Home
ಸಂಗೀತ

ಗೇಮ್ ಪ್ರಿಯರಿಗೆ ಬಂದಿದೆ ಸೆನ್ನ್ ಹೈಸರ್ ಹೆಡ್ ಸೆಟ್

ಗೇಮ್ ಪ್ರಿಯರಿಗೆ ಬಂದಿದೆ  ಸೆನ್ನ್ ಹೈಸರ್ ಹೆಡ್ ಸೆಟ್

ಗೇಮಿಂಗ್ ಬಗ್ಗೆ ತುಂಬಾ ಆಸಕ್ತಿ ಇದ್ದು ಒಳ್ಳೆಯ ಗೇಮಿಂಗ್ ಹೆಡ್ ಸೆಟ್ ಕೊಳ್ಳಬಯಸುವರು ಸೆನ್ನ್ ಹೈಸರ್ X320ಗೇಮಿಂಗ್ ಹೆಡ್ ಸೆಟ್ ಬಳಸಬಹುದಾಗಿದೆ. ಇದೊಂದು ಸಂಪೂರ್ಣವಾದ ಗೇಮಿಂಗ್ ಹೆಡ್ ಸೆಟ್ ಆಗಿದ್ದು ಉತ್ತಮ ಗುಣಮಟ್ಟದ ಶಬ್ದದೊಂದಿಗೆ ತುಂಬಾ ಸೂಕ್ಷ್ಮವಾದ ಮೈಕ್ರೊಫೋನ್ ಹೊಂದಿದೆ. ಹೆಡ್ ಫೋನ್ ನೋಡಲು ಕಪ್ಪು ಬಣ್ಣವನ್ನು ಹೊಂದಿದ್ದು ಅದರ ತುದಿಯಲ್ಲಿ ಹಸಿರು ಬಣ್ಣವನ್ನು ಹೊಂದಿದ್ದು ,ಅದರ ಲೋಗೊವನ್ನು ಹೆಡ್ ಫೋನ್ ನ ಮೇಲ್ಭಾಗದಲ್ಲಿ ಹಾಕಿದ್ದು ನೋಡಲು ಸಹ ಆಕರ್ಷಕವಾಗಿದೆ.

ಹೆಡ್ ಫೋನ್ ಇಯರ್ ಕಪ್ ಗಳನ್ನು ಚೆನ್ನಾಗಿ ಗಾಳಿಯಡುವಂತೆ ಪ್ಯಾಡ್ ಮಾಡಲಾಗಿದ್ದು, ಇದನ್ನು ಎಷ್ಟು ಹೊತ್ತು ಬಳಕೆ ಮಾಡಿದರು ಬಳಕೆದಾರರಿಗೆ ಯಾವುದೆ ಕಿರಿಕಿರಿ ಉಂಟಾಗುವುದಿಲ್ಲ.ಈ ಹೆಡ್ ಫೋನ್ ಬಳಸುವಾಗ ಮೊದಲು ಅದನ್ನು ಟಿವಿಗೆ 3.5 mm ಹೆಡ್ ಜಾಕ್ ಅಥವಾ ಅನಾಲೋಗ್ ಬಳಸಿ ಜೋಡಿಸಬೇಕಾಗುತ್ತದೆ. ನಂತರ ಇದರ USB ವೈರ್ ಅನ್ನು ಇದರ Xbox ಕನ್ಸೋಲೆಗೆ ಜೋಡಿಸಬೇಕಾಗುತ್ತದೆ.ಮೈಕ್ರೊಫೋನ್ ಕೇಬಲ್ ಅನ್ನು ರಿಮೋಟ್ ನಲ್ಲಿರುವ ಪೋರ್ಟ್ ಗೆ ಜೋಡಿಸಬೇಕಾಗುತ್ತದೆ. ಇದರಲ್ಲಿ ತುಂಬಾ ವೈರ್ ಅನ್ನು ಜೋಡಿಸಬೇಕಾದರೂ ಸಹ ಇದನ್ನು ತೆಗೆದುಕೊಂಡು ಹೊರಗೆ ಹೋಗುವ ಅಗ್ಯತತೆ ಇಲ್ಲದಿರುವುದರಿಂದ ಅದೇನು ದೊಡ್ಡ ವಿಷಯವಲ್ಲ.

ಇದನ್ನು ಗೇಮಿಂಗ್ ನಲ್ಲಿ ಬಳಸಿದರೆ ಇದು ಹೊರಡಿಸುವ ಶಬ್ದವು ಬಳಕೆದಾರರಿಗೆ ಅಧಿಕ ಮನರಂಜನೆ ಕೊಡುವುತ್ತದೆ. ಇದರಲ್ಲಿ ಚಾನಲ್ ನಲ್ಲಿ ಶಬ್ದವನ್ನು ನಿಯಂತ್ರಿಸಲು ಪ್ರತ್ಯೇಕವಾದ ವಾಲ್ಯೂಮ್ ಕಂಟ್ರೋಲ್ ಇದೆ. ಈ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು.7,800 ಆಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+