Home
ಸಂಗೀತ

ಜೀನಿಯಸ್ ಆಪಲ್ ಗೆ ಸ್ಪರ್ಧಿ ಆಗಬಹುದೆ?

ಜೀನಿಯಸ್ ಆಪಲ್ ಗೆ ಸ್ಪರ್ಧಿ ಆಗಬಹುದೆ?

ಸಂಗೀತ ಪ್ರೇಮಿಗಳು ಆಪಲ್ ಮಾಂತ್ರಿಕನ ಬಲೆಗೆ ಬೀಳಲು ಅದಕ್ಕೆ ಕಾರಣ ಅದರ ಅತ್ಯುತ್ತಮವಾದ ಗುಣಮಟ್ಟವಾಗಿದೆ. ಯಾವುದೆ ಸ್ಮಾರ್ಟ್ ಫೋನ್ ಗಳಿರಲಿ, ಟ್ಯಾಬ್ಲೆಟ್ ಗಳಿರಲಿ ಅದಕ್ಕೆ ತನ್ನದೆಯಾದ ಮಿತಿಯನ್ನು ಹೊಂದಿದೆ. ಆದ್ದರಿಂದ ಉತ್ತಮ ಗುಣ ಮಟ್ಟದಲ್ಲಿ ಸಂಗೀತವನ್ನು ಕೇಳಿ ಪ್ರಪಂಚವನ್ನೇ ಮರೆತು ಬಿಡಬೇಕೆಂದು ಬಯಸಿವವರಿಗೆ ಐಪೋಡ್ ಸಹಾಯ ಮಾಡುತ್ತದೆ.

ಜನರಿಗೆ ಇಂತಹ ಅನುಭವವನ್ನು ನೀಡಲು ಆಪಲ್ ಹೊರತುಪಡಿಸಿ ಇನ್ನೂ ಅನೇಕ ಕಂಪನಿಗಳು ಸಂಗೀತ ಸಾಧನಗಳನ್ನು ತಯಾರಿಸುತ್ತಿವೆ. ಅವುಗಳಲ್ಲಿ 'ಜೀನಿಯಸ್' ಕೂಡ ಒಂದು.ಜೀನಿಯಸ್ ಮೊಬೈಲ್ ಮೊಬೈಲ್ ಮತ್ತು ಕಂಪ್ಯೂಟರ್ ಸಾಧನಗಳನ್ನು ತಯಾರಿಸುವಂತಹ ಕಂಪನಿ. ಇದೀಗ ಈ ಕಂಪನಿಯು ಐಫೋನ್ ಸ್ಮಾರ್ಟ್ ಫೋನ್ ಮತ್ತು ಐಪೋಡ್ ಗಳಿಗಾಗಿ ಹೊಸ ಸ್ಪೀಕರ್ ಗಳನ್ನು ತಯಾರಿಸಿದೆ. ಇವುಗಳು ಕೂಡ ಶಬ್ದದ ಗುಣಮಟ್ಟದಲ್ಲಿ ಯಾವುದೆ ದೋಷವನ್ನು ಹೊಂದಿಲ್ಲ.

ಈ ಸ್ಪೀಕರ್ ಗಳಲ್ಲಿ ಎಸ್ ಪಿ-i600 ಅನ್ನು ಐಪ್ಯಾಡ್ ನಲ್ಲಿ ಬಳಸಲು ತಯಾರಿಸಿದ್ದು ಇದನ್ನು ಬಳಸಿ ಸಂಗೀತ ಅಥವಾ ಸಿನಿಮಾ ನೋಡಿದರೆ ಹೋಂ ಸ್ಪೀಕರ್ ಅನುಭವವನ್ನು ನೀಡುವುದು. ಈ ಸ್ಪೀಕರ್ ನಲ್ಲಿ ರಿಮೋಟ್ ಕಂಟ್ರೋಲ್ ಸೌಲಭ್ಯವಿದೆ.

ಮತ್ತೊಂದು ಸ್ಪೀಕರ್ ಎಸ್ ಪಿ -i500 ಅನ್ನು ಐಪೋನ್ ಗಳಲ್ಲಿ ಬಳಸಲು ತಯರಿಸಿದ್ದು ಇದರಿಂದ ಬಳಕೆದಾರರು ಅತ್ಯುತ್ತಮವಾದ ಗುಣಮಟ್ಟದಲ್ಲಿ ಆಡಿಯೊ ಕೇಳಬಹುದು. ಈ ಸ್ಪೀಕರ್ ನಲ್ಲಿ 4 ಬಟನ್ ಇದ್ದು ಹಾಡನ್ನು ಪ್ಲೇ ಮಾಡಲು, ಮ್ಯೂಟ್ ಮಾಡಲು, ಶಬ್ದವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಬಳಸಬಹುದು. ಇದರಲ್ಲಿ ಬಳಕೆದಾರರಿಗೆ ಆಪ್ ಸ್ಟೋರ್ ಬಳಕೆಗೆ ಸೌಲಭ್ಯವನ್ನು ಸಹ ನೀಡಲಾಗಿದೆ. ಇದರಿಂದಾಗಿ ಫ್ರೀ ಅಲಾರಾಂ ಅಪ್ಲಿಕೇಶನ್ ಗಳನ್ನು ಪಡೆಯಬಹುದು.

ಕಪ್ಪು ಬಣ್ಣದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಸ್ಪೀಕರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಎಸ್ ಪಿ-i600 ರು. 3,500 ಮತ್ತು ಎಸ್ ಪಿ -i500 ರು.6,500ಕ್ಕಿಂತ ಅಧಿಕ ಬೆಲೆಯನ್ನು ಹೊಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+