Subscribe to Gizbot

ದಾರಿ ತಪ್ಪಿಸುವ ಮೊಬೈಲ್ ಪ್ಲಾನ್ ಜಾಹೀರಾತು ನಿಲ್ಲಿಸಿ :ಟ್ರಾಯ್

Posted By: Varun
ದಾರಿ ತಪ್ಪಿಸುವ ಮೊಬೈಲ್ ಪ್ಲಾನ್ ಜಾಹೀರಾತು ನಿಲ್ಲಿಸಿ :ಟ್ರಾಯ್

ಇನ್ನುಮೇಲೆ ನಿಮ್ಮ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು ತಾವು ಹೊರತರುವ ಯಾವುದೇ ಹೊಸ ಟಾರಿಫ್ ಪ್ಲಾನ್ ಜಾಹೀರಾತನ್ನು ವಿವರವಾಗಿ ಗ್ರಾಕಕರಿಗೆ ತಿಳಿಸಬೇಕೆಂದು ಆದೇಶಿಸಿದೆ ಟ್ರಾಯ್.

ಟೆಲಿಕಾಂ ಕಂಪನಿಗಳಾದ ಏರ್ಟೆಲ್, ವೊಡಫೋನ್, ರಿಲಯನ್ಸ್, ಟಾಟಾ, ಐಡಿಯಾ, ಬಿಎಸ್ಏನ್ಎಲ್ ಹಾಗು ಇನ್ನಿತರ ಟೆಲಿಕಾಂ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡ ಟ್ರಾಯ್, ಜಾಹೀರಾತಿನಲ್ಲಿ ಯಾವುದೇ ಹೊಸ ಪ್ಲಾನ್ ಬಂದಾಗ ಕೊಡುವ ಜಾಹೀರಾತಿನಲ್ಲಿ ಕರೆಗಳ ಶುಲ್ಕ, ಇತರೆ ಶುಲ್ಕಗಳ ಮಾಹಿತಿ ಸರಿಯಿಲ್ಲವೆಂದು, ಗ್ರಾಹಕರು ಪ್ಲಾನ್ ಬದಲಾವಣೆ ಮಾಡಿಕೊಂಡರೆ ಭರಿಸಬೇಕಾದ ಹೊಸ ಶುಲ್ಕಗಳು, ಈ ರೀತಿ ಕೆಲವು ಪ್ರಮುಖ ಅಂಶಗಳನ್ನು ಕೈ ಬಿಟ್ಟು ಗ್ರಾಹಕರಿಗೆ ಅರ್ಥವಾಗದ ರೀತಿಯಲ್ಲಿ ಪ್ರಕಟಿಸಲಾಗಿದೆ.

ಇನ್ನು ಮುಂದೆ ಪ್ರತಿಯೊಂದು ಜಾಹೀರಾತಿನಲ್ಲಿ ಶುಲ್ಕದ ಪೂರ್ಣ ಮಾಹಿತಿ, ವೆಬ್ಸೈಟ್ ನ ಮಾಹಿತಿ ಹಾಗು ಕಸ್ಟಮರ್ ಕೇರ್ ಸಂಖ್ಯೆಯನ್ನು ಕೂಡ ಪ್ರಕಟಿಸಬೇಕೆಂದು ಆದೇಶಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot