ಹಳೇ ಮೊಬೈಲಿನಲ್ಲಿ ಚಿನ್ನವಿದೆ, ಬಿಸಾಕಬೇಡಿ

By Varun
|

ಹಳೇ ಮೊಬೈಲಿನಲ್ಲಿ ಚಿನ್ನವಿದೆ, ಬಿಸಾಕಬೇಡಿ

ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಿಮ್ಮ ಮೊಬೈಲ್ ಫೋನಿನಲ್ಲಿ ಚಿನ್ನವಿದೆ. ಅದೂ ಅಲ್ಲದೆ ತಾಮ್ರ, ಬೆಳ್ಳಿ ಕೂಡ ಇದೆ.

ಹೇಗೆ ಅಂತೀರಾ, ಮೊಬೈಲುಗಳಲ್ಲಿ ವಿದ್ಯುತ್ ಸಂಚರಿಸಲು ವಾಹಕಗಳನ್ನು ಬಳಸುತ್ತಾರೆ. ಚಿನ್ನ, ಬೆಳ್ಳಿ ಹಾಗು ತಾಮ್ರಗಳು ಉತ್ತಮ ವಾಹಕಗಳಾಗಿರುವುದರಿಂದ ಅವುಗಳನ್ನು ಮೊಬೈಲ್ನಲ್ಲಿ ಬಳಸುವ ಅವಶ್ಯಕತೆ ಬರುತ್ತದೆ. ಪ್ರತಿಯೊಂದು ಮೊಬೈಲ್ನಲ್ಲೂ ಕನಿಷ್ಠ 0.01% ನಷ್ಟು ಚಿನ್ನ ಇದ್ದೇ ಇರುತ್ತದಂತೆ.

ಒಂದು ಟನ್ ಗುಜರಿ ಮೊಬೈಲ್ ನಿಂದ 150 ಗ್ರಾಂ ಚಿನ್ನವನ್ನು ಪಡೆಯಬಹುದಂತೆ!! ವಿಶ್ವದಲ್ಲಿ ಪ್ರತಿ ವರ್ಷ 400 ಮಿಲಿಯನ್ ಮೊಬೈಲ್ ಫೋನುಗಳು ಗುಜರಿಗೆ ಬರುತ್ತವೆಯಂತೆ. ಅದರಲ್ಲಿ ಚೀನಾ ದೇಶದವರೇ 100 ಮಿಲಿಯನ್ ಫೋನುಗಳನ್ನು ಬಿಸಾಕುತ್ತಾರೆ. ಅದರ ಒಟ್ಟು ತೂಕವೇ 10 ಸಾವಿರ ಟನ್ ಎಂದು ಅಂದಾಜು. ಇದರಲ್ಲಿರುವ ಲೋಹಾಂಶ ತೆಗೆದರೆ ಸುಮಾರು 1500 ಕೇಜಿ ಚಿನ್ನ ತೆಗೆಯಬಹುದು!

ಅದಕ್ಕೆ ಹೇಳಿದ್ದು ನಿಮ್ಮ ಹಳೇ ಫೋನ್ ಮೊಬೈಲ್ ಅನ್ನು ಬಿಸಾಕಬೇಡಿ, ಚಿನ್ನವಿದೆ ಅಂತ.

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X