ಭಾರತದ GSM ಸಿಮ್ ಫೋನುಗಳು ಸುಲಭವಾಗಿ ಹ್ಯಾಕ್!

Posted By: Varun
ಭಾರತದ GSM ಸಿಮ್ ಫೋನುಗಳು ಸುಲಭವಾಗಿ ಹ್ಯಾಕ್!

ಮೊಬೈಲ್ ಫೋನುಗಳನ್ನು ಯಾವ ರೀತಿ ಸಂರಕ್ಷಿಸಿದರೂ ಸಾಲದು ಈ ಕಾಲದಲ್ಲಿ. ಭಯೋತ್ಪಾದಕರು ಅನಧೀಕೃತ ಸಿಮ್ ಬಳಸಿದ್ದಾಯ್ತು. ಸ್ಮಾರ್ಟ್ ಫೋನುಗಳ ಮಾಹಿತಿ ಕಳುವು ಮಾಡುವ ಸುದ್ದಿ ಬಂತು. ಈಗ ನೀವು ಉಪಯೋಗಿಸುವ ಜಿಎಸ್ಎಂ ಸಿಮ್ ಅನ್ನೇ ಹ್ಯಾಕ್ ಮಾಡಬಹುದಂತೆ!

ಭಾರತದಲ್ಲಿ ಉಪಯೋಗಿಸಲ್ಪಡುವ ಸಿಮ್ ಗಳು ಅಸುರಕ್ಷಿತವಾಗಿದ್ದು ಮ್ಯಾಟ್ರಿಕ್ಸ್ ಶೆಲ್ ಎಂಬ ಕಂಪನಿಯು ಜಿಎಸ್ಎಂ ಸಿಮ್ ಅನ್ನು ಹ್ಯಾಕ್ ಮಾಡಿ ತೋರಿಸಿದ್ದಾರೆ. ಪ್ರತೀ ಸಿಮ್ಮಿಗೇವಿಶೇಷವಾಗಿರುವ ಅಂತರರಾಷ್ಟ್ರೀಯ ಮೊಬೈಲ್ ಚಂದಾದಾರರ ಗುರುತಿನ ಸಂಖ್ಯೆಯನ್ನು ಉಪಯೋಗಿಸಿಕೊಂಡು ಕರೆ ಹಾಗು ಎಸ್ಎಂಎಸ್ ಕೂಡ ಮಾಡಿದ ಮ್ಯಾಟ್ರಿಕ್ಸ್ ಶೆಲ್ ತಂಡದ ಸದಸ್ಯರು ನಮ್ಮಲ್ಲಿ ಉಪಯೋಗಿಸುವ ಸಿಮ್ ಎಷ್ಟು ದುರ್ಬಲವಾಗಿದೆ ಎಂದು ತೋರಿಸಿದ್ದಾರೆ.

ಭಾರತದಲ್ಲಿ ಬಹುತೇಕ ಜನರು ಜಿಎಸ್ಎಂ ಸಿಮ್ ಉಪಯೋಗಿಸುತ್ತಿದ್ದು, ಸೇವೆ ನೀಡುತ್ತಿರುವ ಮೊಬೈಲು ಕಂಪನಿಗಳು, ಗೂಢಲಿಪೀಕರಣ ಇರುವ ಸಿಮ್ ಅನ್ನೇ ಬಳಸಬೇಕು. ಆದರೆ ಈಗಿರುವ ಸಿಮ್ಮಿಗೆಯಾವುದೇ ರೀತಿಯ ಗೂಢಲಿಪೀಕರಣ (encryption) ಇಲ್ಲದ ಕಾರಣ ಹ್ಯಾಕರುಗಳಿಗೆ ನಮ್ಮ ಸಿಮ್ ಸುಲಭದ ತುತ್ತಾಗಲಿದೆ ಎಂಬುದು ನಿಜಕ್ಕೂ ಕಳವಳಕಾರಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot