ಕ್ಯಾಮರಾ ಕ್ಲಿಕ್ ಮಾಡುವ ಮುನ್ನ ಇಲ್ಲಿ ಕ್ಲಿಕ್ ಮಾಡಿ

By Varun
|
ಕ್ಯಾಮರಾ ಕ್ಲಿಕ್ ಮಾಡುವ ಮುನ್ನ ಇಲ್ಲಿ ಕ್ಲಿಕ್ ಮಾಡಿ

ಕಣ್ಣು ತನ್ನ ಪಟಲದಲ್ಲಿ ಸೆರೆಹಿಡಿದ ದೃಶ್ಯವನ್ನು ಮನಸ್ಸು ಅಚ್ಚಳಿಯದಂತೆ ಜ್ಞಾಪಕ ಇಟ್ಟುಕೊಳ್ಳುತ್ತದೆ. ಮತ್ತೆ ಮತ್ತೆ ಬೇಕೆನಿಸಿದಾಗ ಮೆದುಳು ರಿವೈಂಡ್ ಮಾಡಿ ಮಾಡಿ ನೋಡಿಸುತ್ತದೆ ಹೊರತೂ ಕಣ್ಣ ಮುಂದೆ ಅದೇ ರೀತಿಯ ಇಮೇಜ್ ಬರುವುದಿಲ್ಲ.

ಹಾಗಾಗಿಯೇ ತಾನೇ ಅನಾದಿಕಾಲದಿಂದಲೂ ಕಣ್ಣಲ್ಲಿ ನೋಡಿದ್ದನ್ನು, ಮನಸಲ್ಲಿ ತೋಚಿದ್ದನ್ನು ದಾಖಲಿಸಲು ಚಿತ್ರ ಬಿಡಿಸುತ್ತಿದ್ದುದು. ಕಾಲ ಬದಲಾದಂತೆ ಕ್ಯಾಮರಾ ಬಂತು. ಕ್ಯಾಮರಾ ದಲ್ಲಿ ವಿವಿಧ ಕೋನಗಳಲ್ಲಿ, ಬೇರೆ ಬೇರೆ ರೀತಿಯ ವಾತಾವರಣಗಳಲ್ಲಿಯೂ ಉತ್ತಮ ಚಿತ್ರಗಳನ್ನು ತೆಗೆಯುವ ತಂತ್ರಜ್ಞಾನ ಬಂದವು.ಈಗಂತೂ ಕ್ಯಾಮರಾ ಇರುವ ಫೋನ್, ಮೊಬೈಲ್, ವಾಚ್ ಕೂಡಾ ಬಂದಿದೆ. ಹೀಗಾಗಿ ಫೋಟೋಗ್ರಫಿ ಎಂಬುದು ಕೇವಲ ಸುಲಭಕ್ಕೆ ಬೆಳೆಸಿಕೊಳ್ಳಬಹುದಾದ ಹವ್ಯಾಸವಾಗಿದೆ.

ಹೇಗೋ ಒಂದು ಹೊಳೆದಂತೆ ಚಿತ್ರ ತೆಗೆಯುತ್ತೇವೆ, ಫೇಸ್ ಬುಕ್, ಟ್ವಿಟರ್ ಗಳಲ್ಲಿ ಹಂಚಿಕೊಳ್ಳುತ್ತೇವೆ. ನೀವು ಚಿತ್ರಗಳನ್ನು ತೆಗೆಯಲು ಪ್ರೊಫೆಶನಲ್ ಫೋಟೋಗ್ರಾಫರ್ ಆಗ ಬೇಕೆಂದೇನೂ ಇಲ್ಲ. ಆದರೆ ಕೆಲವು ಬೇಸಿಕ್ಸ್ ಕಲಿತರೆ ಚಿತ್ರ ತೆಗೆಯುವ ಮಜಾ ಇನ್ನಷ್ಟು ಹೆಚ್ಚುತ್ತದೆ. ಹಾಗಾಗಿ ನಮ್ಮಂತಹವರಿಗೆ ಎಂತಲೇ ಇಂಟರ್ನೆಟ್ ನಲ್ಲಿ ಫೋಟೋಗ್ರಫಿ ಬಗ್ಗೆ ತಿಳಿದುಕೊಳ್ಳಲು, ಅದರ ತಾಂತ್ರಿಕ ಅಂಶಗಳನ್ನು ಹೇಳಿಕೊಡುವ ವೆಬ್ಸೈಟ್ (ಬ್ಲಾಗ್)ಒಂದಿದೆ.

ಅದರ ಮೂಲಕ ಸುಲಭವಾಗಿ ನೀವು ಫೋಟೋ ಆಂಗಲ್, ಚಿತ್ರ ತೆಗೆಯುವ ಟಿಪ್ಸ್, ಉದಾಹರಣೆಗಳ ಮೂಲಕ ಪ್ರತಿಯೊಂದು ಚಿತ್ರದ ವಿವರಣೆ, ಫೋಟೋ ಎಡಿಟಿಂಗ್ ಮಾಡುವ ತಂತ್ರಾಂಶಗಳ ವಿವರಣೆ , ಕ್ಯಾಮರಾ ಸಾಧನಗಳ ಲಭ್ಯತೆ ಬಗ್ಗೆ ತಿಳಿಸಿಕೊಡುವ ಫೋಟೋಗ್ರಫಿಕ್ ಬ್ಲಾಗ್, ಮೂಲಕ ನೀವು ಕಲಿಯಬಹುದು.

ಈಗ ವೆಬ್ಸೈಟ್ ಕ್ಲಿಕ್ ಮಾಡಿ ನಂತರ ಕ್ಯಾಮರಾ ಕ್ಲಿಕ್ ಮಾಡಿ :)

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X