ನೋಕಿಯಾ ಪ್ರೀ-ಪೇಯ್ಡ್ ಮನಿ ಸೇವೆ ಮಾರ್ಚ್ 15 ರ ವರೆಗೆ ಮಾತ್ರ

Posted By: Varun
ನೋಕಿಯಾ ಪ್ರೀ-ಪೇಯ್ಡ್ ಮನಿ ಸೇವೆ ಮಾರ್ಚ್ 15 ರ ವರೆಗೆ ಮಾತ್ರ

ಫಿನ್ಲ್ಯಾಂಡ್ ನ ಖ್ಯಾತ ಮೊಬೈಲ್ ಉತ್ಪಾದಕ ನೋಕಿಯಾ, ತನ್ನ ಪ್ರೀ-ಪೇಯ್ಡ್ ಮನಿ ಸೇವೆಯನ್ನು ವಿಶ್ವದಾದ್ಯಂತ ನಿಲ್ಲಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ತನ್ನ ಮೂಲ ವ್ಯವಹಾರವಲ್ಲದ ಹಣಕಾಸು ವಾಹಿವಾಟಿನಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಈ ರೀತಿಯ ನಿರ್ಣಯ ತೆಗೆದುಕೊಂಡಿದೆ.

ಅಂದ ಹಾಗೆ ನೋಕಿಯಾ ಮನಿ ಒಂದು ಪ್ರೀ-ಪೇಯ್ಡ್ ಖಾತೆಯಾಗಿದ್ದು, ನೋಕಿಯಾದ ಗ್ರಾಹಕರು ಇದರ ಮೂಲಕ ಬಿಲ್ ಕಟ್ಟಬಹುದಾಗಿದ್ದು, ರೀ-ಚಾರ್ಜ್ ಕೂಡ ಮಾಡಬಹುದಿತ್ತು.

2010 ರಲ್ಲಿ ಈ ಸೇವೆಯನ್ನು ಎಸ್ ಬ್ಯಾಂಕ್ ಹಾಗು ಯೂನಿಯನ್ ಬ್ಯಾಂಕ್ ನ ಜೊತೆ ಆರಂಭಿಸಿದ್ದ ನೋಕಿಯಾದ ಈ ಸೇವೆಯನ್ನು ಅಂದಾಜು 12 ಲಕ್ಷ ಗ್ರಾಹಕರು ಉಪಯೋಗಿಸುತ್ತಿದ್ದಾರೆ. ನೋಕಿಯಾ ಮಾರ್ಚ್ 15 ರ ನಂತರ ಈ ಸೇವೆಯನ್ನು ಸ್ಥಗಿತಗೊಳಿಸಲಿದ್ದು, ತನ್ನ ಗ್ರಾಹಕರು ನೋಕಿಯಾ ಮನಿಯ ಹಣವನ್ನು ಉಪಯೋಗಿಸಲು 3 ತಿಂಗಳು ಗಡುವು ಕೊಡಲಿದೆ. ನೀವೇನಾದರೂ ನೋಕಿಯಾ ಮನಿಯ ಚಂದಾದಾರರಾಗಿದ್ದರೆ, ಇನ್ನೂ 3 ತಿಂಗಳೊಳಗೆ ಆ ಹಣವನ್ನು ಬಳಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot