Subscribe to Gizbot

ಚಾರ್ಲಿ ಚಾಪ್ಲಿನ್ ನ ಹುಟ್ಟು ಹಬ್ಬ ಮರೆತ ಗೂಗಲ್

Posted By: Varun
ಚಾರ್ಲಿ ಚಾಪ್ಲಿನ್ ನ ಹುಟ್ಟು ಹಬ್ಬ ಮರೆತ ಗೂಗಲ್

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರನ್ನೂ ನಕ್ಕು ನಲಿಸಿದ ಮಹಾನ್ ನಟ ಹಾಗು ನಿರ್ದೇಶಕ ಚಾರ್ಲಿ ಚಾಪ್ಲಿನ್ ಬದುಕಿದ್ದರೆ ಇಂದಿಗೆ 123 ವರ್ಷ.

ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಜಗತ್ತಿನ ಸಾಧಕರ ಜನ್ಮ ದಿನಾಂಕದಂದು ತನ್ನದೇ ಆದ ಡೂಡಲ್ ಮೂಲಕ ಅವರಿಗೆ ಶುಭಾಷಯ ಹೇಳುವುದರ ಜೊತೆ, ಆ ವ್ಯಕ್ತಿಗಳ ಸಾಧನೆಯನ್ನು ನಮಗೆ ಪರಿಚಯ ಮಾಡಿಕೊಡುತ್ತಿತ್ತು.

ಕಳೆದ ವಾರವಷ್ಟೇ ಗೂಗಲ್, ಫ್ರಾನ್ಸ್ ನ ಫೋಟೋಗ್ರಫರ್ ರಾಬರ್ಟ್ಡ್ವಾನೂ ನ ಡೂಡಲ್ ಮಾಡಿತ್ತು. ಆದರೆ ಆನ್ಲ್ಲೈನ್ ನ ಸಾಕಷ್ಟು ಮಂದಿಗೆ ಅವರ ಬಗ್ಗೆ ಗೊತ್ತೇ ಇರಲಿಲ್ಲ. ಅಂತಹುದರಲ್ಲಿ ಗೂಗಲ್ ವಿಶ್ವವಿಖ್ಯಾತ ಚಾಪ್ಲಿನ್ ಅನ್ನು ಮರೆಯಬಾರದಿತ್ತು.

ಕೇಳದ ವರ್ಷ ಚಾಪ್ಲಿನ್ ನ ಜನ್ಮದಿನದ (ಏಪ್ರಿಲ್ 16) ಒಂದು ದಿನ ಮೊದಲೇ ಚಾಪ್ಲಿನ್ ನ ಡೂಡಲ್ ಪ್ರಕಟಿಸಿತ್ತು.ಅದ್ಯಾಕೆ ಮರೆತು ಹೋಯ್ತೋ ಗೊತ್ತಿಲ್ಲ. ಹೋಗಲಿ ಬಿಡಿ ಕಳೆದ ವರ್ಷದ ಡೂಡಲ್ ಅನ್ನೇ ಮತ್ತೆ ನೋಡಿ ಚಾಪ್ಲಿನ್ ಗೆ ಶುಭಾಷಯ ಹೇಳೋಣ.

 

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot