ಫೇಸ್ ಬುಕ್ ಇನ್ಫೋಗ್ರಾಫಿಕ್ ಮತ್ತಷ್ಟು ಕಿಕ್

Posted By: Varun
ಫೇಸ್ ಬುಕ್ ಇನ್ಫೋಗ್ರಾಫಿಕ್ ಮತ್ತಷ್ಟು ಕಿಕ್

ಸುದ್ದಿ ಓದುವ, ತಿಳಿದುಕೊಳ್ಳುವ ನಮಗೆ ಯಾವುದೇ ಮಾಹಿತಿ ಚಿತ್ರದ ಮೂಲಕ ಗ್ರಹಿಸಿದರೆ ಮನಸಿನ ಪುಟದಲ್ಲಿ ಅಚ್ಚೊತ್ತಿರುತ್ತದೆ.

ಸುದ್ದಿಯನ್ನು ಆಕರ್ಷಕ ಚಿತ್ರಗಳು, ಅಂಕಿ ಅಂಶಗಳು ಹಾಗು ವಿಶ್ಲೇಷಣಾತ್ಮಕ ವಾಕ್ಯಗಳೊಡನೆ ವ್ಯಕ್ತಪಡಿಸುವುದಕ್ಕೆ ಇನ್ಫೋಗ್ರಾಫಿಕ್ ಎನ್ನುತ್ತೇವೆ. ನೀವೂ ನಮ್ಮ ಕೆಲವು ಇನ್ಫೋಗ್ರಾಫಿಕ್ ಅಂಕಣಗಳನ್ನ ಗಿಜ್ಬಾಟ್ ನಲ್ಲಿ ಓದಿರುತ್ತೀರಿ.

ಇಂತಹ ಇನ್ಫೋಗ್ರಾಫಿಕ್ ಮೂಲಕ ನಿಮ್ಮ ಫೇಸ್ ಬುಕ್ ಚಟುವಟಿಕೆಗಳನ್ನು ವರ್ಣರಂಜಿತವಾಗಿ ನೋಡಲು ಒಂದು ಆಪ್ (App) ಬಂದಿದೆ. ನಿಮ್ಮ ಫೇಸ್ ಬುಕ್ ಮಾಹಿತಿಯನ್ನು ಕಲೆಹಾಕಿ ನೀವು ಎಷ್ಟು ಸ್ನೇಹಿತರನ್ನು ಮಾಡಿಕೊಂಡಿದ್ದೀರ, ನಿಮ್ಮ ಲೈಕ್ಸ್, ಪೋಸ್ಟ್ ಗಳು, ಯಾರು ಹೆಚ್ಚು ಬಾರಿ ಇಷ್ಟಪಟ್ಟಿದ್ದಾರೆ, ಯಾವ ದಿನ ನೀವು ಹೆಚ್ಚು ಫೇಸ್ ಬುಕ್ ನಲ್ಲಿ ಆಕ್ಟಿವ್ ಆಗಿರುತ್ತೀರ, ಹೀಗೆ ಹಲವಾರು ವಿಶ್ಲೇಷಣೆ ಹೊಂದಿರುವ ಸುಂದರವಾದ ಇನ್ಫೋಗ್ರಾಫಿಕ್ ಅನ್ನು ಮಾಡಿಕೊಡುತ್ತದೆ ಗೆಟ್ ಅಬೌಟ್ ಮಿ ವೆಬ್ಸೈಟ್ ನಲ್ಲಿರುವ ಈ ಆಪ್.

ನಿಮ್ಮ ಫೇಸ್ ಬುಕ್ ಇನ್ಫೋಗ್ರಾಫಿಕ್ ಅನ್ನು ನೋಡಲು ಹಾಗು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಲು ಭೇಟಿಕೊಡಿ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot