Home
ಸಂಗೀತ

3D ಪವರ್ ಇರುವ ಸ್ಯಾಮ್ ಸಂಗ್ ಆಡಿಯೊ ಪ್ಲೇಯರ್

By Super

3D ಪವರ್ ಇರುವ ಸ್ಯಾಮ್ ಸಂಗ್ ಆಡಿಯೊ ಪ್ಲೇಯರ್
ಆಡಿಯೊ ವಸ್ತುಗಳನ್ನು ತಯಾರಿಸುವ ಕಂಪನಿಗಳಿಗೆ ತಕ್ಕ ಪ್ರತಿ ಸ್ಪರ್ಧೆಯನ್ನು ನೀಡುವಂತೆ ಸ್ಯಾಮ್ ಸಂಗ್ BD C6900 ಅಡಿಯೊ ಸಾಧನವನ್ನು ಬಿಡುಗಡೆ ಮಾಡಿದೆ. ನೋಡಲು ಅತ್ಯಾಕರ್ಷಕವಾಗಿರುವ ಈ ಸಾಧವು ಬಳಕೆದಾರನಿಗೆ ಅತ್ಯುತ್ತಮವಾದ ಮನರಂಜನೆಯನ್ನು ನೀಡುವುದರಲ್ಲಿ ಯಾವುದೆ ಸಂಶಯವಿಲ್ಲ.

ಈ ಅಡಿಯೊ ಪ್ಲೇಯರ್ ಆಕರ್ಷಕವಾದ ಕಪ್ಪು ಬಣ್ಣದಲ್ಲಿದ್ದು 1.7 ಕಿಗ್ರಾಂ ತೂಕವನ್ನು ಹೊಂದಿದ್ದು,16.9 inch x 7.9 inch x 1.7 ಇಂಚಿನ ಡೈಮೆಂಶನ್ ಅನ್ನು ಹೊಂದಿದೆ. ಈ ಸಾಧನದ ತುದಿಯಲ್ಲಿ ಒಂದು ಬಟನ್ ಇದ್ದು ಪ್ಲೇಯರ್ ನಲ್ಲಿ ಹಾಡು ಹಾಕಲು ಮತ್ತು ನಿಲ್ಲಿಸಲು ಬಳಸಬಹುದಾಗಿದೆ. ಇದರ ರಿಮೋಟ್ ಅನ್ನು ಟಿವಿ ರಿಮೋಟ್ ಗೆ ಹೋಲಿಸಿದರೆ ದೊಡ್ಡದಾಗಿದೆ.

ಇದರಲ್ಲಿ ದೊಡ್ಡದಾದ ಐಕಾನ್ಸ್ ನೀಡಲಾಗಿದ್ದು ಇದನ್ನು ಬಳಸಿ ಬಳಕೆದಾರನು ಸಂಗೀತ, ವೀಡಿಯೊ, ಪಿಕ್ಚರ್ ಗಳನ್ನು ಹಾಕಬಹುದಾಗಿದೆ. ಇದು 3D ಸಾಮರ್ಥ್ಯದ ಬ್ಲೂರೇ ಪ್ಲೇಯರ್ ಆಗಿದ್ದು, ಇದರಲ್ಲಿರು ಗ್ಲಾಸ್ 3D ನೋಡುಗರಿಗೆ 3D ಯ ಅನುಭವ್ನು ನೀಡುತ್ತದೆ. ಇದರ ಮೆಮೊರಿ ಸಾಮರ್ಥ್ಯವು 1GB ಇದ್ದು , ಇಷ್ಟು ಜಾಗವು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಸಾಕಾಗುವಷ್ಟು ಇದೆ.

ಅಲ್ಲದೆ USB ಯನ್ನು ಜೋಡಿಸಿ ಸಹ ಮೀಡಿಯಾ ಫೈಲ್ಸ್ ಗಳನ್ನು ಹುಡಕಬಹುದಾಗಿದೆ.ಇದರಲ್ಲಿ ಅಳವಡಿಸಿರುವ ವೈ-ಫೈ ಬಳಸಿ ವರ್ಲ್ಡ್ ವೈಡ್ ವೆಬ್ ನಲ್ಲಿ ದೊರೆಯುವ ಮೀಡಿಯಾಕ್ಕೆ ಸಂಬಂಧ ಪಟ್ಟ ಸಾವಿರಗಟ್ಟಲೆ ಅಂಶಗಳನ್ನು ಹುಡುಕಬಹುದಾಗಿದೆ.

ಇದನ್ನು ಪರ್ಸನಲ್ ಕಂಪ್ಯೂಟರ್ ನಲ್ಲಿ ಬಳಸಿ ಸಹ ಪ್ಲೇ ಮಾಡಬಹುದಾಗಿದೆ. ಇದರಲ್ಲಿ USB2.0 ಆಯಾಮವನ್ನು ಬಳಸಲಾಗಿದೆ. ಇದಕ್ಕೆ ಅಧಿಕ ರೆಸಲ್ಯೂಷನ್ ಇರುವ DTS ಮತ್ತು ಡೋಲ್ ಬೈ ಫಾರ್ಮೇಟ್ ಬೆಂಬಲ ಕೂಡ ಇದೆ.

ಈ ಸಾಧನವು 7.1 ಚಾನಲ್ ವರೆಗಿನ ಔಟ್ ಪುಟ್ ಅನ್ನು ನೀಡುತ್ತದೆ. ಅಲ್ಲದೆ ಇದು HDMI ಔಟ್ ಪುಟ್ ಸಹ ಹೊಂದಿದೆ. ಇದು ಮ್ಯೂಸಿಕ್, ಪಿಕ್ಚರ್ ಮತ್ತು ವೀಡಿಯೊಗೆ ಸಾಮಾನ್ಯವಾಗಿ ಬಳಸುವ MP4, MPEG2, ಮತ್ತು HD JPEG ಯನ್ನು ಸಪೋರ್ಟ್ ಮಾಡುತ್ತದೆ. ಆದರೆ ಈ ಪ್ಲೇಯರ್ ನ ಮಾರುಕಟ್ಟೆ ಬೆಲೆ ಇದುವರೆಗೆ ತಿಳಿದು ಬಂದಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+