ಬೆತ್ತಲೆ ಚಿತ್ರ ತೆಗೆಯಲು ಆಂಡ್ರಾಯ್ಡ್ App

Posted By: Varun
ಬೆತ್ತಲೆ ಚಿತ್ರ ತೆಗೆಯಲು ಆಂಡ್ರಾಯ್ಡ್ App

ಸುಪ್ರಸಿದ್ಧ ಗೂಗಲ್, ತನ್ನ ಗೂಗಲ್ ನ ಗೂಗಲ್ ಲ್ಯಾಬಿನಿಂದ ಹಲವಾರು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ.

ಅಂಥವುಗಳಲ್ಲಿ ಆಂಡ್ರಾಯ್ಡ್ ತಂತ್ರಾಂಶವೂ ಒಂದು. ಬಹುತೇಕ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಲ್ಲಿ ಬಳಸುವ ಆಂಡ್ರಾಯ್ಡ್ ಆಧಾರಿತ ಆಪ್ (App) ಗಳು ಮಾರುಕಟ್ಟೆಯಲ್ಲಿ ತುಂಬಾ ಇವೆ.

ನೀವು ಎಕ್ಸ್-ರೇ ಮಾದರಿಯ ಗ್ಲಾಸ್ ಬಗ್ಗೆ ಕೇಳಿರಬಹುದು. ಅದನ್ನು ಧರಿಸಿದರೆ ನಮ್ಮ ಕಣ್ಣುಮುಂದೆ ಇರುವವರು ಬೆತ್ತಲೆ ಕಾಣಿಸುತ್ತಾರೆ ಎಂಬ ಸುದ್ದಿ ಇತ್ತು. ಈಗ ಇದೇ ಐಡಿಯಾವನ್ನು ಆಧರಿಸಿ ಪ್ರಪಂಚದಲ್ಲೇ ಅತ್ಯಂತ ರೊಮ್ಯಾಂಟಿಕ್ ಎಂದು ಕರೆಸಿಕೊಳ್ಳುವ ಫ್ರಾನ್ಸ್ ದೇಶದ ಇಬ್ಬರು ಯುವಕರು ಆಂಡ್ರಾಯ್ಡ್ ಆಧಾರಿತ App ಒಂದನ್ನು ಮಾಡಿದ್ದಾರೆ.

ಇದರ ವಿಶೇಷ ಏನೆಂದರೆ ನಿಮ್ಮ ಆಂಡ್ರಾಯ್ಡ್ ಫೋನು ಇಲ್ಲವೆ ಟ್ಯಾಬ್ಲೆಟ್ ನಲ್ಲಿ ಈ ಆಪ್ ಡೌನ್ಲೋಡ್ ಮಾಡಿಕೊಂಡು ಬೇಕಾದವರ ಬೆತ್ತಲೆ ಚಿತ್ರ ಸೆರೆಹಿಡಿಯಬಹುದು! ಯಾರ ಬೆತ್ತಲೆ ಚಿತ್ರ ನೋಡಬೇಕೋ ಅವರ ಮುಂದೆ ಕ್ಯಾಮರಾವನ್ನು ಇಟ್ಟರೆ ಸಾಕು, ಈ ಆಪ್ ನಿಂದ ಅವರ ಬೆತ್ತಲೆ ಚಿತ್ರ ನೋಡಿ ಖುಷಿ ಪಡಬಹುದು.

"ಸೀ ದೆಮ್ ನ್ಯೂಡ್" ಎಂದು ಹೆಸರಿಸಲಾಗಿರುವ ಈ ಆಪ್ ಫ್ರಾನ್ಸ್ ನಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದು ಅದರ ಅಧ್ಯಕ್ಷ ನಿಕೋಲಾಸ್ ಸರ್ಕೊಜಿ ಕೂಡಲೇ ಇದನ್ನು ಬ್ಯಾನ್ ಮಾಡಲು ಆದೇಶಿಸಿದ್ದಾರಂತೆ.

ಈ ಸುದ್ದಿ ತಿಳಿದ ತಕ್ಷಣ ನಮಗೆ ಫೋನು ಮಾಡಿ ಇದರ ಖಚಿತತೆ ಬಗ್ಗೆ ಖಾತ್ರಿ ಪಡಿಸಿಕೊಂಡ ನಮ್ಮ ನೀಲಿ ಚಿತ್ರದ ಶಾಸಕರು ಹೇಗಾದರೂ ತರಿಸಿಕೊಡಿ ಎಂದು ನಮಗೆ ದುಂಬಾಲು ಬಿದ್ದಿದ್ದಾರೆ.

ಸದ್ಯಕ್ಕೆ ಬ್ಯಾನ್ ಆಗಿರುವ ಈ App ಅನ್ನು ಗೂಗಲ್ ನಲ್ಲಿ ಹುಡುಕಬೇಡಿ ಪ್ಲೀಜ್.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot