ಆಪಲ್ ಐಪ್ಯಾಡ್ ಗಾಗಿ ಕಿಡ್ನಿ ಮಾರಿದ ಚೀನಿ

Posted By: Varun
ಆಪಲ್ ಐಪ್ಯಾಡ್ ಗಾಗಿ ಕಿಡ್ನಿ ಮಾರಿದ ಚೀನಿ

ನಾವೂ ದಿನಕ್ಕೆ ಅದೆಷ್ಟು ಸುದ್ದಿ ನೋಡಿರುತ್ತೀವಿ. ಆದರೆ ಈ ರೀತಿಯ ಸುದ್ದಿಯನ್ನು ಇದುವರೆಗೂಕೇಳೂ ಇರಲ್ಲ, ನೋಡೂ ಇರಲ್ಲ.

ಹೊಟ್ಟೆಪಾಡಿಗಾಗಿ ರಕ್ತದಾನ ಮಾಡಿರುವುದನ್ನು ಹಳೇಪಿಚ್ಚರ್ ಗಳಲ್ಲಿ ನೋಡಿರುತ್ತೀರಿ. ತಾಯಿಗಾಗಿ, ಪ್ರೇಮಿಗಾಗಿ ಕಣ್ಣು ಕೊಡುವುದು, ಅಂಗಾಂಗ ದಾನ ಮಾಡುವುದನ್ನು ನೋಡಿರುತೀರಿ. ಆದರೆ ಚೀನಾದ 17 ವರ್ಷದಜ್ಹೆಂಗ್ ಎಂಬಾತ ಆಪಲ್ ಐಪ್ಯಾಡ್ ನ ಮೇಲಿನ ಹುಚ್ಚಿಗಾಗಿ ತನ್ನ ಕಿಡ್ನಿಯನ್ನೇ ಮಾರಿಕೊಂಡಿದ್ದಾನೆ!

ಆಪಲ್ ನ ಐಪ್ಯಾಡ್ ಬಿಡುಗಡೆಯಾದಾಗಿನಿಂದ ಅದರ ಮೇಲೆ ವಿಪರೀತ ಹುಚ್ಚು ಹಿಡಿಸಿಕೊಂಡ ಜ್ಹೆಂಗ್ ಅದನ್ನು ಖರೀದಿಸಲು ಹಣವಿಲ್ಲದ ಕಾರಣ ಏನಪ್ಪಾ ಮಾಡುವುದೆಂದು ಯೋಚಿಸುತ್ತಾ ಇರುವಾಗ ಅವನಿಗೆ ಅಂತರ್ಜಾಲದಲ್ಲಿ "ಕಿಡ್ನಿ ಬೇಕಾಗಿದೆ" ಎಂಬ ಜಾಹೀರಾತು ನೋಡಿ ಐಡಿಯಾ ಮಾಡಿದ.

ಐಪ್ಯಾಡ್ ಕೊಳ್ಳಲು ತನ್ನ ಒಂದು ಕಿಡ್ನಿಯನ್ನುಮಾರಿಬಿಟ್ಟರೆ ಹೇಗೆ ಎಂದು ತೀರ್ಮಾನಿಸಿ ತನ್ನ ಊರಿನಿಂದ ಚೆನ್ ಝೌ ಎಂಬ ಪ್ರಾಂತ್ಯಕ್ಕೆ ಹೋಗಿ 3000 ಡಾಲರ್ ಗೆ ಮಾರಿಬಿಟ್ಟ!

ಆಪರೇಶನ್ ಆದ ನಂತರ ಕೈಯಲ್ಲಿ ಒಂದು ಆಪಲ್ ಐಪ್ಯಾಡ್ ಹಿಡಿದುಕೊಂಡು ಬಂದ. ತಾಯಿ ಆ ಮೊತ್ತದ ಹಣ ಹಾಗು ಐಪ್ಯಾಡ್ ನ ಬಗ್ಗೆ ವಿಚಾರಿಸಿದಾಗ ಅಸಲೀ ವಿಷಯ ಬಾಯಿ ಬಿಟ್ಟ. ವಿಷಯವನ್ನು ಪೊಲೀಸರಿಗೆ ತಿಳಿಸಿದ ಆಕೆಯ ಕಂಪ್ಲೈಂಟ್ ಮೇಲೆ 5 ಜನರನ್ನು ಹಿಡಿಯಲಾಗಿದೆಯಂತೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot