Subscribe to Gizbot

ಗೂಗಲ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಬೇಗ ಬರಲಿದೆ

Posted By: Varun
ಗೂಗಲ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಬೇಗ ಬರಲಿದೆ

ಆನ್ಲೈನ್ ಜಗತ್ತಿನ ದೈತ್ಯ ಕಂಪನಿ ಗೂಗಲ್, ತನ್ನ ಉತ್ಪನ್ನವಾದ ಆಂಡ್ರಾಯ್ಡ್ ತಂತ್ರಾಂಶವನ್ನು ಬಳಸಿಕೊಂಡು ತನ್ನದೇ ಆದ ಟ್ಯಾಬ್ಲೆಟ್ ಒಂದನ್ನು ಜೂನ್ ವೇಳೆಗೆ ಹೊರತರಲಿದೆ ಎಂದು ಗೂಗಲ್ ನ ಸಿ.ಇ.ಒ ಲ್ಯಾರಿ ಪೇಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಲ್ಯಾರಿ, ತಮ್ಮ ಕಂಪನಿ ಕಡಿಮೆ ಬಜೆಟ್ ನ ಟ್ಯಾಬ್ಲೆಟ್ ಮೇಲೆ ಗಮನ ಕೇಂದ್ರೀಕರಿಸಿದ್ದು, ತಾನು 10,000 ರೂಪಾಯಿ ಒಳಗಿನ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳು ಸಿಗುತ್ತಿದ್ದು, ಕೇವಲ ಆಂಡ್ರಾಯ್ಡ್ ಎಂದ ಮಾತ್ರಕ್ಕೆ ಅವುಗಳ ಗುಣಮಟ್ಟ ಚೆನ್ನಾಗಿದೆ ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಗೂಗಲ್ ನ ಈ ಬೆಳವಣಿಗೆ ಟ್ಯಾಬ್ಲೆಟ್ ಅನ್ನು ಖರೀದಿ ಮಾಡುವವರಿಗೆ ಒಳ್ಳೆ ಸುದ್ದಿ. ಅಂದ ಹಾಗೆ ಗೂಗಲ್ ನ ಈ ಆಂಡ್ರಾಯ್ಡ್ ಟ್ಯಾಬ್ಲೆಟ್ ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ ಇರಲಿದ್ದು, 7 ಇಂಚ್ ಡಿಸ್ಪ್ಲೇ, ಕ್ವಾಡ್ ಕೋರ್ ಪ್ರಾಸೆಸರ್ ಹಾಗು ವೈ-ಫೈ ಅಂತರ್ಜಾಲದ ಸಂಪರ್ಕ ಇರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot