ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿಸಿತು ಈ ಆಪ್!!..ಹೇಗೆ ಗೊತ್ತಾ?
ಯಾವುದೇ ದಾಖಲೆಗಳು ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿರುವುದರ ಬಗ್ಗೆ ದೂರು ಸಲ್ಲಿಸಲು ಇದ್ದ 'ಇ ಲಾಸ್ಟ್ ಅಂಡ್ ಫೌಂಡ್' ಎಂಬ ಆನ್‌ಲೈನ್ ಯೋಜನೆಯಿಂದ ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿದೆ.
ಬೆಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದವರಿಗೆ ಈ ಆಪ್ ಒಂದು ಸಿಂಹಸ್ವಪ್ನವಾಗಿ ಕಾಡುತ್ತಿದೆ. ಯಾವುದೇ ದಾಖಲೆಗಳು ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿರುವುದರ ಬಗ್ಗೆ ದೂರು ಸಲ್ಲಿಸಲು ಇದ್ದ 'ಇ ಲಾಸ್ಟ್ ಅಂಡ್ ಫೌಂಡ್' ಎಂಬ ಆನ್‌ಲೈನ್ ಯೋಜನೆಯಿಂದ ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿದೆ.
ಕಳೆದುಹೋದ/ಕಾಣೆಯಾದ ವಸ್ತುಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗದೆ ನೇರವಾಗಿ ಮೊಬೈಲ್ ಫೋನ್ ಮತ್ತು ವೆಬ್‌ಸೈಟ್ ಮುಖಾಂತರ ವರದಿಯನ್ನು ಸಲ್ಲಿಸಲು ಅವಕಾಶವರುವ ' ಇ ಲಾಸ್ಟ್ ಅಂಡ್ ಫೌಂಡ್' ಸೇವೆಯಿಂದ 300 ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಅಲ್ಪಕಾಲದಲ್ಲಿಯೇ ಕಳ್ಳರಿಂದ ಬಿಡಿಸಿ ಮಾಲಿಕರಿಗೆ ನೀಡಲಾಗಿದೆ.

ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಅಕೌಂಟ್‌ನಲ್ಲಿ ಚಿತ್ರ ಸಮೇತ ಪ್ರಕಟಿಸಿದ್ದು, ಮೊಬೈಲ್ ಬಳಸುವುದರಲ್ಲಿರುವ ಒಲವು, ಅದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರಲ್ಲಿಯೂ ಇರಲಿ! ಎಂದು ಸಲಹೆ ನೀಡಿದೆ. ಹಾಗಾದರೆ, 'ಇ ಲಾಸ್ಟ್ ಅಂಡ್ ಫೌಂಡ್ ಯೋಜನೆಯ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಇ-ಲಾಸ್ಟ್ ಅಂಡ್ ಫೌಂಡ್ ವೆಬ್‌ಸೈಟ್!!
ಆನ್‌ಲೈನ್ ಮುಖಾಂತರ ಕಳೆದುಕೊಂಡ ವಸ್ತುಗಳ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆ 'ಇ-ಲಾಸ್ಟ್ ಅಂಡ್ ಫೌಂಡ್' (e-Lost & Found Report) ( ಆಪ್ ಲಿಂಕ್) ಎಂಬ ವೆಬ್‌ಸೈಟ್ ಮತ್ತು ಆಪ್ ಅನ್ನು ರಚಿಸಿದೆ.! ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳದೆ ಈ ವೆಬ್‌ಸೈಟ್ ಅಥವಾ ಆಪ್ ಮೂಲಕ ಕಳೆದುಹೋದ ವಸ್ತುಗಳ ಬಗ್ಗೆ ದೂರುದಾಖಲಿಸಬಹುದು.!!

ಇ-ಲಾಸ್ಟ್ ಅಂಡ್ ಫೌಂಡ್ ಕಾರ್ಯ ಹೇಗೆ?
ಪೊಲೀಸ್ ಇಲಾಖೆ ಅಳವಡಿಸಿಕೊಂಡಿರುವ ಲಾಸ್ಟ್ ಆಂಡ್ ಫೌಂಡ್' ವ್ಯವಸ್ಥೆಯ (eLost & Found Report) ವೆಬ್‌ಸೈಟ್ ತೆರೆದು ಲ್ಯಾಪ್‌ಟಾಪ್, ಮೊಬೈಲ್ ಫೋನ್, ಪಾಸ್‌ಪೋರ್ಟ್, ಶೈಕ್ಷಣಿಕ ದಾಖಲೆ ದೂರುಗಳನ್ನು ಆನ್‌ಲೈನ್ ಮೂಲಕ ದಾಖಲಿಸಬಹುದು. ದೂರು ಸಲ್ಲಿಸಿರುವ ಬಗ್ಗೆ ಆನ್‌ಲೈನ್‌ನಲ್ಲಿಯೇ ನಿಮಗೆ ಸ್ವೀಕೃತಿ ಪತ್ರ ಕೂಡ ದೊರೆಯುತ್ತದೆ.!!

ದೂರು ನೀಡಿದ ನಂತರ ಏನಾಗುತ್ತದೆ ?
ದೂರು ಸಲ್ಲಿಸಿದ ನಂತರ ಕಳೆದುಹೋದ ವಸ್ತುಗಳ ಬಗ್ಗೆ ವರದಿ ಬಳಕೆದಾರರ ಮೊಬೈಲ್ ಪೋನ್ ಮತ್ತು ಇ-ಮೇಲ್ ಐಡಿಗೆ ರಾವನೆಯಾಗುತ್ತದೆ. ಕಳೆದುಹೋದ ದಾಖಲಾತಿ/ವಸ್ತುಗಳ ಬಗ್ಗೆ ದಾಖಲಾದ ವರದಿಗಳು ಎಸ್.ಸಿ.ಆರ್.ಬಿ ನಲ್ಲಿ ದಾಖಲಾಗುತ್ತವೆ. ಆದರೆ, ದಾಖಲಾದ ವರದಿಯ ಮೇಲೆ ಯಾವುದೇ ವಿಚಾರಣೆ/ ತನಿಖೆ ಕೈಗೊಳ್ಳಲಾಗುವುದಿಲ್ಲ.!!


ಯೋಜನೆಯಿಂದ ಗ್ರಾಹಕರಿಗೆ ಲಾಭವೇನು?
ನೀವು ಕಳೆದುಕೊಂಡಿರುವ ವಸ್ತುಗಳೇನಾದರೂ ಪೊಲೀಸ್ ಇಲಾಖೆಗೆ ದೊರೆತರೆ ಅಂದರೆ, ನೀವು 'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ಆ ಬಗ್ಗೆ ದೂರು ದಾಖಲಿಸಿದ್ದರೆ ಪೊಲೀಸ್ ಇಲಾಖೆ ನಿಮ್ಮನ್ನು ಸಂಪರ್ಕಿಸುತ್ತದೆ. ನಂತರ ನೀವು ಸೂಕ್ತ ದಾಖಲೆಗಳನ್ನು ನೀಡಿ ನಿಮ್ಮ ವಸ್ತುಗಳನ್ನು ಇಲಾಖೆಯಿಂದ ವಾಪಸ್ ಪಡೆಯಬಹುದಾಗಿದೆ.!!

ವಿದ್ಯುನ್ಮಾನ ದಾಖಲೆಯಷ್ಟೆ!!
'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ದಾಖಲಿಸಿದ ದೂರು ಪೊಲೀಸರಿಗೆ ಕೇವಲ ಮಾಹಿತಿಯಾಗಿರುತ್ತದೆ. ಈ ಆಧಾರದ ಮೇಲೆ ಯಾವುದೇ ವಿಚಾರಣೆ/ತನಿಖೆಯನ್ನು ಕೈಗೊಳ್ಳುವುದಿಲ್ಲ. ಈ ವರದಿಯು ದೂರುದಾರರಿಗೆ ಮತ್ತು ಪೊಲೀಸ್ ಇಲಾಖೆ ಪರಿಶೀಲನೆಗಾಗಿ ಇರುವ ಕೇವಲ ವಿದ್ಯುನ್ಮಾನ ದಾಖಲೆಯಾಗಿರುತ್ತದೆ.!!

ಕಳೆದುಕೊಂಡರೆ ಮಾತ್ರ!!
ನೀವು ನಿಮ್ಮಲ್ಲಿರುವ ಸಣ್ಣ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸುವುದು ಉತ್ತಮ.! ವಸ್ತುಗಳನ್ನು ಯಾರಾದರೂ ಕದ್ದಿದ್ದರೆ ಅಥವಾ ನಿಮ್ಮನ್ನು ಯಾರಾದರೂ ಬೆದರಿಸಿ ಕಿತ್ತುಕೊಂಡಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಎಚ್ಚರದಿಂದ ದೂರು ದಾಖಲಿಸುವುದನ್ನು ಮರೆಯದಿರಿ.!!

ಎಲ್ಲರೂ ಮಾಡುತ್ತಿರುವ ಈ ಒಂದು ತಪ್ಪಿಗೆ ಸ್ಮಾರ್ಟ್‌ಫೋನ್ ಸ್ಪೋಟವಾಗಬಹುದಂತೆ!!
ಮೊಬೈಲ್ ಅನ್ನು ಯಾವ ರೀತಿ ಚಾರ್ಜ್ ಮಾಡಬೇಕು, ಬ್ಯಾಟರಿಯಲ್ಲಿನ ಶಕ್ತಿ ಖಾಲಿಯಾಗದಂತೆ ಯಾವ ರೀತಿ ಉಪಯೋಗಿಸಬೇಕು ಎಂಬುದಕ್ಕೆ ಹಲವು ಸಲಹೆಗಳನ್ನು ಪ್ರತಿದಿವಸ ಓದಿತ್ತೇವೆ. ಆದರೆ, ಹೊಸ ಹೊಸ ಸಂಶೋಧನೆಗಳು ಬ್ಯಾಟರಿ ಚಾರ್ಜಿಂಗ್ ಸಮಸ್ಯೆಗಳ ಬಗ್ಗೆ ಹೊಸ ಹೊಸ ತೊಂದರೆಗಳನ್ನು ನಮಗೆ ಹೇಳುತ್ತಿವೆ.
ಇದೀಗ ಬ್ಯಾಟರಿ ಸ್ಪೋಟಕ್ಕೂ ಮತ್ತು ಬ್ಯಾಟರಿ ಹಾಳಾಗುವುದಕ್ಕೂ ಹೊಸ ಕಾರಣವೊಂದು ಹುಟ್ಟಿಕೊಂಡಿದೆ. ಸಂಶೋಧಕರು ಹೇಳುವಂತೆ, ಇದೇ ಕಾರಣದಿಂದ ಇಂದಿನ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸ್ಪೋಟವಾಗುತ್ತಿದೆ ಮತ್ತು ಚಾರ್ಜ್ ಆಗುವಾಗ ಬ್ಯಾಟರಿ ಸ್ವಲ್ಪ ಬಿಸಿಯಾಗುತ್ತದೆ. ಹೆಚ್ಚು ಬಿಸಿಯಾದಷ್ಟು ಮೊಬೈಲ್ ಬಾಳಿಕೆ ಬರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಹಾಗಾಗಿ, ಇಂದಿನ ಲೇಖನದಲ್ಲಿ ಸಂಶೋಧಕರು ಹೇಳೀದಂತೆ ಬ್ಯಾಟರಿ ಸ್ಪೋಟಕ್ಕೂ ಮತ್ತು ಬ್ಯಾಟರಿ ಹಾಳಾಗುವುದಕ್ಕೂ ಇರುವ ಹೊಸ ಕಾರಣ ಯಾವುದು? ಇನ್ನಿತರ ಮುಂಜಾಗ್ರತೆಯಿಂದ ಬ್ಯಾಟರಿಯನ್ನು ಹೆಚ್ಚು ಬಾಳಿಕೆ ಬರುವಂತೆ ಹೇಗೆ ಮಾಡಬಹುದು ಎಂಬ ಅಂಶಗಳನ್ನು ತಿಳಿದುಕೊಳ್ಳೋಣ. ಬ್ಯಾಟರಿ ರಕ್ಷಣೆ ಹೇಗೆ ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್!!
ಸ್ಮಾರ್ಟ್‌ಫೋನ್ ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್‌ನಂತಹ ರಕ್ಷಕ ಕವಚಗಳನ್ನು ಅಳವಡಿಸಿಕೊಂಡಿರುತ್ತಾರೆ. ಇದೇ ಬ್ಯಾಟರಿ ಸ್ಪೋಟಕ್ಕೂ ಕಾರಣವಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.! ಫ್ಲಿಪ್ ಕವರ್ ಫೋನ್ ಬ್ಯಾಟರಿ ಹೆಚ್ಚು ಬಿಸಿಯಾಗುವುದರಿಂದಲೂ ಇಂತಹ ಘಟನೆಗಳು ಜರುಗುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.!!

ಅತ್ಯುತ್ತಮ ಚಾರ್ಜರ್!!
ಯಾವುದೇ ಕಾರಣಕ್ಕೂ ಗುಣಮಟ್ಟವಲ್ಲದ ಚಾರ್ಜರ್ ಬಳಕೆ ಮಾಡಬೇಡಿ. ಇಂತಹ ಚಾರ್ಜರ್‌ಗಳೆ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಳಾಗಲೂ ಮೊದಲ ಕಾರಣ ಹಾಗಾಗಿ, ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್‌ಫೋನ್‌ಗೆ ನೀಡಿರುವ ಚಾರ್ಜರ್ ಬಳಸಿ. ಏಕೆಂದರೆ ಬೇರೆ ಮೊಬೈಲ್‌ನ ಅತ್ಯುತ್ತಮ ಚಾರ್ಜರ್ ಸಹ ಅಪಾಯಕಾರಿ ಎಂಬುದನ್ನು ಮರೆಯದಿರಿ.!

ಹೆಚ್ಚು ಬಳಸಿ ಕೂಡಲೇ ಚಾರ್ಜ್‌ಗೆ ಹಾಕಬೇಡಿ!!
ಈ ಮಾತನ್ನು ನಾವು ಹೇಳುತ್ತಿಲ್ಲ. ಬದಲಾಗಿ ಗೂಗಲ್ ಹೆಳುತ್ತಿದೆ. ಹೌದು, ಎಲ್ಲರೂ ಹೆಚ್ಚು ಸ್ಮಾರ್ಟ್‌ಫೊನ್ ಬಳಕೆ ಮಾಡಿ ಸ್ಮಾರ್ಟ್‌ಫೊನ್ ಬಿಸಿಯಾಗಿದ್ದಾಗ ಚಾರ್ಜ್‌ಗೆ ಹಾಕುತ್ತಾರೆ. ಇದರಿಂದ ಬ್ಯಾರಿ ಸೆಲ್ಸ್‌ಗಳು ಹಾಳಾಗಿ ಸ್ಮಾರ್ಟ್‌ಫೊನ್ ಬ್ಯಾಟರಿ ಹಾಳಾಗುತ್ತದೆ. ನೆನಪಿರಲಿ ಇದು ಸ್ಪೋಟಕ್ಕೂ ಕಾರಣ!!!

ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರಲಿ.!!
ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತೆನೆ ಎಂದು ಬ್ಯಾಟರಿ ಚಾರ್ಜ್ ಮೂಣ್ ಖಾಲಿಯಾಗುವವರೆಗೂ ಬಳಕೆ ಬೇಡ.ಹೌದು, ಸ್ಮಾರ್ಟ್‌ಫೊನ್ ಎಷ್ಟೇ ಬಳಸಿದರೂ ಕಡಿಮೆ ಎಂದರೂ ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರುವ ಹಾಗೆ ನೋಡಿಕೊಳ್ಳಿ.ಏಕೆಂದರೆ ಖಾಲಿಯಾದ ಬ್ಯಾಟರಿಯನ್ನು ಸೆಲ್ಸ್‌ಗಳನ್ನು ತಳಮಟ್ಟದಿಂದ ಚಾರ್ಜ್ ಮಾಡಿದರೆ ಅವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ಹಾಗಂತ 100%ಚಾರ್ಜ್ ಮಾಡಿದರೆ?
ವೈದ್ಯರು ಹೇಳುವಂತೆ ಅತಿಯಾಗಿ ಆಹಾರ ಸೇವನೆ ದೇಹಕ್ಕೆ ಹಾನಿಕರವಾಗಿರುವಂತೆಯೇ ನಿಮ್ಮ ಬ್ಯಾಟರಿಯನ್ನೂ ಅತಿಯಾಗಿ ಚಾರ್ಜ್ ಮಾಡಬೇಡಿ. ಸಂಪೂರ್ಣವಾಗಿ ನೀವು ಫೋನ್ ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಡ್ರೈನ್ ಆಗುತ್ತದೆ. ಮೇಲಿನ ಸಲಹೆಗೆ ಇದು ತದ್ವಿರುದ್ದ.!!
ಚಿತ್ರಕೃಪೆ: ಬೆಂಗಳೂರುಸಿಟಿ ಪೊಲೀಸ್


Click it and Unblock the Notifications








