Subscribe to Gizbot

ವಿಶ್ವದ ಅತ್ಯಂತ ಪ್ರಶಂಸನೀಯ ಕಂಪನಿ ಆಪಲ್:ಫಾರ್ಚೂನ್

Posted By: Varun
ವಿಶ್ವದ ಅತ್ಯಂತ ಪ್ರಶಂಸನೀಯ ಕಂಪನಿ ಆಪಲ್:ಫಾರ್ಚೂನ್

ಜಗತ್ತಿನ ಹೆಸರಾಂತ ಬಿಸಿನೆಸ್ ಮ್ಯಾಗಜೀನ್ ಫಾರ್ಚೂನ್, "ವಿಶ್ವದ ಅತ್ಯಂತ ಪ್ರಶಂಸನೀಯ ಕಂಪನಿಗಳು -2012" ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೆಕ್ ದೈತ್ಯ ಆಪಲ್ ಗೆ ಈ ಪಟ್ಟ ದೊರೆತಿದೆ. ಆಪಲ್ ನ ಉತ್ಕೃಷ್ಠ ಗುಣಮಟ್ಟ ಹಾಗು ಮುಂಚೂಣಿ ತಂತ್ರಜ್ಞಾನ ಹಾಗು ದೀರ್ಘಕಾಲದ ಗುರಿಯೊಂದಿಗೆ ಸ್ಪಷ್ಟ ಉದ್ದೇಶವಿರುವ ಕಂಪನಿ ಎಂದು ಗುರುತಿಸಿ ಈ ಪಟ್ಟ ಕೊಡಲಾಗಿದೆ.

ಸತತ 15 ವರ್ಷದಿಂದ ಫಾರ್ಚೂನ್ ಮ್ಯಾಗಜೀನ್ ಈ ರೀತಿಯ ಪಟ್ಟಿಯನ್ನು ಘೋಷಿಸುತ್ತಿದ್ದು, ಈ ಪಟ್ಟಿಯಲ್ಲಿ ಬರಲು ಹಲವಾರು ಕಂಪನಿಗಳಿಗೆ ಪ್ರತಿಷ್ಠೆಯ ವಿಷಯವಾಗಿರುತ್ತದೆ. ಟೆಕ್ ಜಗತ್ತಿನ ಇನ್ನಿತರ ಕಂಪನಿಗಳಾದ ಗೂಗಲ್, ಅಮೆಜಾನ್ ಹಾಗು ಐಬಿಎಂ ಕಂಪನಿಯೂ ಕೂಡ ಈ ಪ್ರತಿಷ್ಟಿತ ಪಟ್ಟಿಯಲ್ಲಿ ಸೇರಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot