ಆಕ್ಷೇಪಾರ್ಹ ಮಾಹಿತಿ: ಗೂಗಲ್ ಹೆಸರನ್ನು ಕೈಬಿಟ್ಟ ಕೋರ್ಟ್

By Varun
|
ಆಕ್ಷೇಪಾರ್ಹ ಮಾಹಿತಿ: ಗೂಗಲ್ ಹೆಸರನ್ನು ಕೈಬಿಟ್ಟ ಕೋರ್ಟ್

ವೆಬ್ ಸೆನ್ಸಾರ್ ಶಿಪ್ ಬಗ್ಗೆ ಗೂಗಲ್ ಹಾಗು ಇನ್ನಿತರ 21 ಕಂಪನಿಗಳ ಮೇಲೆ ನೆನ್ನೆ ನಡೆದ ವಿಚಾರಣೆಯ ತೀರ್ಪನ್ನು ನೆನ್ನೆ ಪ್ರಕಟಿಸಿದ ದೆಹಲಿ ಹೈ ಕೋರ್ಟ್ ನ ಸಿವಿಲ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಗೂಗಲ್ ಇಂಡಿಯಾ ದ ಹೆಸರನ್ನು ಪ್ರಕರಣದಿಂದ ಕೈ ಬಿಟ್ಟಿದೆ.

ಆಕ್ಷೇಪಾರ್ಹ ಮಾಹಿತಿಯನ್ನು ಗೂಗಲ್ ಸೇರಿದಂತೆ 22 ಕಂಪನಿಗಳ ಮೇಲೆ ಸುಮಾರು ತಿಂಗಳಿನಿಂದ ನಡೆಯುತ್ತಿದ್ದ ಈ ಪ್ರಕರಣ ನೆನ್ನೆಯ ತೀರ್ಪಿನಿಂದ ಮಹತ್ವದ ಘಟ್ಟ ತಲುಪಿದೆ. ಕೇಂದ್ರ ಸರ್ಕಾರವು ಅಂತರ್ಜಾಲ ಹಾಗು ತಂತ್ರಾಂಶ ಸೇವೆ ಒದಗಿಸುತ್ತಿರುವ ಹಲವಾರು ಕಂಪನಿಗಳ ಮೇಲೆ ಆಕ್ಷೇಪಾರ್ಹ ಮಾಹಿತಿಯ ನಿರ್ಬಂಧ ವಿಧಿಸಲು ಪ್ರಯತ್ನಿಸಿತ್ತು ಹಾಗು ಮುಫ್ತಿ ಐಜಾಜ್ ಅರ್ಷದ್ ಕ್ವಾಸ್ಮಿ ಎಂಬಾತ ಈ ಕಂಪನಿಗಳ ಮೇಲೆ ಆಕ್ಷೇಪಾರ್ಹ ಮಾಹಿತಿಯ ಕೇಸ್ ಹಾಕಿದ್ದ.

ಗೂಗಲ್ ಇಂಡಿಯಾ ತಾನು ಕೇವಲ ಸಾಫ್ಟ್ ವೇರ್ ಡೆವೆಲಪರ್ ಎಂದು ವಾದ ಮಾಡಿದ್ದನ್ನು ಪರಿಗಣಿಸಿದ ಕೋರ್ಟ್, ಅದೇ ಗೂಗಲ್ ಇಂಡಿಯಾ ದ ಮಾತೃ ವೆಬ್ಸೈಟ್ ಗೂಗಲ್, ಯೂಟ್ಯೂಬ್, ಆರ್ಕುಟ್, ಬ್ಲಾಗರ್ ಮೇಲಿನ ಕೇಸ್ ಹಾಗೇ ಮುಂದುವರೆಯಲಿದೆ ಎಂದು ಕೋರ್ಟ್ ತಿಳಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X