ಅಣ್ಣಾ ಹಜಾರೆ ತಂಡದಿಂದ SMS ಕಾರ್ಡ್

Posted By: Varun
ಅಣ್ಣಾ ಹಜಾರೆ ತಂಡದಿಂದ SMS ಕಾರ್ಡ್

ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ತಂಡ, ಅಖಿಲ ಭಾರತ ಎಸ್ಎಂಎಸ್ ಅನ್ನು ಹೊರತರುತ್ತಿದೆ.

ದೇಶಾದ್ಯಂತ ಯುವಕರಲ್ಲಿ ಸಾಕಷ್ಟು ಭ್ರಷ್ಟಾಚಾರ ವಿರೋಧೀ ಕಿಚ್ಚನ್ನು ಎಬ್ಬಿಸಿದ್ದ ಅಣ್ಣಾ ಹಜಾರೆಯ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ "ಟೀಮ್ ಅಣ್ಣಾ" ಎಸ್ಎಂಎಸ್ ಮೂಲಕ ಇನ್ನೂ ಹೆಚ್ಚು ಜನರನ್ನು ತಲುಪಲು ಹಾಗು ಜಾಗೃತಿ ಮೂಡಿಸಲು 25 ರೂಪಾಯಿಯ ಎಸ್ಎಂಎಸ್ ಕಾರ್ಡ್ ಬಿಡುಗಡೆ ಮಾಡಿದೆ.

ಮೀಡಿಯಾ ಹಾಗು ಪತ್ರಿಕೆಗಳಲ್ಲಿ ಮಾಧ್ಯಮದವರು "ಟೀಮ್ ಅಣ್ಣಾ" ಹೋರಾಟದ ವಸ್ತುನಿಷ್ಠ ವರದಿಯನ್ನು ಕೊಡದೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆಯವರ ಬೆಂಬಲಿಗರನ್ನು ದಿಕ್ಕು ತಪ್ಪಿಸಿ ಗೊಂದಲಕ್ಕೀಡು ಮಾಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಹೊರತರಲಾಗುತ್ತಿದೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.

ಅಣ್ಣಾ ತಂಡದ ಪ್ರತಿಯೊಂದು ಕಾರ್ಯ ಚಟುವಟಿಕೆಯ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಪಡೆಯಬಹುದಾಗಿದ್ದು ಒಂದು ಬಾರಿ ಕಾರ್ಡ್ ಕೊಂಡರೆ ಒಂದು ವರ್ಷದವರೆಗೆ ಎಸ್ಎಂಎಸ್ ಅಲರ್ಟ್ ಬರುತ್ತದೆ.

ಸದ್ಯಕ್ಕೆ ಉತ್ತರ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ಕಾರ್ಡ್ ಲಭ್ಯವಿದ್ದು ಮುಂದಿನ ದಿನಗಳಲ್ಲಿ ದೇಶಾದ್ಯಂತಬಿಡುಗಡೆಯಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot