Home
ಸಂಗೀತ

ನಾಯ್ಸ್ ಹುಶ್ ಸ್ಟಿರಿಯೊ ಹೆಡ್ ಫೋನ್

ನಾಯ್ಸ್ ಹುಶ್ ಸ್ಟಿರಿಯೊ ಹೆಡ್ ಫೋನ್
ನಾಯ್ಸ್ ಹುಶ್ NX 80 ವೈರ್ ಲೆಸ್ ಹೆಡ್ ಫೋನ್ ಆಗಿದ್ದು ಬ್ಲೂಟೂಥ್ ತಂತ್ರಜ್ಞಾನವನ್ನು ಹೊಂದಿದೆ. ಈ ನಾಯ್ಸ್ ಹುಶ್ ಕಂಪನಿ ಗುಣಮಟ್ಟದ ಹಾಡುಗಳನ್ನು ನೀಡುವುದರಿಂದ ಸಂಗೀತ ಪ್ರಿಯರ ಮೆಚ್ಚಿನ ಕಂಪನಿಯಾಗಿದೆ. ಈ ಹೆಡ್ ಫೋನ್ ನೋಡಲು ಆಕರ್ಷಕವಾಗಿದ್ದು ಕೆಂಪು ಮತ್ತು ಕಪ್ಪು ಮಿಶ್ರಿತ ಬಣ್ಣವನ್ನು ಹೊಂದಿದ್ದು ನೋಡಲುಆಕರ್ಷಕವಾಗಿದೆ. ಇದರ ವೈರ್ ಕೆಂಪು ಬಣ್ಣದಲ್ಲಿದ್ದು , ಇಯರ್ ಪೀಸ್ ಕಪ್ಪು ಬಣ್ಣದಿಂದ ಕೂಡಿದೆ. ಕಂಟ್ರೋಲ್ ಬಟನ್ ಕಪ್ಪು ಬಣ್ಣದಿಂದ ಕೂಡಿದ್ದು ಇದರ ಕೇಬಲ್ ಚಪ್ಪಟೆಯ ವಿನ್ಯಾಸವನ್ನು ಹೊಂದಿದೆ.

ಇದರ ಪ್ರಮುಖ ವಿಶೇಷವೆಂದರೆ ಇದರಲ್ಲಿರುವ ವೈರ್ ಸುಲಭವಾಗಿ ಬೇರೆ ವಸ್ತುಗಳಿಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ, ಬೇರೆ ವೈರ್ ಹೆಡ್ ಫೋನ್ ನಲ್ಲಿ ಇದೊಂದು ಕಿರಿಕಿರಿಯ ವಿಷಯವಾಗಿದ್ದು ಇದರಲ್ಲಿ ಅಂತಹ ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆ ಕಡಿಮೆ. ಈ ಸಾಧನವು ವೈರ್ ಹೊರೆತು ಪಡಿಸಿ 11.33 ಗ್ರಾಂ ತೂಕವನ್ನು ಹೊಂದಿದೆ. ಈ ಸಾಧನವು 4 ವಿಭಿನ್ನ ಗಾತ್ರದ ಇಯರ್ ಪ್ಲಗ್ ಹೊಂದಿದೆ. ಈ ಇಯರ್ ಪ್ಲಗ್ ಗಳಲ್ಲಿ ಕಿವಿಗೆ ಹೊಂದುವ ಇಯರ್ ಪ್ಲಗ್ ತೆಗೆದು ಕೊಳ್ಳಬಹುದಾಗಿದೆ. ಈ ಇಯರ್ ಫೋನ್ ನ ಮತ್ತೊಂದು ತುದಿಯಲ್ಲಿ 3.5 mm ಜಾಕ್ ಹೊಂದಿದೆ.

ಈ ಹೆಡ್ ಫೋನ್ ನಲ್ಲಿ ಮೈಕ್ರೊಫೋನ್ ಕೂಡಇದ್ದು, ಅದರಲ್ಲಿ ಕಂಟ್ರೋಲ್ ಸ್ವಿಚ್ ಸಹ ನೀಡಲಾಗಿದೆ. ಈ ಮೈಕ್ರೊ ಫೋನ್ ಉತ್ತಮ . ಈ ಹೆಡ್ ಫೋನ್ 8 mm ಡ್ರೈವರ್ ಯೂನಿಟ್ , 96db/1mW ಸೆನ್ಸಿಟಿವಿಟಿ ಹಾಗೂ 16 ohms ಇಂಪೆಡೆನ್ಸ್ ಹೊಂದಿದೆ. ಈ ಹೆಡ್ ಫೋನ್ ನಲ್ಲಿ ಶಬ್ದದ ಕಂಪನಾಂಕ 20Hz - 20,000 Hz ನಡುವೆ ಇದೆ. ಇದರ ಕೇಬಲ್ ಉದ್ದ 3.9 ಅಡಿಯನ್ನು ಹೊಂದಿದೆ.

ನೋಡಲು ಆಕರ್ಷಕವಾಗಿದ್ದು, ಉತ್ತಮ ಗುಣಮಟ್ಟವನ್ನು ಹೊಂದಿರುವ ಈ ಸ್ಪೀಕರ್ ನ ಭಾರತೀಯ ಮಾರುಕಟ್ಟೆ ದರ ರು.3, 000 ಆಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+