ರಾಜ್ಯದಲ್ಲಿ 1.05 ಕೋಟಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಅರ್ಜಿ ಬಾಕಿ
ಮೊಬೈಲ್ ನಂಬರ್ ಪೋರ್ಟೆಬಿಲಿಟಿ ವ್ಯವಸ್ಥೆ ಬಂದ ಮೇಲೆ ದೇಶದಲ್ಲಿ ಬಹಳಷ್ಟು ಗ್ರಾಹಕರಿಗೆ ಲಾಭವಾಗಿದೆ. ಆದರೆ ರಾಜ್ಯದಲ್ಲಿ ನಂಬರ್ ಪೋರ್ಟೆಬಿಲಿಟಿಗೆ ಸಲ್ಲಿಸಿದ 1.05 ಕೋಟಿ ಅರ್ಜಿಗಳು ಇನ್ನೂ ಬಾಕಿ ಇದೆಯಂತೆ. ದೇಶದಲ್ಲಿ ಒಟ್ಟು 8.97 ಕೋಟಿ ಅರ್ಜಿಗಳು ಇನ್ನೂ ಇತ್ಯರ್ಥಗೊಂಡಿಲ್ಲ ಎನ್ನುವ ಅಂಶ ಇದೀಗ ಬಹಿರಂಗಗೊಂಡಿದೆ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಾರ, ಮಾರ್ಚ್ ಒಂದೇ ತಿಂಗಳಲ್ಲಿ 27 ಲಕ್ಷ ಹೊಸ ಮನವಿಗಳು ಗ್ರಾಹಕರಿಂದ ದಾಖಲಾಗಿದೆ. ಕರ್ನಾಟಕದ ಬಳಿಕ ರಾಜಸ್ಥಾನದಲ್ಲಿ 85.5 ಲಕ್ಷ ಅರ್ಜಿಗಳು ದಾಖಲಾಗಿದೆ.ಮುಂಬೈಯಲ್ಲಿ 33.3 ಲಕ್ಷ, ದೆಹಲಿಯಲ್ಲಿ 29.64 ಲಕ್ಷ ಮತ್ತು ಕೋಲ್ಕತಾದಲ್ಲಿ 20 ಲಕ್ಷ ಅರ್ಜಿಗಳು ಬಾಕಿ ಇದೆ ಎಂದು ತಿಳಿಸಿದೆ.

ಪೋರ್ಟೆಬಿಲಿಟಿ ಬಂದ ಮೇಲೆ ವಲಸೆ ರೂಪದಲ್ಲಿ ಅರ್ಜಿಗಳು ದಾಖಲಾದ್ದರಿಂದ ಈ ಅರ್ಜಿಗಳನ್ನುವಿಲೇವಾರಿ ಮಾಡಲು ವಿಳಂಬವಾಗುತ್ತಿದೆ ಎಂದು ಟ್ರಾಯ್‌ಗೆ ಮೊಬೈಲ್ ಕಂಪೆನಿಗಳು ತಿಳಿಸಿವೆ.ರಾಷ್ಟ್ರೀಯ ಮೊಬೈಲ್ ನಂಬರ್ ಪೋರ್ಟೆಬೆಲಿಟಿ (ಎಮ್‌ಎನ್‌ಪಿ) ನಿಯಮಾವಳಿ ಪ್ರಕಾರ, ಒಂದು ವೇಳೆ ಮೊಬೈಲ್ ಕಂಪನಿಗಳು ನಂಬರ್ ಪೋರ್ಟೆಬಿಲಿಟಿಗೆ ನಿರಾಕರಿಸಿದ್ದಲ್ಲಿ ದಂಡ ವಿಧಿಸಬಹುದು. ಆದರೆ ಇದುವರೆಗೂ, ಯಾವ ಕಂಪನಿಗಳಿಗೂ, ಪೋರ್ಟೆಬಿಲಿಟಿ ವಿಳಂಬಿಸಿದ್ದಕ್ಕೆ ದಂಡ ವಿಧಿಸಲಾಗಿಲ್ಲ ಎಂದು ಫಸ್ಟ್‌ಫೋಸ್ಟ್.ಕಾಂ ವರದಿ ತಿಳಿಸಿದೆ.
ನೀವು ಈಗ ಬಳಸುವ ಸಿಮ್ ನಂಬರ್‌ನ್ನು ಬದಲಾಯಿಸದೇ ಸೇವಾ ಕಂಪೆನಿಯನ್ನು ಬದಲಾಯಿಸಿ ಅದೇ ನಂಬರ್‌ನ್ನು ಉಳಿಸಿಕೊಳ್ಳವ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ವ್ಯವಸ್ಥೆ 2011 ಜ.20ರಿಂದ ಭಾರತದಲ್ಲಿ ಜಾರಿಗೆ ಬಂದಿದೆ. ಕೇವಲ 19 ರೂಪಾಯಿ ಖರ್ಚು ಮಾಡಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಮಾಡಬಹುದು.
ಇದನ್ನೂ ಓದಿ : ಮೊಬೈಲ್ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?


Click it and Unblock the Notifications