Home
ಸಂಗೀತ

ವರ್ಷಾಂತ್ಯಕ್ಕೆ Samsung Galaxy S24 FE ಸ್ಮಾರ್ಟ್‌ಫೋನ್ ಲಾಂಚ್ ! ವಿನ್ಯಾಸ, ಫೀಚರ್ಸ್‌ ಸೋರಿಕೆ

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಸ್ಯಾಮ್‌ಸಂಗ್ (Samsung) ಮೊಬೈಲ್‌ಗಳು ಅತೀ ಹೆಚ್ಚು ಬೇಡಿಕೆ ಹೊಂದಿವೆ. ಮಾರುಕಟ್ಟೆಯಲ್ಲಿ ತನ್ನದೇ ಆದ ವಿಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸ್ಯಾಮ್‌ಸಂಗ್ ಆಗಾಗ ನೂತನ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು (Smartphones) ಲಾಂಚ್ ಮಾಡುತ್ತಾ ಬಂದಿದೆ. ಇದೀಗ ಸ್ಯಾಮ್‌ಸಂಗ್ ಸಂಸ್ಥೆ ತನ್ನ S ಸರಣಿಯ ನೂತನ ಸ್ಮಾರ್ಟ್‌ಫೋನ್ ಒಂದನ್ನು ವರ್ಷಾಂತ್ಯದಲ್ಲಿ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ. ಇದೀಗ Galaxy S24 FE ಸರಣಿಯ ನೂತನ ಮೊಬೈಲ್‌ ಕುರಿತು ವಿನ್ಯಾಸ, ಫೀಚರ್ಸ್‌ ಸೇರಿ ಅನೇಕ ಅಂಶಗಳು ಸೋರಿಕೆಯಾಗಿವೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ ಕುರಿತು ಏನೆಲ್ಲಾ ಅಂಶಗಳು ಸೋರಿಕೆಯಾಗಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

Samsung Galaxy S23 FE ಸ್ಮಾರ್ಟ್‌ಫೋನ್‌ನ ಮುಂದುವರೆದ ಸರಣಿಯಾಗಿ Galaxy S24 FE ಅನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಈ ಕುರಿತು ರೆಂಡರ್‌ಗಳು ಸೋರಿಕೆಯಾಗಿವೆ. ಇದೀಗ ಸೋರಿಕೆಯಾಗಿರುವ ಮಾಹಿತಿಯು ಮುಂಬರುವ ಸ್ಮಾರ್ಟ್‌ಫೋನ್‌ ಕುರಿತಾದ ಒಂದು ಚಿತ್ರವಣವನ್ನು ನಮಗೆ ನೀಡಿದೆ. Galaxy S24 FE ಯ ಸೋರಿಕೆಯಾಗಿರುವ ರೆಂಡರ್‌ಗಳ ಪ್ರಕಾರ ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಮತ್ತು ಹೋಲ್ ಪಂಚ್ ಡಿಸ್‌ಪ್ಲೇ ವಿನ್ಯಾಸ ಹೊಂದಿರುವಂತೆ ಕಂಡು ಬಂದಿದೆ. Galaxy S24 FE ಗ್ಯಾಲಕ್ಸಿ S24 ನ ಟೋನ್-ಡೌನ್ ಆವೃತ್ತಿಯಾಗಿ ಬರುವ ಸಾಧ್ಯತೆಯಿದೆ ಮತ್ತು ರೆಂಡರ್‌ಗಳು ವೆನಿಲ್ಲಾ ಮಾದರಿಯೊಂದಿಗೆ ಕೆಲವು ವಿನ್ಯಾಸದ ಹೋಲಿಕೆಗಳನ್ನು ಸಹ ನೀಡಿವೆ.

ವರ್ಷಾಂತ್ಯಕ್ಕೆ Samsung Galaxy S24 FE ಸ್ಮಾರ್ಟ್‌ಫೋನ್ ಲಾಂಚ್ !

Samsung Galaxy S24 FE ಸೋರಿಕೆಯಾದ ವಿನ್ಯಾಸ:
ಟಿಪ್‌ಸ್ಟರ್ ಸ್ಟೀವ್ ಹೆಚ್. ಮೆಕ್‌ಫ್ಲೈ (@OnLeaks) ಗಿಜ್ನೆಕ್ಸ್ಟ್ ಸಹಯೋಗದೊಂದಿಗೆ ಮುಂಬರುವ ಗ್ಯಾಲಕ್ಸಿ ಎಸ್24 FEಯ ರೆಂಡರ್‌ಗಳನ್ನು ಸೋರಿಕೆ ಮಾಡಿದ್ದಾರೆ. ರೆಂಡರ್‌ಗಳಲ್ಲೂ ಬಾಗಿದ ಅಂಚುಗಳೊಂದಿಗೆ ಹ್ಯಾಂಡ್‌ಸೆಟ್‌ನಲ್ಲಿ ಪಂಚ್ ಹೋಲ್ ಡಿಸ್‌ಪ್ಲೇ ಇರುವುದು ಕಂಡು ಬಂದಿದ್ದುಇದನ್ನು ಹಸಿರು ಬಣ್ಣದಲ್ಲಿ ತೋರಿಸಲಾಗಿದೆ. ಇದು Galaxy S23 FE ನ ಮಿಂಟ್ ಕಲರ್‌ವೇಗೆ ಪರಿಚಿತವಾಗಿದೆ.

ಹಿಂಭಾಗದಲ್ಲಿ ಇದು ಲಂಬವಾಗಿ ಜೋಡಿಸಲಾದ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವಂತೆ ತೋರುತ್ತಿದೆ. ಹ್ಯಾಂಡ್‌ಸೆಟ್‌ನ ಬಲಭಾಗದ ಸ್ಪೈನ್‌ನಲ್ಲಿ ವಾಲ್ಯೂಮ್ ಬಟನ್‌ಗಳು ಮತ್ತು ಪವರ್ ಕೀ ಇರಿಸಿರುವುದು ಕಂಡು ಬಂದಿದೆ. ಜೊತೆಗೆ ಕೆಳಗಿನ ಪ್ಯಾನೆಲ್ ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ಸಿಮ್ ಟ್ರೇ ಸ್ಲಾಟ್ ಅನ್ನು ಹೊಂದಿರುವಂತೆ ಕಂಡು ಬಂದಿದೆ.

Samsung Galaxy S24 FE ಸೋರಿಕೆಯಾದ ಫೀಚರ್ಸ್‌:
ಇದರ ಸೋರಿಕೆಯಾದ ಡಿಸೈನ್‌ Galaxy S24 ಗೆ ಹೋಲುತ್ತದೆ. ಮುಂಬರುವ ಫೋನ್ 6.65 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ವರದಿ ಹೇಳುತ್ತದೆ. ಇದು Galaxy S23 FE ನ 6.4 ಇಂಚಿನ ಡಿಸ್‌ಪ್ಲೇಗಿಂತ ಸ್ವಲ್ಪ ಅಪ್‌ಗ್ರೇಡ್ ಆಗಿರಲಿದೆ.

ಕ್ಯಾಮೆರಾ ಸೆಟಪ್ ನೋಡುವುದಾದರೆ ಇದು 50 MP ಪ್ರಾಥಮಿಕ ಸೆನ್ಸಾರ್ ಕ್ಯಾಮೆರಾ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದು 12GB RAM ಮತ್ತು 256GB ಸ್ಟೋರೆಜ್ ಸಾಮರ್ಥ್ಯವನ್ನು ಪ್ಯಾಕ್ ಮಾಡುವ ಸಾಧ್ಯತೆಯಿದೆ ಮತ್ತು 162 x 77.3 x 8mm ಅನ್ನು ಅಳೆಯಬಹುದು.

US ಸೇರಿದಂತೆ ಆಯ್ದ ಮಾರುಕಟ್ಟೆಗಳಲ್ಲಿ Samsung Galaxy S24 FE ನಲ್ಲಿ Snapdragon 8 Gen 3 ಚಿಪ್‌ಸೆಟ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯುರೋಪಿಯನ್ ಮತ್ತು ಭಾರತೀಯ ಮಾರುಕಟ್ಟೆಗಳು Exynos 2400 ಚಿಪ್‌ಸೆಟ್‌ ಆವೃತ್ತಿಯನ್ನು ಪಡೆಯಬಹುದು.

Galaxy S24 FE ಅನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಘೋಷಿಸಬಹುದು ಎಂದು ಊಹಿಸಲಾಗಿದೆ. Samsung Galaxy S23 FE ಭಾರತದಲ್ಲಿ ಇದರ ಪ್ರಾರಂಭಿಕ ವೇರಿಯಂಟ್ ಆಗಿರುವ 8GB + 128GB RAM ಸ್ಟೋರೇಜ್ ಮಾದರಿಯ ಬೆಲೆ 59,999 ರೂ. ಗಳಾಗಿವೆ.

Best Mobiles in India

English summary
The Galaxy S24 FE is expected to be launched later this year as the continuation series of the Samsung Galaxy S23 FE smartphone, renders of which have been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+