Home
ಸಂಗೀತ

ಸ್ಪಷ್ಟ ಶಬ್ದದ ಗ್ಯಾರಂಟಿಯನ್ನು ನೀಡುತ್ತೆ ಈ ಹೆಡ್ ಸೆಟ್

ಸ್ಪಷ್ಟ ಶಬ್ದದ ಗ್ಯಾರಂಟಿಯನ್ನು ನೀಡುತ್ತೆ ಈ ಹೆಡ್ ಸೆಟ್

ಹೆಡ್ ಫೋನ್ ವಿಷಯಕ್ಕೆ ಬಂದಾಗ ಹೆಡ್ ಫೋನ್ ವೈರ್ ಬಳಕೆದಾರರಿಗೆ ಯಾವುದಾದರು ವಸ್ತುಗಳಿಗೆ ಸಿಕ್ಕಿ ಹಾಕಿಕೊಂಡು ತೊಂದರೆಯನ್ನು ಉಂಟುಮಾಡುತ್ತದೆ. ಅದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ವೈರ್ ಲೆಸ್ ಹೆಡ್ ಫೋನ್ ಗಳ ಬಳಸುವುದು. ಆದರೆ ಕೆಲವು ವಿಮರ್ಶಕರು ವೈರ್ ಲೆಸ್ ಹೆಡ್ ಫೋನ್ ಗಿಂತ ವೈರ್ ಇರುವ ಹೆಡ್ ಫೋನ್ ನಲ್ಲಿ ಶಬ್ದವು ಹೆಚ್ಚಿನ ಗುಣಮಟ್ಟದಾಗಿರುತ್ತದೆ ಎಂದು ಹೇಳುತ್ತಾರೆ.

ಆದರೆ ವೈರ್ ಲೆಸ್ ಹೆಡ್ ಸೆಟ್ ನಲ್ಲಿ ಶಬ್ದವು ಸಹ ಉತ್ತಮ ಗುಣ ಮಟ್ಟದಲ್ಲಿಯೆ ಬೇಕು, ಅದರಲ್ಲಿ ಹೊಂದಾಣಿಕೆ ಮಾಡಲು ಸಿದ್ಧವಿಲ್ಲ ಅನ್ನುವವರಿಗೆ ಸ್ಟೀಲ್ ಸಿರಿಸ್ ಸ್ಪೆಕ್ಟ್ರಮ್ 7XB ಹೆಡ್ ಸೆಟ್ ಬೆಸ್ಟ್ ಆಗಿದೆ. ಈ ಹೆಡ್ ಸೆಟ್ ಕಪ್ಪು ಹೊಳೆಯುವ ಬಣ್ಣವನ್ನು ಹೊಂದಿದ್ದು ಇಯರ್ ಕಪ್ ಸುತ್ತಲೂ ಬೂದಿ ಬಣ್ಣದ ಬ್ಯಾಂಡ್ ಇದ್ದು ನೋಡಲು ಆಕರ್ಷಕವಾಗಿದೆ. ಈ ಹೆಡ್ ಫೋನ್ ನಲ್ಲಿ ಪ್ಯಾಡಿಂಗ್ ದೊಡ್ಡದಾಗಿದ್ದು ಇಯರ್ ಕಪ್ ಮತ್ತು ಹೆಡ್ ಬ್ಯಾಂಡ್ ನಲ್ಲಿ ಮೃದುವಾದ ಪ್ಯಾಡಿಂಗ್ ಬಳಸಲಾಗಿದೆ.

ಈ ಹೆಡ್ ಫೋನ್ ದೊಡ್ಡದಾಗಿದ್ದರೂ ಸಹ ಇದನ್ನು ಎಲ್ಲಿಗಾದರು ಕೊಂಡೊಯ್ಯಬೇಕೆಂದು ಬಯಸಿದರೆ ಇದನ್ನು 3 ಭಾಗಗಳಾಗಿ ಮಾಡಿ ಕೊಂಡೊಯ್ಯಬಹುದಾದ ಸೌಲಭ್ಯ ಕೂಡ ಇದರಲ್ಲಿದೆ. ಬಲ ಬದಿಯ ಇಯರ್ ಕಪ್ ನಲ್ಲಿ ಶಬ್ದವನ್ನು ನಿಯಂತ್ರಿಸುವ ಕಾರ್ಯವನ್ನು ಮಾಡುವಂತೆ ತಯಾರಿಸಲಾಗಿದೆ. ಮೈಕ್ರೊಫೋನ್ ಅನ್ನು ಎಡ ಬದಿಯ ಇಯರ್ ಕಪ್ ನಲ್ಲಿ ಅಳವಡಿಸಲಾಗಿದೆ.

ಈ ಸಾಧನದ ಬ್ಯಾಡ್ ಅಗಲ ಸೆಕಂಡಿಗೆ 4Mbits ಆಗಿದ್ದು ಇದು ಉತ್ತಮ ರೀತಿಯಲ್ಲಿ ಆಡಿಯೊವನ್ನು ರವಾನಿಸುತ್ತದೆ. ಇದು 2.6GHz ರೇಡಿಯೊ ಇಂಟರ್ ಫೇಸ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ಟ್ರಾನ್ಸ್ ಮೀಟರ್ ಬೇರೆ ಶಬ್ದವನ್ನು ಕೇಳಿದರೆ ಇದರಲ್ಲಿ ಕಂಪನಾಂಕವು ಒಂದು ಕಂಪನಾಂಕದಿಂದ ಮತ್ತೊಂದು ಕಂಪನಾಂಕಕ್ಕೆ ಒಂದೆ ರೀತಿಯಲ್ಲಿ ಹಾರುವುದರಿಂದ ಯಾವುದೆ ಗದ್ದಲವಿದ್ದರೂ ಸಹ ಉತ್ತಮ ಗುಣಮಟ್ಟದ ಶಬ್ದವನ್ನು ನೀಡುತ್ತದೆ. ಈ ಸಾಧನವು ಪ್ರತಿ ಸೆಕಂಡಿಗೆ 344 ಕಂಪನಾಂಕವನ್ನು ಹೊಂದಿದ್ದು ಇಂಟರ್ ಫೇಸ್ ಫ್ರೀ ಸೌಂಡ್ ಅನ್ನು ಕೊಡುತ್ತದೆ.

ಈ ಹೆಡ್ ಸೆಟ್ ನಲ್ಲಿ ಕಂಪನಾಕವು 18-28,000 Hz ಇದ್ದು , ಇದರ ಇಂಪೆಡೆನ್ಸ್ 32 ohm ಇದರ ಸೆನ್ಸಟಿವಿಟಿ 1 KHz ಅಂದರೆ 112dB ಹೊಂದಿದೆ. ಇದರಲ್ಲಿರುವ ಮೈಕ್ರೊಫೋನ್ ಕಂಪನಾಂಕವು 50 ಮತ್ತು 16,000 Hz ನಡುವೆ ಇದೆ. ಇದರ ಸೆನ್ಸಟಿವಿಟಿ 38dB ಇದ್ದು ಈ ಹೆಡ್ ಸೆಟ್ ಬೆಲೆಯನ್ನು ಕಂಪನಿಯು ಇನ್ನೂ ಪ್ರಕಟಗೊಳಿಸಲಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+