ಬ್ಲಾಕ್ ಬೆರಿ ಫೋನ್ 26% ಕಡಿಮೆ ಬೆಲೆಗೆ

By Varun
|
ಬ್ಲಾಕ್ ಬೆರಿ ಫೋನ್ 26% ಕಡಿಮೆ ಬೆಲೆಗೆ

ಸ್ಮಾರ್ಟ್ ಫೋನ್ ಕೊಳ್ಳುವವರಿಗಾಗಿ ಒಂದು ಸಿಹಿ ಸುದ್ದಿ. ಕೆನಡಾ ಮೂಲದ ಬ್ಲಾಕ್ ಬೆರಿ ಸ್ಮಾರ್ಟ್ ಫೋನುಗಳ ಉತ್ಪಾದಕ ರಿಸರ್ಚ್ ಇನ್ ಮೋಶನ್ (RIM) ತನ್ನ ಹಲವಾರು ಫೋನ್ ಮಾಡಲ್ ಗಳ ಮೇಲೆ 26 % ವರೆಗೂ ಬೆಲೆ ಕಡಿತ ಗೊಳಿಸಿದೆ, ಭಾರತೀಯ ಗ್ರಾಹಕರಿಗೆಂದೇ.

ಭಾರತೀಯ ಮಾರುಕಟ್ಟೆಯಲ್ಲಿ 15 % ಪಾಲು ಹೊಂದಿರುವ RIM, ಸ್ಮಾರ್ಟ್ ಫೋನ್ ವಿಬಾಗದಲ್ಲಿ ಇನ್ನೂ ಹೆಚ್ಚು ಗ್ರಾಹಕರನ್ನು ಸೆಳೆಯಲು ಈ ರಿಯಾಯಿತಿ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಕಡಿತಗೊಳಿಸಲಾದ ಮಾಡಲ್ ಗಳ ವಿವರ ಇಲ್ಲಿದೆ:

  • ಬ್ಲಾಕ್ ಬೆರಿ ಕರ್ವ್ 8520 - 10,990 ರೂಪಾಯಿಯಿಂದ ರೂ. 8,999 ಗೆ (18% ಇಳಿಕೆ).

  • ಬ್ಲಾಕ್ ಬೆರಿ ಟಾರ್ಚ್ 9860 - 29,990 ರೂಪಾಯಿಯಿಂದ ರೂ. 21,990 ಗೆ 26% ಇಳಿಕೆ).

  • ಬ್ಲಾಕ್ ಬೆರಿ ಕರ್ವ್ 9380 - ಕಡಿತಗೊಳಿಸಿದ ಮೇಲೆ 16,990 ರೂಪಾಯಿಗೆ ಲಭ್ಯ.

  • ಬ್ಲಾಕ್ ಬೆರಿ ಕರ್ವ್ 9360 - ಕಡಿತಗೊಳಿಸಿದ ಮೇಲೆ 18,990 ರೂಪಾಯಿಗೆ ಲಭ್ಯ.

ದಿನಕ್ಕೆ 10 ಕ್ಕಿಂತ ಹೆಚ್ಚು ಇಮೇಲ್ ಕಳಿಸುವವರಿಗಾಗಿ ಹಾಗು ಎಕ್ಸಿಕ್ಯುಟಿವ್ ಗಳಿಗೆ ಬ್ಲಾಕ್ ಬೆರಿ ಫೋನುಗಳು ಬಹು ಉಪಯುಕ್ತ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X