Home
ಸಂಗೀತ

ಅರಬನಿಯರ್ಸ್ ಸರಣಿ ಹೆಡ್ ಫೋನ್

ಅರಬನಿಯರ್ಸ್ ಸರಣಿ ಹೆಡ್ ಫೋನ್

ಆಡಿಯೊಫೈಲ್ಸ್ ಮತ್ತು ಆಡಿಯೊ ಸಾಧನ ವಿನ್ಯಾಸದ ಕೆಲಸಗಾರರಲ್ಲಿ ಜೊತೆಗೂಡಿ ತಯಾರಿಸಿದ ಗುಂಪನ್ನು ಅರಬನಿಯರ್ಸ್ ಎಂದು ಕರೆಯಲಾಗಿದೆ. ಇವರು ತುಂಬಾ ಉತ್ಸಾಹಿಗಳಾಗಿದ್ದು ಸಾಧಾರಣ ಆಡಿಯೊಗಳಿಗಿಂತ ಹೊಸ ಮಾದರಿಯ ಆಡಿಯೊಗಳನ್ನು ತಯಾರಿಸುವ ತುಡಿತ ಇವರಿಗೆ. ಈಗ ಈ ಗುಂಪು ಹೆಡ್ ಫೋನ್ ಗಳ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಹೆಡ್ ಫೋನ್ ಗಳು ನೋಡಲು ಸುಂದರವಾಗಿ, ಸರಳವಾಗಿ ಅತ್ಯಧಿಕ ಗುಣಮಟ್ಟವನ್ನು ಹೊಂದಿದೆ.

ಈ ಹೆಡ್ ಫೋನ್ ಸರಣಿಯಲ್ಲಿ ,ಅರಬನಿಯರ್ಸ್ ಕ್ವಿಲ್ಟಡ್ ಪ್ಲಾಟನ್ ಸಿರಿಸ್ ಹೆಡ್ ಫೋನ್ ಮೊದಲ ಹೆಡ್ ಫೋನ್ ಆಗಿದೆ. ಈ ಹೆಡ್ ಫೋನ್ ನೋಡಲು ಸರಳವಾಗಿದೆ. ಇವುಗಳು ಅನೇಕ ಬಣ್ಣದಲ್ಲಿ ಲಭ್ಯವಿದ್ದು ಗ್ರಾಹಕರು ತಮಗೆ ಇಷ್ಟ ಬಂದ ಬಣ್ಣವನ್ನು ಆಯ್ಕೆ ಮಾಡಬಹುದಾಗಿದೆ. ಇದರ ಹೆಡ್ ಬ್ಯಾಂಡ್ ಮತ್ತು ಇಯರ್ ಕಪ್ ಪ್ಲಶ್ ಪ್ಯಾಡಿಂಗ್ ಹೊಂದಿದೆ. ಇದರಲ್ಲಿ ಲ್ವಿಲ್ಟಡ್ ಹೊಲಿಗೆಯನ್ನು ಕಾಣಬಹುದು.

ಈ ಹೆಡ್ ಫೋನ್ ನಲ್ಲಿರುವ ಸೌಂಡ್ ಡ್ರೈವರ್ ಅನ್ನು ಕೈಯಿಂದಲೇ ಮಾಡಲಾಗಿದೆ. ಇದನ್ನು ಕೈಯಿಂದ ಮಾಡಿರುವುದರಿಂದ ಇದರ ಗುಣಮಟ್ಟ ಅತ್ಯುತ್ತಮವಾಗಿದೆ. ಇದು 3.5 mm ಜಾಕ್ ಹೊಂದಿದೆ. ಇದನ್ನು Mp3 ಪ್ಲೇಯರ್ ಗೆ ಮತ್ತು ಸ್ಮಾರ್ಟ್ ಫೋನ್ ಗಳಿಗೆ ಸುಲಭವಾಗಿ ಜೋಡಿಸ ಬಹುದಾಗಿದೆ. ಇದರ ಡ್ರೈವರ್ಸ್ 40 mm ಗಾತ್ರವನ್ನು ಹೊಂದಿದೆ. ಇದರ ಶಬ್ದದ ಕಂಪನಾಂಕ 20Hz ಯಿಂದ 20 KHzರವರೆಗೆ ಇದ್ದು 60 ohms ಇಂಪೆಡನ್ಸ್ ಹೊಂದಿದೆ. ಈ ಹೆಡ್ ಫೋನ್ ನ ಸೆನ್ಸಟಿವಿಟಿ 115 dB ಆಗಿದೆ.

ಈ ಹೆಡ್ ಫೋನ್ ಶಾಸ್ತ್ರೀಯ ಸಂಗೀತವನ್ನು ಕೇಳಲು ಹೇಳಿ ಮಾಡಿಸಿದ್ದಂತೆ ಇದೆ. ಈ ಹೆಡ್ ಫೋನ್ ಬಳಸಿ ಇತರರಿಗೆ ತೊಂದರೆ ಆಗದಂತೆ ಸಂಗೀತವನ್ನು ಕೇಳಬಹುದಾಗಿದ್ದು ಇದರ ಬೆಲೆ ರು.4, 000 ಆಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+