ನಿಮ್ಮ ಕಾರಿನಲ್ಲಿ ಡಿ ಜೆ ಅನುಭವಕ್ಕೆ ಈ ಆಡಿಯೊ ಸಿಸ್ಟಮ್

ಕಾರು ಆಡಿಯೊ ಸಿಸ್ಟಮ್ ಈಗ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿದೆ. ದೂರ ಪ್ರಯಾಣ ಮಾಡುವಾಗ ಹಾಡುಗಳು ಕೇಳಿದರೆ ಕಣ್ಣು ಪ್ರಕೃತಿಯನ್ನು ನೋಡುತ್ತಿದ್ದರೆ, ಕಿವಿ ಹಾಡನ್ನು ಕೇಳುತ್ತಿದ್ದರೆ ತುಂಬಾ ಖುಷಿ ಆಗುತ್ತದೆ. ಹೀಗೆ ಕಾರಿನಲ್ಲಿ ಬಳಿಸುವ ಆಡಿಯೊಗಳನ್ನು ಉತ್ಪತ್ತಿ ಮಾಡುವಲ್ಲಿ ಪಯೊನಿರ್ ಕಂಪನಿ ಹೆಸರುವಾಸಿಯಾದ ಕಂಪನಿಯಾಗಿದೆ.
ಈ ಪಯೊನಿರ್ ನದು ಹೊಸ ಆಡಿಯೊ ಸಾಧನ ಮಾರುಕಟ್ಟೆಗೆ ಬಂದಿದ್ದು ಅದರಲ್ಲಿ MIXTRAX ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಆಡಿಯೊ ಸಾಧನ ಕಾರಿನಲ್ಲಿ ಬಳಸಿ ಅತ್ಯುತ್ತಮ ಗುಣಮಟ್ಟದ ಸಂಗೀತವನ್ನು ಕೇಳಬಹುದಾಗಿದ್ದು ಅದರಲ್ಲಿ ಈ ಕೆಳಗಿನ ಮುಖ್ಯವಾದ ಲಕ್ಷಣಗಳಿವೆ.
* ಐಪೋಡ್/ ಐಫೋನ್ ಸಂಪರ್ಕ
* USB ಪೋರ್ಟ್
* ವರ್ಚ್ಯುಯಲ್ DJಯ ಅನುಭವ ಪಡೆಯಬಹುದು
* ಸ್ಪಷ್ಟವಾದ ಶಬ್ದದ ಗುಣಮಟ್ಟ
ಈ ಸಾಧನ ಬಳಸಿ ಸಂಗೀತವನ್ನು ಕೇಳಿದರೆ ಅದರಿಂದ ಪಾರ್ಟಿಗಳಲ್ಲಿ ಕೇಳಿ ಬರುವ ಹಾಡಿನ ಗುಣಮಟ್ಟದ ಹಗೆ ಇಲ್ಲದಿದ್ದರೂ ಕೇಳುಗರಿಗೆ ಉತ್ತಮ ರೀತಿಯಲ್ಲಿ ಮನರಂಜನೆಯನ್ನು ಕೊಡುತ್ತದೆ. ಈ ಆಡಿಯೊ ಸಾಧನದಲ್ಲಿ ಎಲ್ಲಾ ಟ್ರ್ಯಾಕ್ ಗಳನ್ನು ಗುರುತಿಸುವ ಇನ್ ಬೆಲ್ಟ್ ಸಾಫ್ಟ್ ವೇರ್ ಇದೆ. ಈ ಸಾಧನದಲ್ಲಿ ಹಾಡಿನಲ್ಲಿರುವ ಟೆಂಪು ಮತ್ತು ಬೀಟ್ಸ್ ಅನ್ನು ಗುರುತಿಸಿ ಅದನ್ನು ಉತ್ತಮ ರೀತಿಯಲ್ಲಿ ಕೇಳುವಂತೆ ಮಾಡುವ ಸಾಮರ್ಥ್ಯ ಈ ಆಡಿಯೊ ಸಾಧನಕ್ಕೆ ಇದೆ.
ಆದ್ದರಿಂದ ಇದರಲ್ಲಿ ಕೇಳಿ ಬರುವ ಹಾಡುಗಳು DJ ಯಲ್ಲಿ ಕೇಳಿ ಬರುವ ಹಾಡಿನಂತೆ ಇದ್ದು ಯುವ ಜನಾಂಗವನ್ನು ಇಂತಹ ಹಾಡುಗಳು ಬೇಗ ಸೆಳೆಯುವುದರಿಂದ ಈ ಆಡಿಯೊ ಕೂಡ ಯುವಕರ ಮನಗೆಲ್ಲುವಲ್ಲಿ ಯಾವುದೆ ಸಂಶಯವಿಲ್ಲ.MIXTRAX ತಂತ್ರಜ್ಞಾನವನ್ನು ಹೊಂದಿರುವ ಈ ಸಾಧನವು 2012ರಲ್ಲಿ ಬಿಡುಗಡೆಯಾಗಲಿದ್ದು ಇದರ ಬೆಲೆಯ ಬಗ್ಗೆ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.


Click it and Unblock the Notifications








