21 ಲಕ್ಷ ಡೌನ್ಲೋಡ್ ಕಂಡ ಸಾಯಿ ಬಾಬಾ ಹಾಡು

Posted By: Varun
21 ಲಕ್ಷ ಡೌನ್ಲೋಡ್ ಕಂಡ ಸಾಯಿ ಬಾಬಾ ಹಾಡು

ಅಂತರ್ಜಾಲದಲ್ಲಿ ಕೊಲವರಿ ಹಾಡು 50 ಮಿಲಿಯನ್ ಹಿಟ್ಸ್ ತಲುಪಿದ ಸುದ್ದಿ ಈಗ ಹಳೆಯದಾಯ್ತು. ಯುವಕರ ಪಡ್ಡೆ ಹಾಡು ಪ್ಯಾರ್ ಗೆ ಆಗ್ಬಿಟೈತೆ ಹಾಡು ಕೂಡ ಅದೇ ರೀತಿ ಹುಚ್ಚು ಹಿಡಿಸಿತ್ತು.

ಫಿಲಂ ಸಂಗೀತಕ್ಕೆ ಎಷ್ಟೇ ಕ್ರೇಜ್ ಇದ್ದರೂ ಜನ ಭಕ್ತಿಗೀತೆಗಳಿಗೆ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಯೂನಿನಾರ್ ನೆಟ್ವರ್ಕ್ ನಲ್ಲಿ ಆಗಿರುವ ದಾಖಲೆ ಡೌನ್ಲೋಡ್.

ಸಾಯಿ ಬಾಬಾ ರವರಸಾಯಿ ಗುಜಾರಿಶ್ ಆಲ್ಬಮ್ ನ "ಸಾಯಿ ವೆ ಸಾದಿ ಫರಿಯಾದ್' ಭಕ್ತಿಗೀತೆ ಇದುವರೆಗೂ 21 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಕಂಡಿದೆಯೆಂದು ಯೂನಿನಾರ್ ಮೊಬೈಲ್ ನ ವಕ್ತಾರರು ತಿಳಿಸಿದ್ದಾರೆ. ಅದೇ ಧನುಶ್ ಹಾಡಿರುವ ಕೊಲವರಿ ಹಾಡು ಕೇವಲ 4.5 ಲಕ್ಷ ಹಾಡುಗಳು ಡೌನ್ಲೋಡ್ ಆಗಿದೆಯಂತೆ.

ಭಕ್ತಿಯ ಪರವಶತೆಯಲ್ಲಿ ಕೇಳುವ ಹಾಡುಗಳು ಇತರೆ ಹಾಡುಗಳಿಗಿಂತ ಹೆಚ್ಚು ಮುದ ನೀಡುತ್ತವೆ ಅಲ್ಲವೆ.

Please Wait while comments are loading...
Opinion Poll

Social Counting