Subscribe to Gizbot

ಸೋಲಾರ್ ಚಾರ್ಜರ್ ಇರುವ ಮೊಬೈಲ್ ಬರಲಿದೆ

Posted By: Varun
ಸೋಲಾರ್ ಚಾರ್ಜರ್ ಇರುವ ಮೊಬೈಲ್ ಬರಲಿದೆ

ಮೈಕ್ರೋಮ್ಯಾಕ್ಸ್ ಕಂಪನಿ ಭಾರತದ ಪ್ರಖ್ಯಾತ ಮೊಬೈಲ್ ಕಂಪನಿಯಾಗಿದ್ದು ಮೊದಲ ಬಾರಿಗೆ ಸೌರಶಕ್ತಿಯಿಂದ ಚಾರ್ಜ್ ಆಗುವ ಬ್ಯಾಟರಿ ಇರುವ ಮೊಬೈಲ್ ಅನ್ನು ಹೊರತರಲಿದೆ.

ಮೈಕ್ರೋಮ್ಯಾಕ್ಸ್ ಕಂಪನಿಯ ಸಹ-ಸಂಸ್ಥಾಪಕರಾದ ರಾಹುಲ್ ಶರ್ಮಾ ಅವರ ಪ್ರಕಾರ ಈ ಮೊಬೈಲ್ ನಲ್ಲಿ ಸೌರ ಶಕ್ತಿಯನ್ನು ಸಂಗ್ರಹಿಸುವ ಪ್ಯಾನೆಲ್ ಹೊಂದಿದ್ದು ಕೇವಲ ಮೂರು ಗಂಟೆ ಚಾರ್ಜ್ ಮಾಡಿದರೆ 1.5 ಗಂಟೆ ಮಾತಾಡುವಷ್ಟು ಕೆಪಾಸಿಟಿ ಹೊಂದಿದೆಯಂತೆ.ಈ ಸೋಲಾರ್ ಚಾರ್ಜರ್ ಇರುವ ಫೋನ್ ಇನ್ನೊಂದು ವಾರದಲ್ಲಿ ಮಾರುಕಟ್ಟೆಗೆ ಬರಲಿದ್ದು ಹಲವಾರು ಫೀಚರ್ ಗಳನ್ನು ಒಳಗೊಂಡಿದೆಯಂತೆ.

ಈ ಫೋನಿನಿಂದಾಗಿ ನೀವು ಚಾರ್ಜರ್ ಅನ್ನು ತೆಗೆದುಕೊಂಡು ಹೋಗುವ ಪ್ರಮೇಯವೇ ಇರುವುದಿಲ್ಲವಾದ್ದರಿಂದ ಈ ಫೋನ್ ಹಿಟ್ ಆಗುವುದಂತೂ ಗ್ಯಾರಂಟಿ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot