ಭಾರತದ ಮೊದಲ ಗೇಮ್ಸ್ ಹಬ್ಬ ನೊಯಿಡಾದಲ್ಲಿ

Posted By: Varun
ಭಾರತದ ಮೊದಲ ಗೇಮ್ಸ್ ಹಬ್ಬ ನೊಯಿಡಾದಲ್ಲಿ

ಗೇಮಿಂಗ್ ನಲ್ಲಿ ಆಸಕ್ತಿ ಇರುವ ಓದುಗರಿಗೊಂದು ಸಂತೋಷದ ಸುದ್ದಿ. ಭಾರತದ ಮೊದಲ ಡಿಜಿಟಲ್ ಗೇಮ್ಸ್ ಹಬ್ಬ ಏಪ್ರಿಲ್ 6 ರಿಂದ 8 ರವರೆಗೆ ನೊಯಿಡಾದಲ್ಲಿ ನಡೆಯಲಿದೆ.

ಈ 3 ದಿನಗಳ ಹಬ್ಬವನ್ನು WTF Eventz Pvt Ltd ಕಂಪನಿಯು ಆಯೋಜಿಸಿದ್ದು, ದೇಶ ವಿದೇಶದ ಗೇಮಿಂಗ್ ಪಟುಗಳು ಸ್ಪರ್ಧಿಸಲ್ಲಿದ್ದಾರೆ.

ನೂತನ ಗೇಮ್ ಗಳ ಜೊತೆಗೆ ಸ್ಪೀಡ್, ದೋಟ, ಫೀಫಾ ಸಾಕರ್, ಹಲೋ ಟೆಕ್ಕೆನ್, ಕೌಂಟರ್ ಸ್ಟ್ರೈಕ್, ಆಫ್ ಡ್ಯೂಟಿ ಕಾಲ್, ಆಂಗ್ರಿ ಬರ್ಡ್ಸ್, ಪೋಕರ್ ಮತ್ತು ಪೂಲ್ ನಂತಹ ಗೇಮ್ ಗಳೂ ಬರಲಿವೆ.

ಭಾರತೀಯ ಗೇಮರ್ ಗಳಿಗೆ, ಯುವಕರಿಗೆ ಹಾಗು ಡೀಲರ್ ಗಳಿಗೆ ಇದೊಂದುಉತ್ತಮ ಅವಕಾಶವಾಗಲಿದೆ. ಗ್ರೇಟರ್ ನೋಯಿಡಾದ ಅಯಾಟ್ಟಿ ರೆಸಾರ್ಟ್ ಎಂಬಲ್ಲಿ ನಡೆಯಲಿದ್ದು, ಪ್ರತಿ ದಿನದ ಪಾಸ್ 500 ರೂಪಾಯಿಯಾಗಿದ್ದು ಮೂರೂ ದಿನದ ಪಾಸ್ 1000 ರೂಪಾಯಿಗೆ ಲಭ್ಯವಿದೆ. ಗೇಮ್ ನಲ್ಲಿ ಗೆದ್ದರೆ 1.5 ಕೋಟಿ ಹಣ ಕೂಡ ಗೆಲ್ಲಬಹುದು.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot