ಸ್ಟೀವ್ ಜಾಬ್ಸ್ ಫಿಲಂ ಬರಲಿದೆ

Posted By: Varun
ಸ್ಟೀವ್ ಜಾಬ್ಸ್ ಫಿಲಂ ಬರಲಿದೆ

ಆಪಲ್ ಅಂದರೆ ಸ್ಟೀವ್ ಜಾಬ್ಸ್, ಸ್ಟೀವ್ ಜಾಬ್ಸ್ ಎಂದರೆ ಆಪಲ್ ಎನ್ನುವಷ್ಟು ಖ್ಯಾತಿ ಪಡೆದಿದ್ದ ಜಾಬ್ಸ್ ಬದುಕಿದ್ದಾಗಲೂ ದಂತಕಥೆಯಾಗಿದ್ದವರು.

ಅವರ ವರ್ಣರಂಜಿತ ಬದುಕನ್ನು ಶಾಶ್ವತವಾಗಿ ಸೆರೆಹಿಡಿಯಲು ಈಗ ಹಾಲಿವುಡ್ ಸಿದ್ಧವಾಗಿದೆ. ವೆರೈಟಿ ಎಂಬ ಪತ್ರಿಕೆ ವರದಿ ಮಾಡಿರುವ ಪ್ರಕಾರ ಸ್ಟೀವ್ ಜಾಬ್ಸ್ ಜೀವನ ಚಿತ್ರ ಆಧರಿಸಿದ ಚಿತ್ರವೊಂದು ಬರಲಿದೆಯಂತೆ.

ಹಾಲಿವುಡ್ ನ ಹಲವಾರು ರೊಮ್ಯಾಂಟಿಕ್ ಕಾಮೆಡಿ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟ ಆಶ್ಟನ್ ಕೂಚರ್, ಸ್ಟೀವ್ ಜಾಬ್ಸ್ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಮೇ ತಿಂಗಳಲ್ಲಿ ಸೆಟ್ಟೇರಲಿದೆ.

ಒಬ್ಬ ಹಿಪ್ಪೀ ಆಗಿ ಸನ್ಯಾಸಿಯಾಗಲು ಭಾರತಕ್ಕೆ ಬಂದು ಮತ್ತೆ ಅಮೆರಿಕಾಗೆ ಹಿಂದಿರುಗಿ ಆಪಲ್ ಅನ್ನು ಸ್ಥಾಪಿಸಿದ ಸ್ಟೀವ್ ಜಾಬ್ಸ್ ರ ಬದುಕಿನ ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲದಷ್ಟು ರೋಚಕವಾಗಿದೆ.ಇದೆ ರೀತಿ ಸೋನಿ ಸಂಸ್ಥೆ ಕೂಡ ಸ್ಟೀವ್ ಜಾಬ್ಸ್ ನ ಜೀವನಚರಿತ್ರೆ ಆಧರಿಸಿ ಚಿತ್ರ ಮಾಡಲಿದೆಯಂತೆ.

ಸ್ಟೀವ್ ಜಾಬ್ಸ್ ನ ಬದುಕು ಬೆಳ್ಳಿ ಪರದೆ ಮೇಲೆ ಮೂಡಿಬಂದರೆ ತಂತ್ರಜ್ಞಾನದಲ್ಲಿ ಆಸಕ್ತಿ ಇರುವ ಹಲವಾರು ಯುವಕರಿಗೆ ಫಿಲಂ ಪ್ರೇರಣೆಯಾಗಲೆಂದು ಆಶಿಸೋಣ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot