ಕೆಲಸ ಸಿಗಬೇಕಾ? ಫೇಸ್ ಬುಕ್ ನಲ್ಲಿ ಹುಷಾರಾಗಿರಿ

Posted By: Varun
ಕೆಲಸ ಸಿಗಬೇಕಾ? ಫೇಸ್ ಬುಕ್ ನಲ್ಲಿ ಹುಷಾರಾಗಿರಿ

ಕಷ್ಟ ಪಟ್ಟು ಓದಿದ ಮೇಲೆ ಕೆಲಸ ಹುಡುಕಲು ಎಷ್ಟೆಲ್ಲಾ ಪರದಾಡಬೇಕು ಅಲ್ಲವೆ. ಒಳ್ಳೆಯ ಅಂಕ ಇದ್ದರೂ ಕೆಲವೊಮ್ಮೆ ಅದೃಷ್ಟ ನೆಟ್ಟಗಿಲ್ಲದಿದ್ದರೆ ಸಿಗುವ ಕೆಲಸವೂ ಸಿಗದು. ರೆಸ್ಯೂಮೆಯಲ್ಲಿ ನಾವೇನೇ ಪುಂಗಿ ಓದಿದರೂ ನಮ್ಮ ವ್ಯಕ್ತಿತ್ವದ ಅಸಲೀ ಬಂಡವಾಳವನ್ನು ಸಂದರ್ಶನದಲ್ಲಿ ಕಂಡುಹಿಡಿಯುತ್ತಾರೆ.

ಈಗ ಕಂಪನಿಗಳು ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ಲಿಂಕ್ಡ್ ಇನ್ ಹಾಗು ಯೂಟ್ಯೂಬಿನಲ್ಲಿ ನಿಮ್ಮ ಪ್ರೊಫೈಲ್ ಗಮನಿಸಿನೀವು ನಡೆಸುವ ಚಟುವಟಿಕೆಗಳ ಮಾಹಿತಿ ಕಲೆಹಾಕಿ ತಿಳಿದುಕೊಳ್ಳುತ್ತವೆ.

ಯೂರೋಕಾಂ ವರ್ಲ್ಡ್ ವೈಡ್ ಟೆಕ್ನಾಲಜಿ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ 5 ಅರ್ಜಿದಾರರಲ್ಲಿ ಒಬ್ಬರಿಗೆ ಕೆಲಸ ಸಿಗದಿರಲು ಕಾರಣ, ಅವರು ಸಾಮಾಜಿಕ ಜಾಲತಾಣದಲ್ಲಿ ನಡೆಸುವ ಚಟುವಟಿಕೆ. ಹೀಗಾಗಿ ನೀವು ನಿಮ್ಮ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ. ನಿಮ್ಮ ಪ್ರೊಫೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ಹಾಕುವುದು, ನಿಮ್ಮ ಬಗ್ಗೆ ನೀವೇ ಬಯೋ ಡೇಟಾದಲ್ಲಿರದ ಮಾಹಿತಿ ಹಾಕುವುದುಮಾಡಬೇಡಿ.ಈ ರೀತಿಪ್ರೊಫೈಲ್ ನಲ್ಲಿಇದ್ದರೆ ಕೂಡಲೇ ಅದನ್ನು ಡಿಲೀಟ್ ಮಾಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot