ಭಾರತದ ಮೊದಲ ವಿಶ್ವ ಐಟಿ ಸಮ್ಮೇಳನ

Posted By: Varun
ಭಾರತದ ಮೊದಲ ವಿಶ್ವ ಐಟಿ ಸಮ್ಮೇಳನ

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ವಿಶ್ವ ಮಾಹಿತಿ ತಂತ್ರಜ್ಞಾನ ಸಮ್ಮೇಳನ (ವಿಟ್‌ಫಾರ್) ಮಂಗಳವಾರ ನಡೆಯಲಿದೆ.

ದಕ್ಷಿಣ ಕೊರಿಯಾ, ಕೆನಡಾ, ನೈಜೀರಿಯಾ, ಕೀನ್ಯಾ, ಮಲೇಷಿಯಾ, ಇಸ್ಟೋನಿಯಾ, ಮೊಲ್ಡೊವಾದ ಪ್ರಮುಖ ಹಿರಿಯ ಆಡಳಿತಾಧಿಕಾರಿಗಳು ಮತ್ತು ತಂತ್ರಜ್ಞರು ಒಗ್ಗೂಡಲಿರುವ ಈ ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳು ಭಾಗವಹಿಸಲಿರುವುದಾಗಿ ಪ್ರಕಟಣೆ ತಿಳಿಸಿದೆ.

ಮುಂದಿನ ದಿನಗಳಲ್ಲಿ ಆಯಾ ದೇಶಗಳ ವ್ಯವಹಾರಿಕ ಒಪ್ಪಂದಗಳನ್ನು ಮತ್ತಷ್ಟು ವೃದ್ದಿಸುವ ನಿಟ್ಟಿನಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಸಭೆ ಮಹತ್ವವೆನಿಸಿದೆ. ಮಂಗಳವಾರ ಆರಂಭವಾಗಲಿರುವ ತಂತ್ರಜ್ಞರ ಸಮಾಗಮ ಸಮಾವೇಶ ವಿಟ್‌ಫಾರ್‌ನ್ನು ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು ಉದ್ಘಾಟಿಸಲಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot