ನೀವು ಸಂಗೀತ ಕೇಳಿ, ಫ್ರೆಂಡ್ಸ್ ಗೂ ಕೇಳಿಸಿ-ಪಿಲಿಪ್ಸ್ ಫಿಡೆಲಿಯೊ

ಪಿಲಿಪ್ಸ್ ಕಂಪನಿಯು DS9800W ಫಿಡೆಲಿಯೊ ಸೌಂಡ್ ಸ್ಪಿಯರ್ ಡಕ್ ಆಕರ್ಷಕ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ.ಈ ಸ್ಪೀಕರ್ ಐ ಟ್ಯೂನ್ಸ್ ಮ್ಯೂಸಿಕ್ಸರ್ವೀಸ್ ಗಳಲ್ಲಿ ಅಷ್ಟೆ ಅಲ್ಲದೆ ಆಪಲ್ ವಸ್ತುಗಳಾದ ಐಪ್ಯಾಡ್, ಐಪೋನ್ ಮತ್ತು ಐಪೋಡ್ ಗಳಲ್ಲಿ ಬಳಸಿ ಅತ್ಯುತ್ತಮ ಗುಣ ಮಟ್ಟದ ಶಬ್ದವನ್ನುಪಡೆಯಬಹುದಾಗಿದೆ.
ಅಲ್ಲದೆ ಸ್ಪೀಕರ್ ನಲ್ಲಿ ಸಂಗೀತದ ಸಂಪೂರ್ಣವನ್ನು ಸಂಗ್ರಹಿಸಿ ಇಡಬಹುದಾಗಿದೆ.ಈ ಸ್ಪೀಕರ್ ಬ್ಯಾಬಿನೆಟ್ ನಲ್ಲಿ ಹೆಡ್ ಪೋಪಿಂಗ್ ಇದ್ದು ಇದು ಟ್ವೀಟರ್ಗಳಾಗಿ ಕಾರ್ಯವನ್ನು ನಿರ್ವಹಿಸುತ್ತದೆ.
ಪಿಲಿಪ್ಸ್ DS9800W ಫಿಡೆಲಿಯೊ ಆಕ್ಸ್ ಇನ್ ಪೋರ್ಟ್ ಹೊಂದಿದ್ದು ಇದನ್ನು ಬಳಸಿ ಯಾವುದೆ ಎಲೆಕ್ರ್ಟಾನಿಕ್ಸ್ ವಸ್ತುಗಳಿಗೆ ಜೋಡಿಸಿ ಅತ್ಯುತ್ತಮ ಗುಣಮಟ್ಟದ ಶಬ್ದದಲ್ಲಿ ಸಂಗೀತವನ್ನು ಕೇಳಬಹುದಾಗಿದೆ.
ಅಧಿಕ ಪಿಲಿಪ್ಸ್ ಫಿಡೆಲಿಯೊ ಸ್ಪೀಕರ್ ಹೊಂದಿರುವರು ಇದನ್ನು ಮಲ್ಟಿ ರೂಮ್ ಆಡಿಯೊ ಪ್ಲೇಬ್ಯಾಕ್ ಅನ್ನು ಆಕ್ಟಿವೆಟ್ ಮಾಡಬಹುದಾಗಿದೆ. ನಂತರ ರಿಮೋಟ್ಕಂಟ್ರೋಲ್ ಬಳಸಿ ಇವುಗಳನ್ನು ಆಪರಟ್ ಮಾಡಬಹುದಾಗಿದೆ.
ಫಿಲಿಪ್ಸ್ ಪಿಡೆಲಿಯೊದ ಬಳಕೆದಾರರು ಪ್ರಪಂಚದ ಎಲ್ಲಡೆಯ ಆನ್ ಲೈನ್ ರೇಡಿಯೊದ ಸೌಲಭ್ಯವನ್ನು ಅವರ ಇಷ್ಟದಂತೆ ಪಡೆಯಬಹುದಾಗಿದೆ.
ಅಲ್ಲದೆ ಬಳಕೆದಾರರು ಕೇಳುತ್ತಿರುವ ಮ್ಯಾಸಿಕ್ ಅನ್ನು ಟ್ವೀಟರ್ ಮತ್ತು ಫೇಸ್ ಬುಕ್ ಬಳಸಿ ಸ್ನೀಹಿತರಿಗೂ ಕೇಳಿಸಬಹುದಾಗಿದೆ.
ಈ ಸ್ಪೀಕರ್ ಸದ್ಯದಲ್ಲಿಯೆ ಮಾರುಕಟ್ಟೆಗೆ ಬರಲಿದ್ದು ಇದರ ಬೆಲೆಯನ್ನು ಇನ್ನೂ ತಿಳಿದುಬಂದಿಲ್ಲ.


Click it and Unblock the Notifications








