ನೋಕಿಯಾ ಟ್ಯಾಟೂ:ಕರೆ ಬಂದರೆ ವೈಬ್ರೇಟು

Posted By: Varun
ನೋಕಿಯಾ ಟ್ಯಾಟೂ:ಕರೆ ಬಂದರೆ ವೈಬ್ರೇಟು

ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಈಗಂತೂ ಶೋಕಿಯಾಗಿಬಿಟ್ಟಿದೆ. ಎಲ್ಲೆಂದರಲ್ಲಿ ವಿಧವಿಧವಾದ ಬಣ್ಣಬಣ್ಣದ ಟ್ಯಾಟೂಗಳನ್ನು ನೀವೂ ನೋಡಿರುತ್ತೀರಿ. ಇದಕ್ಕೆ ಕಿಚ್ಚು ಹತ್ತಿಸಲು ನೋಕಿಯಾ ಮೊನ್ನೆ ತಾನೇ ಹೊಸ ಟ್ಯಾಟೂ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದುಕೊಂಡಿದೆ.

ಟ್ಯಾಟೂಗೂ ನೋಕಿಯಾಗೂ ಏನಪ್ಪಾ ಸಂಬಂಧ ಎಂದುಕೊಂಡಿರಾ? ಇದೆ ಸ್ವಾಮಿ. ನೋಕಿಯಾದ ಈ ಟ್ಯಾಟೂವನ್ನು ನೀವು ಹಾಕಿಸಿಕೊಂಡರೆ ಸಾಕು ನಿಮ್ಮ ಮೊಬೈಲ್ ವೈಬ್ರೇಶನ್ಮೋಡ್ ನಲ್ಲಿದ್ದು ಕರೆ ಅಥವಾ ಎಸ್.ಎಂ.ಎಸ್ ಬಂದರೆ ಹೇಗೆ ವೈಬ್ರೇಶನ್ ಆಗುತ್ತದೋ ಅದೇ ರೀತಿ ವೈಬ್ರೇಟ್ ಆಗುತ್ತದೆ ನೀವು ಟ್ಯಾಟೂ ಹಾಕಿಸಿಕೊಂಡ ಜಾಗ!

ಬ್ಲೂಟೂತ್ ಹೆಡ್ ಸೆಟ್ ಉಪಯೋಗಿಸುವಾಗ ಹೇಗೆ ನಿಮ್ಮ ಮೊಬೈಲ್ ಅನ್ನು ಕನೆಕ್ಟ್ ಮಾಡಿರುತ್ತೀರೋ ಹಾಗೆಯೇ ಈ ಟ್ಯಾಟೂವನ್ನು ನಿಮ್ಮ ಮೊಬೈಲ್ ಗೆ ಕನೆಕ್ಟ್ ಮಾಡಿಕೊಂಡು ಬೇಕಾದಾಗ ಸೆಟ್ಟಿಂಗ್ಸ್ ಮಾಡಿಕೊಂಡು ಅಲರ್ಟ್ಸ ಪಡೆಯಬಹುದು.ಆಯಸ್ಕಾಂತೀಯ ತಂತ್ರಜ್ಞಾನದಿಂದ ಕೆಲಸಮಾಡುವ ಈ ಟ್ಯಾಟೂವನ್ನು ಶಾಶ್ವತವಾಗಿ ಇಲ್ಲವೆ ತಾತ್ಕಾಲಿಕವಾಗಿಯೂ ಹಾಕಿಸಿಕೊಳ್ಳಬಹುದು.

ನೀವು ಹಚ್ಚೆ ಹಾಕಿಸಿಕೊಂಡಮೇಲೆ ವೈಬ್ರೇಟ್ ಆದರೆ ತಕ್ಷಣ ನೀವು "ಮನೆಯಿಂದ ಕರೆ ಬಂದಿದೆ" ಎಂದು ಹಾಡಬಹುದು, ಫೋನ್ ನೋಡದೆಯೇ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot