ದೇಶಕ್ಕೆ BPO ಕೆಲಸ ಇನ್ನು 10 ವರ್ಷ ಮಾತ್ರ :ವರದಿ

By Varun
|
ದೇಶಕ್ಕೆ BPO ಕೆಲಸ ಇನ್ನು 10 ವರ್ಷ ಮಾತ್ರ :ವರದಿ

ಜಗತ್ತಿನೆಲ್ಲೆಡೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದರಲ್ಲೂ ಐಟಿ ಹಾಗು ಹೊರಗುತ್ತಿಗೆ ಕೆಲಸಕ್ಕೆ ಹೊಡೆತ ಬಿದ್ದಿರುವುದು ಕಳವಳಕಾರಿ ವಿಷಯವೇ. ಭಾರತಕ್ಕೆ ಗಮನಾರ್ಹ ವಿದೇಶೀ ವಿನಿಮಯ ತಂದುಕೊಡುವ ಐಟಿ ಹಾಗು ಹೊರಗುತ್ತಿಗೆ ಆಧಾರಿತ ಸೇವೆಗಳ ಕೆಲಸಗಳೂ ಕಡಿಮೆಯಾಗಿವೆ.

ಗಾಯದ ಮೇಲೆ ತುಪ್ಪ ಸುರಿದಂತೆ ಅಮೇರಿಕಾ ಮೂಲದ ಸಲಹಾ ಮತ್ತು ಸಂಶೋಧನಾ ಸಂಸ್ಥೆ ಹ್ಯಾಕೆಟ್ ಮಾಡಿರುವ ವರದಿಯ ಪ್ರಕಾರ ಇನ್ನು 8 -10 ವರ್ಷಗಳಲ್ಲಿ ಭಾರತಕ್ಕೆ ಬರುತ್ತಿರುವ ಹೊರಗುತ್ತಿಗೆ ಕೆಲಸ ಕೊನೆಗೊಳ್ಳಲಿದೆ ಎಂದು ತಿಳಿಸಿದೆ.

ಏಕೆಂದರೆ ಭಾರತಕ್ಕೆ ಹೊರಗುತ್ತಿಗೆಯಾಗುತ್ತಿರುವ ವಿಶ್ವದ 40 % ಕೆಲಸ 2014 ರ ವೇಳೆಗೆ ಕಡಿಮೆಯಾಗಲಿದ್ದು, ಇನ್ನು 10 ವರ್ಷಗಳಲ್ಲಿ ಅಮೇರಿಕಾ ಹಾಗು ಯುರೋಪ್ ಕಂಪನಿಗಳು ಹೊರಗುತ್ತಿಗೆ ಕೊಡಲು ಕೆಲಸವೇ ಇರುವುದಿಲ್ಲವಾದರಿಂದ ಭಾರತಕ್ಕೆ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X