5 ಸಾವಿರಕ್ಕೆ ಟಾಪ್ 5 ಮ್ಯೂಸಿಕ್ ಪ್ಲೇಯರ್

Posted By: Varun
5 ಸಾವಿರಕ್ಕೆ ಟಾಪ್ 5 ಮ್ಯೂಸಿಕ್ ಪ್ಲೇಯರ್

ನಮ್ಮ ಮಾರುಕಟ್ಟೆಯಲ್ಲಿ ಕಡಿಮೆ ದರ್ಜೆಯ ಚೀನೀ MP 3 ಪ್ಲೇಯರುಗಳಿಂದ ಹಿಡಿದು ಆಪಲ್ ನ ಶ್ರೀಮಂತ ಫೀಚರುಗಳಿರುವ ಐಪಾಡ್ ವರೆಗೂ ಎಲ್ಲ ರೀತಿಯ ಮಾಡಲ್ ಗಳು ಸಿಗಲಿವೆ.ಆದರೆ ನಿಮ್ಮಬಜೆಟ್, ಅಗತ್ಯತೆ ಹಾಗು ಸ್ಪೆಸಿಫಿಕೇಶಷನ್ನುಗಳನ್ನು ಗಮನದಲ್ಲಿ ಇಟ್ಟುಕೊಂಡು 5000 ರೂಪಾಯಿಯೊಳಗೆ ಸಿಗುವ ಟಾಪ್ 5, MP3 ಪ್ಲೇಯರ್ ಗಳ ಪಟ್ಟಿ ಸಿದ್ದಪಡಿಸಿದ್ದೇವೆ.

ಆಪಲ್ ಐಪಾಡ್ ಶಫಲ್ :ಆಪಲ್ ಉತ್ಪನ್ನವೆಂದರೆ ದೂಸ್ರಾ ಮಾತೇ ಇಲ್ಲ. ಅವುಗಳ ಗುಣಮಟ್ಟ ಹಾಗಿರುತ್ತದೆ. ಈ ಶಫಲ್ ಪ್ಲೇಯರ್ 2GB ಕೆಪಾಸಿಟಿ ಹೊಂದಿದ್ದು, 15 ಗಂಟೆ ನಿರಂತರ ಹಾಡು ಕೇಳಬಹುದಾದ ಬ್ಯಾಕಪ್ ಇದ್ದು,5ಬಣ್ಣಗಳಲ್ಲಿಬರಲಿದೆ.3200 ರೂಪಾಯಿಗೆ ಲಭ್ಯ.

ಫಿಲಿಪ್ಸ್ ಗೋಗೇರ್ ರಾಗ :4GB ಸಾಮರ್ಥ್ಯದ ಈ MP3 ಪ್ಲೇಯರ್ ನಲ್ಲಿ ಎಫ್ಎಂ ಕೂಡ ಇದೆ. 22 ಗಂಟೆ ಮ್ಯೂಸಿಕ್ ಕೇಳಬಹುದಾದ ಬ್ಯಾಕ್ಅಪ್ ಇದೆ. ಇದರ ಬೆಲೆ 2,999 ರೂಪಾಯಿ.

ಸೋನಿ NWZ-B173F :ಆಂತರಿಕ USB, 4GB ಸಾಮರ್ಥ್ಯ, 18 ಗಂಟೆ ಬ್ಯಾಟರಿ ಸಾಮರ್ಥ್ಯ, 3 ಸಾಲಿನ LCD ಡಿಸ್ಪ್ಲೇ ಹಾಗು ಎಫ್ಎಂ, ಇದರ ವಿಶೇಷಗಳು. 3,990 ಇದು ಲಭ್ಯವಿದೆ.

ಟ್ರ್ಯಾನ್ಸೆಂಡ್ MP330 :8 GB ಆಂತರಿಕ ಮೆಮೊರಿ ಸಾಮರ್ಥ್ಯದ ಈ ಪ್ಲೇಯರ್ ಪೆನ್ ಡ್ರೈವ್ ನಂತೆ ಡಿಸೈನ್ ಹೊಂದಿದೆ. 1ಇಂಚ್ ಡಿಸ್ಪ್ಲೇ , 12 ಗಂಟೆ ಆಡಿಯೋ ಪ್ಲೆಯ್ ಬ್ಯಾಕ್, ವಾಯ್ಸ್ ರೆಕಾರ್ಡರ್, ಎಫ್ಎಂ, ಸ್ವಯಂಚಾಲಿತ ಆಫ್, ಹಾಗು ಟೈಮರ್ ಕೂಡ ಇದೆ.2700 ರೂಪಾಯಿಗೆ ಇದು ಲಭ್ಯ.

ಕ್ರಿಯೇಟಿವ್ ನ Zen Style M 3೦೦ :8 GB ಸಾಮರ್ಥ್ಯದ, 1.45 ಇಂಚ್ ಡಿಸ್ಪ್ಲೇ, 20 ಗಂಟೆ ಬ್ಯಾಕಪ್ ಸಾಮರ್ಥ್ಯ, ಬ್ಲೂಟೂತ್ ಜೊತೆಗೆ ಮೈಕ್ರೋ SD ಕಾರ್ಡ್ ಉಪಯೋಗಿಸಿ 32 GB ವರೆಗೂವಿಸ್ತರಿಸಬಹುದಾದ ಸೌಲಭ್ಯ.ಇದರ ಬೆಲೆ 4,700 ರೂಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot