ಫ್ಲಿಪ್ ಕಾರ್ಟ್ ನಿಂದ ಕಡಿಮೆ ದರಕ್ಕೆ ಸಂಗೀತ ಡೌನ್ಲೋಡ್

Posted By: Varun
ಫ್ಲಿಪ್ ಕಾರ್ಟ್ ನಿಂದ ಕಡಿಮೆ ದರಕ್ಕೆ ಸಂಗೀತ ಡೌನ್ಲೋಡ್

ಆನ್ಲೈನ್ ಪುಸ್ತಕ ಹಾಗು ಮೊಬೈಲ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್ ಕಾರ್ಟ್.ಕಾಂ ಈಗ ಆನ್ಲೈನ್ ಮ್ಯೂಸಿಕ್ ಡೌನ್ಲೋಡ್ ಸೌಲಭ್ಯ ಹೊರತಂದಿದೆ.

ನೀವು ಅತ್ಯುತ್ತಮ ದರ್ಜೆಯ, ವೈರಸ್ ಫ್ರೀ ಎಂ.ಪಿ-3 ಹಾಡುಗಳನ್ನು ಕೇವಲ 6 ರೂಪಾಯಿ ಬೆಲೆಗೆ ಒಂದು ಹಾಡನ್ನು ಡೌನ್ ಲೋಡ್ ಮಾಡಬಹುದಾಗಿದೆ ಹಾಗು 25 ರೂಪಾಯಿಗೆ ಒಂದು ಆಲ್ಬಮ್ ಖರೀದಿಸಬಹುದು.

ನೀವು ಯಾವುದೇ ಹಾಡನ್ನು ಖರೀದಿಸುವ ಮುನ್ನ ಆ ಹಾಡಿನ 30 ಸೆಕೆಂಡ್ ತುಣುಕನ್ನು ಕೇಳಿ ಇಷ್ಟವಾದರೆ ಮಾತ್ರ ಡೌನ್ಲೋಡ್ ಮಾಡುವ ಅವಕಾಶವೂ ಇದೆ.ಆಡಿಯೋ ಸಿ.ಡಿ ಗಿಂತಲೂ ಕಡಿಮೆ ದರದಲ್ಲಿ ನೀವು ಹಾಡು ಖರೀದಿಸಬಹುದು. ಫ್ಲಿಪ್ ಕಾರ್ಟ್ ನ ಸಂಗ್ರಹಣೆಯಲ್ಲಿ 40 ಭಾರತೀಯ ಮತ್ತು ವಿದೇಶಿ ಭಾಷೆ ಮತ್ತು 28 ಪ್ರಕಾರಗಳ ಸಂಗೀತ ಒಳಗೊಂಡಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot