ಅಂತರ್ಜಾಲದ ವೇಗ ಹೆಚ್ಚಿಸಲು ಹೊಸ ತಂತ್ರಜ್ಞಾನ

By Varun
|
ಅಂತರ್ಜಾಲದ ವೇಗ ಹೆಚ್ಚಿಸಲು ಹೊಸ ತಂತ್ರಜ್ಞಾನ

ಅಂತರ್ಜಾಲದಲ್ಲಿ ಮಿಂಚಿನ ವೇಗ, ದೃಢವಾದ ಸಂಪರ್ಕ ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜಾಲಬಂಧ ಸಾಮರ್ಥ್ಯದಲ್ಲಿ ದೊಡ್ಡ ಏರಿಕೆ ಈಗ ಸಾಧ್ಯವಾಗಲಿದೆ ಒಂದು ಹೊಸ ಯೋಜನೆಯಡಿ.

ಯುರೋಪಿಯನ್ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಒಕ್ಕೂಟವು, ಫೈಬರ್ ಆಪ್ಟಿಕ್ ತಂತ್ರಜ್ಞಾನದಹೊಸ ಯೋಜನೆಯನ್ನು "ಸರ್ದನ" ಎಂಬ ಹೆಸರಿನಲ್ಲಿ ಯೋಜನೆಯನ್ನು ಪ್ರಾರಂಭಿಸಿದ್ದು, ಇಂದಿನ ಇಂಟರ್ನೆಟ್ ವೇಗಕ್ಕಿಂತಲೂ 2,000 ಪಟ್ಟು ಕ್ಷಿಪ್ರವಾಗಿ, ಅಂದರೆ ಪ್ರತಿ ಸೆಕೆಂಡ್ ಗೆ 10 ಗಿಗಾಬೈಟ್ (Gbps) ವರೆಗಿನ ವೇಗವನ್ನು ಪ್ರದರ್ಶಿಸಿದೆ.

ಈ ರೀತಿಯ ವೇಗವು ಅಸ್ತಿತ್ವದಲ್ಲಿರುವ ಫೈಬರ್ ಸೌಕರ್ಯ ಬಳಸಿ ಅಲ್ಪ ಪ್ರಮಾಣದ ಹೆಚ್ಚುವರಿ ವೆಚ್ಚದಲ್ಲಿ ಸಾಧಿಸಬಹುದು ಎಂದು ತೋರಿಸಿಕೊಟ್ಟಿದೆ. ಮುಂದಿನ 3 ವರ್ಷದಲ್ಲಿ ಅಂತರ್ಜಾಲದ ಸಂಚಾರ ದಟ್ಟಣಿ ಒಂದು ಟ್ರಿಲಿಯನ್ ಗಿಗಾಬೈಟಿನಲ್ಲಿಅಳತೆ ಮಾಡುವಷ್ಟು ಹೆಚ್ಚಲಿದ್ದು ಈ ರೀತಿಯ ಸಂಚಾರಕ್ಕೆ ಬೇಕಾಗುವ ಅಂತರ್ಜಾಲದ ವೇಗ ಆಪ್ಟಿಕಲ್ ಫೈಬರ್ ತಂತ್ರಜ್ಞಾನದಿಂದ ಸಾಧ್ಯವಾಗಲಿದೆಯಂತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X