Subscribe to Gizbot

ಶೌಚಾಲಯಕ್ಕಿಂತ ಮೊಬೈಲುಗಳೇ ಹೆಚ್ಚಂತೆ ಭಾರತದಲ್ಲಿ

Posted By: Varun
ಶೌಚಾಲಯಕ್ಕಿಂತ ಮೊಬೈಲುಗಳೇ ಹೆಚ್ಚಂತೆ ಭಾರತದಲ್ಲಿ

ಈ ಸುದ್ದಿ ಓದಿ ಅಚ್ಚರಿ ಪಡಬೇಡಿ. ಭಾರತದ ಸೆನ್ಸಸ್ 2011 ರ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ 46.9 % ನಷ್ಟು ಜನರಿಗೆ ಮಾತ್ರ ಶೌಚಾಲಯದ ಸೌಲಭ್ಯವಿದ್ದು ಅದೇ 63 .2 % ಜನರ ಹತ್ತಿರ ದೂರವಾಣಿ ಸಂಪರ್ಕವಿದ್ದು, ಶೇಕಡಾ 53.2 ರಷ್ಟು ಜನರು ಮೊಬೈಲ್ ಹೊಂದಿದ್ದಾರಂತೆ.ಅತೀ ಹೆಚ್ಚು ಮೊಬೈಲ್ ಬಳಕೆದಾರರು ಲಕ್ಷದ್ವೀಪದಲ್ಲಿದ್ದು (93.6 %) ನಂತರದ ಸ್ಥಾನವನ್ನು ದೆಹಲಿ( 90.8 %) ಹೊಂದಿದೆ.

ಒಂದು ಅಂದಾಜಿನ ಪ್ರಕಾರ ಶೌಚಾಲಯವನ್ನು ಕಟ್ಟಿಸಲು ಕನಿಷ್ಠ 1500 ರೂಪಾಯಿ ಬೇಕಾಗಿದ್ದು ಅದೇ ಒಂದು ಮೊಬೈಲ್ ಕೊಳ್ಳಲು 500 ರೂಪಾಯಿ ಸಾಕು. ಹಾಗಾಗಿಯೇ ಇರಬೇಕು ನಮ್ಮ ದೇಶದಲ್ಲಿ ಶೌಚಾಲಯಕ್ಕಿಂತ ಮೊಬೈಲುಗಳೇ ಜಾಸ್ತಿ.

 

 

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot