ಗಡ್ಡ, ಬೇಡದ ಕೂದಲು ತೆಗೆಯಲು ಜೆಲ್

By Varun
|
ಗಡ್ಡ, ಬೇಡದ ಕೂದಲು ತೆಗೆಯಲು ಜೆಲ್

ಮುಂದಿನ ದಿನಗಳಲ್ಲಿ ನೀವು ನುಣ್ಣಗೆ ಕ್ಷೌರಮಾಡಿಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ. ಆರಾಮಾಗಿ ಒಂದು ಜೆಲ್ ಬಳಿದುಕೊಂಡರೆ ಸಾಕು. ಕೂದಲು ಬೆಳೆಯುವುದೇ ಇಲ್ಲ.

ಈ ರೀತಿ ಇದ್ದಿದ್ದರೆ ಎಷ್ಟು ಚೆಂದ ಎಂದುನಾವು ಗಡ್ಡ ಕೆರೆದುಕೊಳ್ಳುವಾಗ ಒಮ್ಮೆಯಾದರೂಅಂದುಕೊಂಡಿರುತ್ತೇವೆ ಅಲ್ಲವಾ. ಈಐಡಿಯಾ ಉಪಯೋಗಿಸಿಅದನ್ನುನನಸು ಮಾಡಲು ಹೋರಾಟ ಪೆನ್ಸಿಲೇನ್ವಿಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಏಡ್ಸ್ ಗೆ ಬಳಸುವ ಸಿಡೋಫಾವಿರ್ ಔಷಧದಿಂದ ಜೆಲ್ ಒಂದನ್ನು ಕಂಡುಹಿಡಿದಿದ್ದಾರೆ.

ಈ ಜೆಲ್ ಅನ್ನು 16 ಜನ ಗಡ್ಡ ಬೆಳೆಸಿದ ಗಂಡಸರ ಮೇಲೆ ಜೆಲ್ ಪ್ರಯೋಗಿಸಲಾಯ್ತಂತೆ. 6 ವಾರಗಳ ನಂತರ ಗಡ್ಡದ ಬೆಳವಣಿಗೆಯನ್ನು ಪರೀಕ್ಷಿಸಿ ನೋಡಿದಾಗ ಗಡ್ಡ ನಿಜಕ್ಕೂ ಬೆಳೆದಿರಲಿಲ್ಲವಂತೆ.ಇದರಿಂದ ಖುಷಿಯಾಗಿರುವ ವಿಜ್ಞಾನಿಗಳು ಈ ಜೆಲ್ ಅನ್ನು ಮಹಿಳೆಯರೂ ಕೂಡ ಯಾವುದೇ ದುಷ್ಪರಿಣಾಮವಿಲ್ಲದೆ ಬಳಸಬಹುದೆಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.

ಈ ಜೆಲ್ ಬಂದರೆ ಬ್ಲೇಡ್ ಹಾಗು ರೇಜರ್ ಕಂಪನಿಗಳು ಬಾಗಿಲು ಹಾಕಿಕೊಳ್ಳುವುದು ಗ್ಯಾರಂಟಿ. ಏನಂತೀರ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X