Home
ಸಂಗೀತ

ಆಲ್ಟೆಕ್ ತಂದಿದೆ ಹೊಸ ಐಪಾಡ್ ಡಕ್

By Super
ಆಲ್ಟೆಕ್ ತಂದಿದೆ ಹೊಸ ಐಪಾಡ್ ಡಕ್

ಮಾರುಕಟ್ಟೆಯಲ್ಲಿ ಅನೇಕ ಐಪಾಡ್ ಡಕ್ ಗಳು ಲಭ್ಯವಿದೆ. ಅವುಗಳಲ್ಲಿ ಅನೇಕವು ಹೆಚ್ಚು ಶಬ್ದವನ್ನು ನೀಡುತ್ತದೆ. ಆದರೆ ಅದರಲ್ಲಿನ ಗುಣಮಟ್ಟ ಮ್ತತು ವಿನ್ಯಾಸದಲ್ಲಿ ಸ್ವಲ್ಪ ಕೊರತೆ ಕಂಡುಬರಬಹುದು.

ಆ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಆಲ್ಟೆಕ್ ಲ್ಯಾನ್ಸಿಂಗ್ ಇದೀಗ ನೂತನ ಆಕ್ಟಿವ್ ಡ್ಯೂಅಥವಾ M202 ಎಂಬ ಐಪಾಡ್ ಡಕ್ ಬಿಡುಗಡೆಗೊಳಿಸಿದೆ. ಇನ್ನಿತರ ಡಕ್ ಗಳನ್ನು ಹೋಲಿಸಿದರೆ ಈ ಡಕ್ ನಲ್ಲಿ ಹೆಚ್ಚು ಆಯ್ಕೆಗಳಿವೆ.

ಈ ಸಾಧನವನ್ನು ಮೊದಲು ನೋಡುತ್ತಿದ್ದಂತೆಯೇ ಸೆಳೆಯುವುದು ಅದರ ವಿನ್ಯಾಸ. ಇದರ ವುಡನ್ ಫಿನಿಶಿಂಗ್ ಸಖತ್ ಲುಕ್ ನೀಡುತ್ತದೆ. ವಿನ್ಯಾಸದಲ್ಲಿ ನೂತನವಾಗಿರುವ ಈ ಐಪಾಡ್ ಡಕ್ ನಲ್ಲಿ ನಿಯೋಡೈಮಿಯಮ್ ಡ್ರೈವರ್ಸ್ ಮತ್ತು ಎರಡೆರಡು ಐಪಾಡ್ ಅಥವಾ ಐಫೋನ್ ಇಡಲು ವ್ಯವಸ್ಥೆ ಇದೆ. ಸುಲಭ ಬಳಕೆಗೆಂದು ಇಂಡಿಕೇಟರ್ ಲೈಟ್ಸ್ ಗಳೂ ಇದೆ.

ಈ ಐಪಾಡ್ ಡಕ್ ನಲ್ಲಿ USB ಪೋರ್ಟ್ ಇದೆ. ಆದರೆ ಈ ಪೋರ್ಟ್ ಮೂಲಕ ಸಂಗೀತ ಪ್ಲೈ ಮಾಡಲು ಸಾಧ್ಯವಿಲ್ಲ. ಇದು ಕೇವಲ ಚಾರ್ಜಿಂಗ್ ಉದ್ದೇಶಕ್ಕೆ ಮಾತ್ರವಿದೆ. ಇದರ ರಿಮೋಟ್ ವಿನ್ಯಾಸ ಕೂಡ ಅತ್ಯಾಕರ್ಷಕವಾಗಿದೆ. ವೃತ್ತಾಕಾರದಲ್ಲಿರುವ ರಿಮೋಟ್ ನಲ್ಲಿ ಬಳಕೆಗೆ ಸುಲಭವೆನಿಸುವ ದೊಡ್ಡ ಬಟನ್ ಗಳನ್ನು ನೀಡಲಾಗಿದೆ. ಇದರಲ್ಲಿ ಮ್ಯಾಗ್ನೆಟಿಕ್ ಹೋಲ್ಡರ್ ನೀಡಲಾಗಿದೆ.

ಇದರೊಂದಿಗೆ ಮ್ಯುಸಿಕ್ ಮಿಕ್ಸ್ ಅಪ್ಲಿಕೇಶನ್ ಕೂಡ ಲಭ್ಯವಿದೆ. ಈ ಸಾಧನದಲ್ಲಿ ಅಲಾರ್ಮ್ ಸೌಲಭ್ಯವೂ ಇದೆ. ಉತ್ತಮ ಗುಣಮಟ್ಟದ ಸಂಗೀತವನ್ನು ಒದಗಿಸುವ ಸ್ಪೀಕರ್ ಬೆಲೆಯೂ ಕೈಗೆಟುಕುವಂತಿದೆ.

ಐಪಾಡ್ ಡಕ್ ನಲ್ಲಿ ಆಕ್ಸಿಲರಿ ಇನ್ ಪುಟ್ ಜ್ಯಾಕ್ ಜೊತೆ DC ಪವರ್ ಪೋರ್ಟ್ ನೀಡಲಾಗಿದೆ. ಇದರ ಸಹಾಯದಿಂದ AC/DC ಅಡಾಪ್ಟರ್ ಅನ್ನು ಸಿಸ್ಟಮ್ ಪವರ್ ಗೆ ಬಳಸಬಹುದು. ಇದರಲ್ಲಿರುವ ಬಾಸ್ ಕೂಡ ಹೆಚ್ಚು ಪ್ರಖರತೆ ಹೊಂದಿದ್ದು, ನೀವು ನಿರೀಕ್ಷಿಸಿದ ಸಂಗೀತ ಗುಣಮಟ್ಟವನ್ನು ಈ ಸಾಧನ ನೀಡುವುದರಲ್ಲಿ ಸಂಶಯವಿಲ್ಲ. ಈ M202 ಆಕ್ಟಿವ್ ಡ್ಯೂ 7000ರು ಗೆ ನಿಮಗೆ ಲಭ್ಯವಾಗಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+