Home
ಸಂಗೀತ

ಟಾಪ್ 5 ಹೋಮ್ ಮೀಡಿಯಾ ಪ್ಲೇಯರ್

By Varun
ಟಾಪ್ 5 ಹೋಮ್ ಮೀಡಿಯಾ ಪ್ಲೇಯರ್

ಮನೆಯಲ್ಲಿ ಮೀಡಿಯಾ ಪ್ಲೇಯರ್ ಇದ್ದರೆ ಡಿ.ವಿ.ಡಿ ಮೂಲಕ ಹಾಡು ಕೇಳಬಹುದು, ಚಲನ ಚಿತ್ರಗಳನ್ನ ನೋಡಬಹುದು ಜೊತೆಗೆ ಕಂಪ್ಯೂಟರ್ ಮೂಲಕ ಪೆನ್-ಡ್ರೈವ್ ಗೆ ಹಾಡುಗಳು, ಫಿಲಂ ಗಳನ್ನ ಕಾಪಿ ಮಾಡಿಕೊಂಡು ಮೀಡಿಯಾ ಪ್ಲೇಯರ್ ನಲ್ಲಿ ಟೀ.ವಿ ಯ ದೊಡ್ಡ ಪರದೆ ಮೇಲೆ ನೋಡಬಹುದು. ಹಾಗಾಗಿಯೇ ಹೋಮ್ ಪ್ಲೇಯರ್ ಗಳು ಫೇಮಸ್.

ನಿಮಗೋಸ್ಕರ ಟಾಪ್ 5 ಹೋಮ್ ಮೀಡಿಯಾ ಪ್ಲೇಯರ್ ಗಳ ಪಟ್ಟಿ ಇಲ್ಲಿದೆ ನೋಡಿ:

1. ಆಮ್ಕೆಟ್ ಫ್ಲಾಶ್ ಟಿ.ವಿ ಮಲ್ಟಿ ಮೀಡಿಯಾ ಪ್ಲೇಯರ್ : ಈ ಪ್ಲೇಯರ್ ನಿಂದ ಯೂ.ಎಸ್.ಬಿ ಹಾಗು ಮೆಮೊರಿ ಕಾರ್ಡ್ ನಿಂದ ಮೀಡಿಯಾ ಫೈಲ್ ಗಳನ್ನ ಟೀ.ವಿ ಗೆ ಪ್ಲೇ ಮಾಡಬಹುದು. ಮೆಮೊರಿ ಕಾರ್ಡ್ ನಿಂದ ಹಾರ್ಡ್ ಡಿಸ್ಕ್ ಗೂ ಫೈಲ್ ಗಳನ್ನ ಕಾಪಿ ಮಾಡುವ ಸೌಲಭ್ಯವಿದೆ. ಇದರ ಬೆಲೆ 2500 ರೂಪಾಯಿ.

2. ಫಿಲಿಪ್ಸ್ HD ಮೀಡಿಯಾ ಪ್ಲೇಯರ್ HMP3000 :ಮ್ಯೂಸಿಕ್, ಫೋಟೋ, ವೀಡಿಯೋ ಗಳನ್ನ ನೇರವಾಗಿ ಇಂಟರ್ನೆಟ್ ಅಥವಾ ಕಂಪ್ಯೂಟರ್ ನಿಂದಲೇ ನೋಡುವ ಫೀಚರ್ ಹೊಂದಿದೆ. ಯೂ.ಎಸ್.ಬಿ 2.0 ಕನೆಕ್ಟರ್, SD ಮೆಮೊರಿ ಕಾರ್ಡ್ ಸ್ಲಾಟ್, ಹಾರ್ಡ್ ಡಿಸ್ಕ್ ಪ್ಲೇ ಬ್ಯಾಕ್ ಹಾಗು ಫೈಲ್ ಗಳನ್ನ ಕಾಪಿ, ಡಿಲೀಟ್, ಸೇವ್ ಮಾಡುವ ಬಟ್ಟನ್ ಗಳನ್ನೂ ಹೊಂದಿದೆ. ಇದರ ಬೆಲೆ 4800 ರೂಪಾಯಿ.

3. ಐ-ಒಮೆಗಾ ಹೋಮ್ ಮೀಡಿಯಾ 1 TB ಬಾಹ್ಯ ಸ್ಟೋರೇಜ್ ಮೆಮೊರಿ: ನಿಮ್ಮ ಮನೆಯಲ್ಲಿರೋ ಇತರೆ ಸ್ಟೋರೇಜ್ ಸಾಧನಗಳ ತರಹ ಉಪಯೋಗಿಸಬಹುದು. ಹಾರ್ಡ್ ಡಿಸ್ಕ್ ನ ಫೈಲ್ ಗಳನ್ನ ಇದರಲ್ಲೇ ಉಳಿಸಿಕೊಂಡು ಹಾಗೆ ವೀಡಿಯೋ ಗಳನ್ನ ಪ್ಲೇ ಮಾಡಬಹುದು. HD ತಂತ್ರಜ್ಞಾನದ ರೆಸಲ್ಯೂಶನ್ ಹೊಂದಿರುವ ಗುಣಮಟ್ಟದ ವೀಡಿಯೊ ವೀಕ್ಷಣೆಗೆ ಹೇಳಿ ಮಾಡಿಸಿದಂಥ ಪ್ಲೇಯರ್.ಇದರ ಬೆಲೆ 5300 ರೂಪಾಯಿ.

4. ಅವೇರ್ ಮೀಡಿಯಾ ಅವೇರ್ ಲೈಫ್ HD ಸ್ಟುಡಿಯೋ O252 ನೆಟ್ವರ್ಕ್ ಮೀಡಿಯಾ ಪ್ಲೇಯರ್: ಶಕ್ತಿಶಾಲಿ HD 1080P ಹೊಂದಿರುವ ಪ್ಲೇಯರ್ ಆಗಿದ್ದು ಯಾವುದೇ ಸಮಯದಲ್ಲಿ ನಿಮಗೆ HD 1080P ವಿಡಿಯೋ ವನ್ನ ಟೀವಿ ಯಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದರ ಬೆಲೆ 5900 ರೂಪಾಯಿ.

5. ಇನ್ಟಕ್ಸ್ ಮಿನಿ ಹೋಂ ಸಿನಿಮಾ MHP-1080: ಈ ಪ್ಲೇಯರ್ ನಿಂದ ಯೂ.ಎಸ್.ಬಿ ಹಾಗು ಮೆಮೊರಿ ಕಾರ್ಡ್ ನಿಂದ ಮೀಡಿಯಾ ಫೈಲ್ ಗಳನ್ನ ಟೀ.ವಿ ಗೆ ಪ್ಲೇ ಮಾಡಬಹುದು.ಅದರ ಜೊತೆಗೆ ಈ -ಪುಸ್ತಕವನ್ನು ಓದಬಹುದು, ಚಿತ್ರಗಳನ್ನ ನೋಡಬಹುದು, ಹಾಡು ಕೇಳಬಹುದು ಕೂಡ.ಇದರ ಬೆಲೆ 3500 ರೂಪಾಯಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+