಪರಿಹಾರವೆಂದರೆ ಈ ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್.

    ಇಂತಹ ವೈರ್ ಲೆಸ್ ಹೆಡ್ ಸೆಟ್ ಕೊಳ್ಳಬಯಸುವರು ಅರೈವಾದ ಲಿಯೊ ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್ ಕೊಳ್ಳಬಹುದಾಗಿದೆ. ಈ ಹೆಡ್ ಸೆಟ್ ಬಗ್ಗೆ ಹೇಳುವುದಾದರೆ ಇದರಿಂದ ಉತ್ತಮ ಗುಣಮಟ್ಟದ ಸಂಗೀತವನ್ನು ಯಾವುದೆ ಕಿರಿಕಿರಿ ಇಲ್ಲದೆ ಅನುಭವಿಸಬಹುದಾಗಿದೆ.ಈ ಪ್ಯಾಕೇಜ್ ನಲ್ಲಿ 3 ಸೆಟ್ ಇಯರ್ ಬಡ್ಸ್ ಕವರ್  ಸಿಗುತ್ತದೆ. ಅದರಲ್ಲಿ ಎರಡ ಕಿವಿಗೆ ಸರಿಯಾಗಿ ಹೊಂದಿಕೊಂಡು ನಿಲ್ಲುವಂತೆ ರೂಪಿಸಲಾಗಿದೆ. ಇದನ್ನು ಕಿವಿಗೆ ಧರಿಸಿ ಯಾವುದೆ  ತೊಂದರೆ ಇಲ್ಲದೆ ಸಂಗೀತವನ್ನು ಕೇಳಬಹುದಾಗಿದೆ.

    ಇದನ್ನು ಧರಿಸಿ ಇದರ ಮೇಲೆ ಹೆಲ್ಮಟ್ ಅನ್ನು ಧರಿಸಬಹುದಾಗಿದೆ. ಇದರ ಯುನಿಟ್ 3 ಬಟನ್ ಹೊಂದಿದ್ದು , ಅದರ ಕೆಳಗಡೆ ಮೈಕ್ರೊ USB ಪೋರ್ಟ್ ಅಳವಡಿಸಲಾಗಿದೆ. ಒಂದೊಂದು ಬಟನ್ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದನ್ನು ಮುಖ್ಯವಾಗಿ ಈ ಬಟನ್ ಅನ್ನು ಮ್ಯೂಸಿಕ್ ಅನ್ನು ಪ್ಲೇ ಮಾಡಲು ಬಳಸಲಾಗುತ್ತದೆ.

    ಸಂಗೀತವನ್ನು ಕೇಳುತ್ತಿರುವಾಗ ಅದರಲ್ಲಿರುವ + ಮತ್ತು _ ಚಿಹ್ನೆಯನ್ನು ಶಬ್ದವನ್ನು ಅಧಿಕ ಮತ್ತು ಕಡಿಮೆ ಮಾಡಲು ಬಳಸಬಹುದಾಗಿದೆ. 140mAh ಬ್ಯಾಟರಿಯನ್ನು ಅಳವಡಿಸಿರುವ ಈ ಸಾಧನದಲ್ಲಿ 5 ಗಂಟೆಗಳ ಕಾಲ ನಿರಂತರವಾಗಿ ಸಂಗೀತವನ್ನು ಕೇಳಬಹುದಾಗಿದೆ. ಇದನ್ನು ಅರ್ಧ ಗಂಟೆ ಚಾರ್ಜ್ ಮಾಡಿದರೆ ಬ್ಯಾಟರಿ ಫುಲ್ ಆಗುತ್ತದೆ, ಇದರ ಸ್ಟ್ಯಾಂಡ್ ಬೈ ಟೈಮ್ 20 ದಿನಗಳವರೆಗೆ ಇರುತ್ತದೆ.

    ಈ ಬ್ಲೂಟೂಥ್ ಹೆಡ್ ಸೆಟ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರು.3, 500ರಷ್ಟಿದೆ.

    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more