ಉದ್ರೇಕಗೊಂಡಷ್ಟೂ ನಗ್ನ,ಈ ಹುಡುಗಿಯ ಇ-ಬಟ್ಟೆ

Posted By: Staff
ಉದ್ರೇಕಗೊಂಡಷ್ಟೂ ನಗ್ನ,ಈ ಹುಡುಗಿಯ ಇ-ಬಟ್ಟೆ

ತಂತ್ರಜ್ಞಾನದಿಂದ ಆಗುತ್ತಿರುವ ಬದಲಾವಣೆಯ ಅಗಾಧತೆ ನೋಡಿದರೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಮುಂದಿನ ದಶಕಗಳಲ್ಲಿ ಮಾನವ ಏನೆಲ್ಲ ಸಾಧಿಸಬಹುದು ಎಂದು ನಿಜಕ್ಕೂ ಊಹಿಸುವುದಕ್ಕೆ ಕಷ್ಟ. ಹಾಗೆಯೇ ಹುಡುಗಿಯ ಮನಸ್ಸನ್ನು ಅರಿಯುವುದು ಇನ್ನೂ ಕಷ್ಟ.

ತಂತ್ರಜ್ಞಾನವನ್ನು ಬಳಸಿ ಹುಡುಗಿಯನ್ನು ಅರ್ಥ ಮಾಡಿಕೊಳ್ಳಲು ಗಂಡಸರು ಎಷ್ಟೆಲ್ಲ ಪ್ರಯತ್ನ ಪಟ್ಟಿದ್ದಾರೆ, ಪಡುತ್ತಿದ್ದಾರೆ. ಇದೇ ರೀತಿಯ ಐಡಿಯಾದಿಂದ ತಂತ್ರಜ್ಞಾನವನ್ನು ಬಳಸಿ ನಾವು ಹಾಕಿಕೊಳ್ಳುವ ಬಟ್ಟೆಗೂ ಅಳವಡಿಸಿಕೊಂಡರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಸಣ್ಣ ಉದಾಹರಣೆ ಈ ಸುದ್ದಿಯಲ್ಲಿದೆ.

ಹಾಲೆಂಡ್ ದೇಶದ ಪ್ರಶಸ್ತಿ ವಿಜೇತ ಫ್ಯಾಶನ್ ಡಿಸೈನರ್ ಡಾನ್ ರೂಸೆಗಾರ್ಡ್ ಎಂಬಾತ "ಇಂಟಿಮೆಸಿ" ಎಂಬ ಹಾಕಿಕೊಳ್ಳುವ ಬಟ್ಟೆಯನ್ನು ಲೆದರ್, ವಯರ್ ಲೆಸ್ ತಂತ್ರಜ್ಞಾನ, LED ಹಾಗು ತಾಮ್ರವನ್ನು ಬಳಸಿದ ಫ್ಯಾಬ್ರಿಕ್ ಮಾಡಿದ ಬಟ್ಟೆಯನ್ನು ಹುಡುಗಿಯರಿಗೆಂದೇ ಡಿಸೈನ್ ಮಾಡಿದ್ದು ಈ ಬಟ್ಟೆ ಹಾಕಿಕೊಂಡ ಹುಡುಗಿ ಎಷ್ಟು ರೊಮ್ಯಾಂಟಿಕ್ ಆಗಿ ಬೇರೆಯವರ ಜೊತೆ ಬೆರೆತರೆ, ಅಷ್ಟು ಪಾರದರ್ಶಕವಾಗುತ್ತಾ ಹೋಗುತ್ತದೆ. ಮೋರ್ ರೊಮ್ಯಾಂಟಿಕ್ ಆದರೆ ಮೊರೆ ಟ್ರಾನ್ಸ್ ಪರೆಂಟ್ ಆಗುತ್ತಾ ಹೋಗುತ್ತಾಳೆ ಈ ಬಟ್ಟೆ ಹಾಕಿಕೊಂಡ ಹುಡುಗಿ.

ಅವಳ ಹೃದಯದ ಬಡಿತ ನಿಮಗೆ ಅರ್ಥವಾಗುತ್ತದೋ ಇಲ್ಲವೋ ಈ ಬಟ್ಟೆ ಅರ್ಥ ಮಾಡಿಕೊಂಡು ಫ್ಯಾಬ್ರಿಕ್ ನ ಬಣ್ಣದಲ್ಲಿ ಬದಲಾವಣೆ ತರುತ್ತದೆ. ಈಗಾಗಲೇ ಈ ಬಟ್ಟೆ ಸೂಪರ್ ಹಿಟ್ ಆಗಿದ್ದು ಹಲವಾರು ಪ್ರಶಸ್ತಿಯನ್ನು ಬಾಚಿಕೊಂಡಿದೆ ಕೂಡ. ಈ ಬಟ್ಟೆಯನ್ನು ನಮ್ಮ ರವಿಚಂದ್ರನ್ ತರಿಸಿಕೊಂಡಿದ್ದಾರಂತೆ ಎಂಬುದು ನಮ್ಮ ಟೆಕ್ ಜೋಕ್.

ಈ ವೀಡಿಯೋ ನೋಡಿ ಮಜಾ ಮಾಡಿ

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot