Home
ಸುದ್ದಿಜಾಲ

ಟಾಪ್ 5 ಐಫೋನ್-5 ಗಾಳಿಸುದ್ದಿ

By Varun
ಟಾಪ್ 5 ಐಫೋನ್-5 ಗಾಳಿಸುದ್ದಿ

ಜಗತ್ತಿನ ಅತ್ಯಂತ ಫೇಮಸ್ ಕಂಪನಿ ಆಪಲ್ ಯಾವುದೇ ಹಾಲಿವುಡ್ ಸಿನಿಮಾಗೂ ಕಮ್ಮಿ ಇಲ್ಲ. ಅದರ ಉತ್ಪನ್ನಗಳು ಸ್ಟಾರ್ ರೀತಿಯ ಸ್ಟೇಟಸ್ ಹೊಂದಿವೆ. ಐಫೋನ್, ಐಪಾಡ್, ಐಪ್ಯಾಡ್ ಯಾವುದೇ ಇರಲಿ, ಅದರ ಬಿಡುಗಡೆಗೂ ಮುನ್ನ ಸಾಕಷ್ಟು ಹೈಪ್ ಸೃಷ್ಟಿ ಆಗುತ್ತದೆ.

ಮಾರ್ಚಿನಲ್ಲಿ ಬಿಡುಗಡೆಯಾದ ನ್ಯೂಐಪ್ಯಾಡ್ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಮುಂದಿನ ಆವೃತ್ತಿಯ ಐಫೋನ್ ಸುತ್ತ ಸಾಕಷ್ಟು ಗಾಳಿ ಸುದ್ದಿ ಹರಡುತ್ತಿದೆ. ಹಾಗಿದ್ದರೆ ಐಫೋನ್ ಸುತ್ತ ಇರುವ ಗಾಳಿಸುದ್ದಿಗಳು ಏನೇನು ಎಂಬುದನ್ನು ಓದಿ.

1) ಮೊದಲನೇ ರೂಮರ್ ಎಂದರೆ ಹೊಸ ಐಫೋನ್ ನ ಹೆಸರು ಐಫೋನ್-5 ಇರಬಹುದು ಎಂಬುದು ಚಾಲ್ತಿಯಲ್ಲಿರುವ ಸುದ್ದಿ. ಆದರೆ ಆಪಲ್ ಎಂದೂ ತನ್ನ ಬಳಕೆದಾರರಿಗೆ ಉತ್ಪನ್ನದ ಹೆಸರನ್ನು ಬಿಟ್ಟು ಕೊಟ್ಟಿಲ್ಲ. ಕಳೆದ ತಿಂಗಳಲ್ಲಿ ಬಿಡುಗಡೆಯಾದ ಟ್ಯಾಬ್ಲೆಟ್ ಅನ್ನು ಐಪ್ಯಾಡ್-3 ಎಂದು ಹೆಸರಿಡಬಹುದು ಎಂದು ಜನ ಅಂದುಕೊಂಡಿದ್ದರೆ ಆಪಲ್ ನಿರೀಕ್ಷೆ ಹುಸಿಗೊಳಿಸಿ ಬರಿ ನ್ಯೂಐಪ್ಯಾಡ್ ಎಂದು ಹೆಸರಿಟ್ಟಿತ್ತು.

2) ಹೊಸ ಐಫೋನ್ ಜೂನ್ ವೇಳೆಗೆ ಬರಲಿದೆಯಂತೆ.

3)ಹೊಸ ಐಫೋನ್ ನಲ್ಲಿ 4.6 ಇಂಚ್ ಗಾತ್ರದ, ನ್ಯೂಐಪ್ಯಾಡ್ ನಲ್ಲಿ ಇರುವ ರೆಟೀನಾ ಡಿಸ್ಪ್ಲೇ ಇರಲಿದೆ ಎಂದು ರಾಯ್ಟರ್ಸ್ ಸುದ್ದಿ ಮಾಡಿತ್ತು.

4) ಹೊಸ ಐಫೋನ್ ನಲ್ಲಿ 4G LTE ತಂತ್ರಜ್ಞಾನ ಇರಲಿದೆಯಂತೆ.

5) ಕ್ವಾಡ್ ಕೋರ್ A6 ಪ್ರಾಸೆಸರ್ ಹೊಂದಲಿದೆಯಂತೆ

6) ಅಪ್ಡೇಟೆಡ್ ಸಿರಿ (ವಾಯ್ಸ್ ರೆಕಗ್ನಿಶನ್) ತಂತ್ರಾಂಶ ಇರುತ್ತದೆ.ಈ ಮೇಲಿನ ಗಾಲಿಸುದ್ದಿಗಳಲ್ಲಿ ಅದೆಷ್ಟು ನಿಜವಾಗಲಿದೆಯೋ ಆಪಲ್ ಗೇ ಗೊತ್ತು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+