ನಿಮ್ಮ ಲೈಫ್ ಸ್ಟೈಲ್ ಗೆ ಸರಿ ಹೊಂದುವ ಯಮಾಹಾ ರೆಶ್ಯೂ

ಯಮಾಹಾ ಕಂಪನಿಯು ಮ್ಯೂಸಿಕ್ ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಹೊಸ ಸಂಗೀತ ಸಾಧನಗಳು ಮಾರುಕಟ್ಟೆಯನ್ನು ಅಲಂಕರಿಸುತ್ತಿವೆ. ಇದೀಗ ರೆಶ್ಯೂ ISX-800 ಎಂಬ ಸಾಧನವನ್ನು ಬಿಡುಗಡೆ ಮಾಡಿದೆ. ಈ ಸಾಧನವನ್ನು ಇಂದಿನ ಲೈಫ್ ಸ್ಟೈಲ್ ಆಧಾರಿಸಿ ತಯಾರಿಸಲಾಗಿದೆ. ಈ ಸಾಧನದಲ್ಲಿ ಸಿಡಿ ಪ್ಲೇಯರ್ ಇದ್ದು , ಡಕ್ ಅನ್ನು ಐಪೋಡ್, ಸ್ಪೀಕರ್, ಆಂಪ್ಲಿಫೈಯರ್, FM ಟ್ಯೂನರ್, USB ಪೋರ್ಟ್ ಮತ್ತು ಅಲಾರಾಂ ಗಡಿಯಾರಕ್ಕೆ ಜೋಡಿಸಬಹುದಾಗಿದೆ.
ಇದರ ವಿನ್ಯಾಸ ಚೌಕಾ ಆಕಾರದಲ್ಲಿದೆ. ಬಿಳಿ, ನೇರಳೆ, ಕಪ್ಪು, ಹಸಿರು ಹೀಗೆ ಆಕರ್ಷಕ ಬಣ್ಣವನ್ನು ಹೊಂದಿರುವ ಸಾಧನವನ್ನು ಹೊಂದಿದ್ದು ನೋಡಲು ತುಂಬಾ ಆಕರ್ಷಕವಾಗಿದೆ. ಆಲ್ಫಾನ್ಯೂಮರಿಕ್ ಡಿಸ್ ಪ್ಲೇಯಲ್ಲಿ ಇರುವುದನ್ನು ಓದಲು ಸ್ಪೀಕರ್ ಅನ್ನು ಕ್ಲೋಸ್ ಮಾಡಬೇಕಾದ ಅವಶ್ಯಕತೆಯಿಲ್ಲ. ಅದನ್ನು ದೂರದಿಂದಲೆ ಓದಬಹುದಾಗಿದೆ. 9 cm ದಪ್ಪದ ಈ ಸಾಧನವು ನೋಡಲು ಸಣ್ಣವಾಗಿದೆ. ಇದರಲ್ಲಿ ರಿಮೋಟ್ ಕಂಟ್ರೋಲ್ ಸಹ ನೀಡಲಾಗಿದ್ದು ಶಬ್ದದಲ್ಲಿ ಬದಲಾವಣೆ, ಹಾಡುಗಳನ್ನು ಹುಡುಕುವುದು, ರೇಡಿಯೊ ಸ್ಷೇಷನ್ ಬದಲಾಯಿಸುವುದು ಇವೆಲ್ಲವನ್ನು ಒಂದೇ ಬಟನ್ ಬಳಸಿ ಮಾಡಬಹುದಾಗಿದೆ.
ಇದರಲ್ಲಿ 4 ಇಂಚಿನ ಎರಡು ವೂಫರ್ಸ್ ಇದೆ. ಈ ಸಾಧನವನ್ನು ಐಫೋನ್ ಮತ್ತು ಐಪೋಡ್ ಗಳಲ್ಲೂ ಬಳಸಬಹುದಾಗಿದೆ. USB ಪೋರ್ಟ್ ಬಳಸಿ USB ಮ್ಯೂಸಿಕ್ ಸ್ಟಿಕ್ ಮತ್ತು ಡಾಡಾ ಟ್ರಾವೆಲೆರ್ಸ್ ಅನ್ನು ರೆಶ್ಯೂಗೆ ಜೋಡಿಸಿ ಸಂಗೀತವನ್ನು ಕೇಳಬಹುದಾಗಿದೆ.ಈ ರೆಶ್ಯೂದಲ್ಲಿ ಯಾವುದೆ ನೆಟ್ ವರ್ಕಿಂಗ್ ಸೌಲಭ್ಯ ಅಂದರೆ ಬ್ಲೂಟೂಥ್, ವೈಫೈ , ಏರ್ ಪ್ಲೇ ನೀಡಲಾಗಲಿಲ್ಲ.ಇದು ಅಧಿಕ ಕಂಪನಾಂಕದ ಶಬ್ದವನ್ನು ನೀಡುವ ಸಾಮರ್ಥ್ಯ ಹೊಂದಿದ್ದು ಇದನ್ನು ಬಳಸಿ ಮನೆಯಲ್ಲಿ ಸಂಗೀತವನ್ನು ಉತ್ತಮ ಗುಣಮಟ್ಟದಲ್ಲಿ ಕೇಳಬಹುದಾಗಿದೆ.
ಈ ಯಮಾಹಾ ರೆಶ್ಯೂ ISX-800 ಮಾರುಕಟ್ಟೆಯಲ್ಲಿ ಲಭ್ಯವಿದ್ದು , ಇದು ರು. 40,000ಕ್ಕಿಂತ ಅಧಿಕ ಬೆಲೆಯನ್ನು ಹೊಂದಿದೆ.


Click it and Unblock the Notifications








